ಕನಕಪುರ: ಕಲೆ, ಸಂಸ್ಕೃತಿ ಹಾಗೂ ಸಂಗೀತಕ್ಕೆ ಇರುವ ಬೆಲೆ ಹಣಕ್ಕಿಲ್ಲ ಎಂಬ ಮಾತು ನೂರಕ್ಕೆ ನೂರು ಸತ್ಯ. ಕಲೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಕೊಡುವ ಶಕ್ತಿ ಇದೆ ಎಂದು ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು
ಕನಕಪುರ: ಕಲೆ, ಸಂಸ್ಕೃತಿ ಹಾಗೂ ಸಂಗೀತಕ್ಕೆ ಇರುವ ಬೆಲೆ ಹಣಕ್ಕಿಲ್ಲ ಎಂಬ ಮಾತು ನೂರಕ್ಕೆ ನೂರು ಸತ್ಯ. ಕಲೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಕೊಡುವ ಶಕ್ತಿ ಇದೆ ಎಂದು ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.
ಅಂಬೇಡ್ಕರ್ ಭವನದಲ್ಲಿ ನವ್ಯ ನೃತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಶ್ರೀ ಲಹರಿಕ ನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಒತ್ತಡದಲ್ಲಿದ್ದಾಗ ಮಧುರವಾದ ಹಾಡು ಕೇಳುವುದು, ಭರತನಾಟ್ಯ ನೋಡಿದರೆ ಮನಸ್ಸಿಗೆ ಮುದ ನೀಡುತ್ತವೆ ಎಂದು ಹೇಳಿದರು. ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮದಿಂದ ಬಂದಿರುವ ಕಲೆ, ಸಂಸ್ಕೃತಿ ಹಾಗೂ ಸಂಗೀತ ನಮ್ಮ ನಾಡಿನ ಹೆಮ್ಮೆ. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದರು. ನೃತ್ಯ ಶಾಲೆಯ 10ಕ್ಕೂ ಹೆಚ್ಚು ತಂಡಗಳು ಕಂಸಾಳೆ, ಸಿದ್ದಪ್ಪಾಜಿ, ಧರಣಿ ಮಂಡಲ ಮಧ್ಯದೊಳಗೆ, ಶಿವತಾಂಡವ, ರಾಮಭಜನೆಯಂತಹ ಅನೇಕ ಹಾಡುಗಳಿಗೆ ನೃತ್ಯ ರೂಪಕ ನಡೆಸಿಕೊಟ್ಟರು. ಪ್ರೇಕ್ಷಕರ ಮನಸೂರೆಗೊಂಡರು.ಕಾರ್ಯಕ್ರಮದಲ್ಲಿ ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿ, ಬೆಂಗಳೂರು ಕಬ್ಬನ್ ಪಾರ್ಕ್ ಎಸಿಪಿ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ, ನೃತ್ಯ ನಿರ್ದೇಶಕಿ ಕಾವ್ಯ ದಿಲೀಪ್, ನಾಟಕ ನಿರ್ದೇಶಕ ಜಗದೀಶ್ವರಚಾರ್ಯ, ನೃತ್ಯ ಶಾಲೆಯ ಕೆ.ಎಂ.ನವ್ಯಶ್ರೀ, ಕಲ್ಪನಾ, ಮಹದೇವಪ್ರಸಾದ್ ಇತರರು ಭಾಗವಹಿಸಿದ್ದರು.
ಕೆ ಕೆ ಪಿ ಸುದ್ದಿ 01( 02)ಕನಕಪುರದಲ್ಲಿ ನವ್ಯ ನೃತ್ಯ ಅಕಾಡೆಮಿ ನೃತ್ಯ ಶಾಲೆ ಹಮ್ಮಿಕೊಂಡಿದ್ದ ಶ್ರೀ ಲಹರಿಕಾ ಸಮಾರಂಭದಲ್ಲಿ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿ, ಪ್ರಿಯದರ್ಶಿನಿ, ಕಲ್ಪನಾ ಮಹದೇವ ಪ್ರಸಾದ್ ಪಾಲ್ಗೊಂಡಿದ್ದರು.