ಸಾರಾಂಶ
ಉಪ್ಪಾರ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಂಘಟನೆ ಹಾಗೂ ಹೋರಾಟದ ಮೂಲಕ ಸಮಾಜ ಕಟ್ಟಿ ಬೆಳೆಸಬೇಕು. ಭಗೀರಥರು ಮಹಾನ್ ತಪಸ್ವಿಯಾಗಿದ್ದು, ಗಂಗೆಯನ್ನು ಧರೆಗೆ ತಂದು 60 ಸಾವಿರ ತಾತಂದಿರಿಗೆ ಮೋಕ್ಷ ಕೊಡಿಸಿದಂತಹ ಮಹಾನ್ ಪುರುಷರಾಗಿದ್ದಾರೆ.
ಕುಕನೂರು:
ಅಸಾಧ್ಯ ಎನ್ನುವ ಕೆಲಸ ಮಾಡುವುದೇ ಭಗೀರಥ ಪ್ರಯತ್ನ. ಭಗೀರಥರು ಛಲಬಿಡದೆ ತಪಸ್ಸು ಮಾಡಿ ಗಂಗೆಯನ್ನು ಶಿವನ ಜಡೆಯಿಂದ ಧರೆಗೆ ತಂದ ಮಹಾನ್ ಪುರುಷರಾಗಿದ್ದಾರೆ ಎಂದು ಯುವ ಮುಖಂಡ ಮುತ್ತುರಾಜ ದೇವರಮನಿ ಹೇಳಿದರು.ತಾಲೂಕಿನ ಮಸಬಹಂಚಿನಾಳದಲ್ಲಿ ಭಗೀರಥ ಮಹರ್ಷಿ ವೃತ್ತ ಉದ್ಘಾಟಿಸಿ ಮಾತನಾಡಿದ ಅವರು, ಉಪ್ಪಾರ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಂಘಟನೆ ಹಾಗೂ ಹೋರಾಟದ ಮೂಲಕ ಸಮಾಜ ಕಟ್ಟಿ ಬೆಳೆಸಬೇಕು. ಭಗೀರಥರು ಮಹಾನ್ ತಪಸ್ವಿಯಾಗಿದ್ದು, ಗಂಗೆಯನ್ನು ಧರೆಗೆ ತಂದು 60 ಸಾವಿರ ತಾತಂದಿರಿಗೆ ಮೋಕ್ಷ ಕೊಡಿಸಿದಂತಹ ಮಹಾನ್ ಪುರುಷರಾಗಿದ್ದಾರೆ ಎಂದರು.ಜೀವನದಲ್ಲಿ ಗುರಿ ಇದ್ದು ಸಾಧಿಸುವ ಛಲ ಇರಬೇಕು. ಪೋಷಕರು ಮಕ್ಕಳಿಗೆ ಶಿಕ್ಷಣ, ನೈತಿಕತೆ ನೀಡುವ ಜತೆಗೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದ ಅವರು, ಭಗೀರಥರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಮುದಿಯಣ್ಣ ದೇವರಮನಿ, ಚಿದಾನಂದಪ್ಪ ದೇವರಮನಿ, ಕನಕಪ್ಪ ದೇವರಮನಿ, ಗುರಪ್ಪ ದೇವರಮನಿ, ಚಿದಾನಂದಪ್ಪ ದೇವರಮನಿ, ಶಿವಪ್ಪ ದೇವರಮನಿ, ಯಂಕಣ್ಣ ದೇವರಮನಿ, ನಾರಾಯಣಪ್ಪ ದೇವರಮನಿ, ಶರಣಪ್ಪ ದೇವರಮನಿ, ಯಂಕಪ್ಪ ದೇವರಮನಿ, ರಮೇಶ ದೇವರಮನಿ, ಉಮೇಶ ದೇವರಮನಿ, ಆನಂದ ದೇವರಮನಿ, ಮಂಜುನಾಥ ದೇವರಮನಿ, ರಾಜು ಅಳಕಟ್ಟಿ, ಅನೂಪ ಕೋರಿ, ಅಭಿಷೇಕ ದೇವರಮನಿ, ಯಮನೂರಪ್ಪ ದೇವರಮನಿ, ಮತ್ತು, ಮಂಜುನಾಥ್ ಹಳ್ಳದ, ತಿಪ್ಪಣ್ಣ ದೇವರಮನಿ, ಮಹೇಶ್ ದೇವರಮನಿ, ಹನುಮಂತ ದೇವಪ್ಪ ದೇವರಮನಿ, ಮಂಜುನಾಥ ಬಾಳಪ್ಪ ದೇವರಮನಿ, ಈರಪ್ಪ ದೇವರಮನಿ, ಜಗದೀಶ್ ದೇವರಮನಿ, ಹುಚ್ಚೀರಪ್ಪ ದೇವರಮನಿ ಇದ್ದರು.