ಸಿಡಿಲು ಬಡಿದು ಆಟೋಮೊಬೈಲ್‌ ಗೋದಾಮು ಭಸ್ಮ

| Published : Jun 03 2024, 12:31 AM IST

ಸಾರಾಂಶ

ಸಿಡಿಲು ಬಡಿದು ಆಟೋಮೊಬೈಲ್‌ ಗೋದಾಮು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, 8 ಲಕ್ಷ ರು. ವಸ್ತುಗಳು ನಾಶವಾದ ಘಟನೆ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆಡಿದೆ.

ಮಧುಗಿರಿ: ಸಿಡಿಲು ಬಡಿದು ಆಟೋಮೊಬೈಲ್‌ ಗೋದಾಮು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, 8 ಲಕ್ಷ ರು. ವಸ್ತುಗಳು ನಾಶವಾದ ಘಟನೆ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆಡಿದೆ.

ಟಿ.ರಂಗಣ್ಣ ಎಂಬಾತನಿಗೆ ಸೇರಿದೆ ಗೋದಾಮು ಎನ್ನಲಾಗಿದೆ. ಪಟ್ಟಣದಲ್ಲಿ ವೀಪರಿತ ಗಾಳಿ, ಗುಡುಗು, ಸಿಡಿಲು, ಮಿಂಚು ಸಹಿತ ಮಳೆ ಶನಿವಾರ ರಾತ್ರಿ ಸುರಿದ ಪರಿಣಾಮ ಎಸಿ ಕಚೇರಿ ಮುಂಭಾಗದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ನಂತರ ಸಮೀಪದಲ್ಲಿರುವ ಆಟೋಮೊಬೈಲ್‌ ಗೋದಾಮಿಗೆ ಬೆಂಕಿ ತಗುಲಿದೆ. ಇದರಿಂದಾಗಿ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬೆಳಿಗ್ಗೆ ಗೋದಾಮಿನ ಬಾಗಿಲು ತೆಗೆದಾಗ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋದಾಮಿನಲ್ಲಿನ ಸುಮಾರು 8 ಲಕ್ಷ ರು. ಆಟೋಮೊಬೈಲ್‌ ವಸ್ತುಗಳು ಸಂಪೂರ್ಣ ಸುಟ್ಟು ನಾಶವಾಗಿವೆ ಎನ್ನಲಾಗಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ತಹಸೀಲ್ದಾರ್‌ ಅವರಿಗೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡುವಂತೆ ಆಟೋಮೊಬೈಲ್‌ ಮಾಲೀಕ ಟಿ.ರಂಗಣ್ಣ ಮನವಿ ಮಾಡಿದ್ದಾರೆ.