ವಿಜ್ಞಾನವು ಎಲ್ಲ ರಂಗಗಳಲ್ಲಿ ತನ್ನ ಹಸ್ತವನ್ನು ಚಾಚಿದೆ. ವಿಜ್ಞಾನವು ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂಪರಿಸರ ಪ್ರೇಮವನ್ನು ಬೆಳೆಸುವಂತೆ ಮಾಡಬೇಕು.

ಲಕ್ಷ್ಮೇಶ್ವರ: ವಿಜ್ಞಾನ ಕಠಿಣ ಎನ್ನುವ ಮನೋಭಾವ ಹೊಂದಿರುವುದು ಸರಿಯಲ್ಲ. ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವನ್ನು ಮಾಡಬೇಕಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನವು ನಿತ್ಯ ಜೀವನದಲ್ಲಿ ಮಾನವೀಯ ಗುಣಗಳನ್ನು ಹಾಗೂ ಪರಿಸರಪ್ರೇಮವನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಧಾರವಾಡದ ಐಐಟಿಯ ಡೀನ್ ಪ್ರೊ. ಎಸ್.ಎಂ. ಶಿವಪ್ರಸಾದ ತಿಳಿಸಿದರು.

ಪಟ್ಟಣದ ಚಂದನ ಶಾಲೆಯಲ್ಲಿ ನಡೆಯುತ್ತಿರುವ ವಿಜ್ಞಾನ ವಿಸ್ತೃತ ಕಾರ್ಯಕ್ರಮ 2ನೇ ದಿನವಾದ ಭಾನುವಾರ ಮಾತನಾಡಿದರು.

ವಿಜ್ಞಾನವು ಎಲ್ಲ ರಂಗಗಳಲ್ಲಿ ತನ್ನ ಹಸ್ತವನ್ನು ಚಾಚಿದೆ. ವಿಜ್ಞಾನವು ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂಪರಿಸರ ಪ್ರೇಮವನ್ನು ಬೆಳೆಸುವಂತೆ ಮಾಡಬೇಕು. ನ್ಯೂಟನ್ ನಿಯಮ, ಥಾಮಸ್ ಆಲ್ವಾ ಎಡಿಸನ್ ನಿಯಮ, ಬೆಳಕಿನ ವೇಗ, ಗುರುತ್ವಾಕರ್ಷಣೆಯ ಬಲ, ಗಾಳಿಯ ವೇಗ, ಸೂರ್ಯ ಮತ್ತು ಆಕಾಶ ಕಾಯಗಳ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸರಳ ರೀತಿಯಲ್ಲಿ ಉತ್ತರಿಸಿದರು.

ಜವಾಹರ ನೆಹರು ವಿಜ್ಞಾನ ಕೇಂದ್ರದ ಪ್ರೊ. ವಿನಾಯಕ ಪತ್ತಾರ ಅವರು, ನಿತ್ಯ ಜೀವನದಲ್ಲಿ ಮಾನವ ವಿಜ್ಞಾನದೊಂದಿಗೆ ಹೇಗೆ ಜೀವಿಸುತ್ತಾನೆ ಎಂಬ ಕುರಿತು ವೈಜ್ಞಾನಿಕ ಪ್ರಯೋಗಗಳ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟರು. ಬೆಳಕಿನ ಚದುರುವಿಕೆ, ಬೆಳಕಿನ ಬದಲಾವಣೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಡಾ. ಪ್ರತಾಪ್ ವಿಷ್ಣೋಯಿ ಅವರು ರಸಾಯನ ಶಾಸ್ತ್ರದ ಪ್ರಯೋಗಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ವಿಜ್ಞಾನ ವಿಸ್ತೃತ ಕಾರ್ಯಕ್ರಮದ ಲಾಭ ಪಡೆದುಕೊಂಡರು. ಈ ವೇಳೆ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಭಾಗವಹಿಸಿದ್ದರು.