ಕಲಬುರಗಿ ಜನಮನ ಸೆಳೆದ ಬಸವಪ್ರಭ ಸಂಚಿಕೆ

| Published : May 16 2024, 12:46 AM IST

ಸಾರಾಂಶ

ಕನ್ನಡಪ್ರಬ ಬಳಗದವರು ಹೊರತಂದಿರುವ ಬಸವಪ್ರಭ ವಿಶೇಷ ಸಂಚಿಕೆಯ ಮೂಲಕ 12ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರ ತತ್ವಗಳು ಜನಮನಕ್ಕೆ ಇನ್ನೂ ಹೆಚ್ಚು ಹತ್ತಿರವಾದವು ಎಂದು ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಮೆಚ್ಚುಗೆ ನುಡಿಗಳನ್ನಾಡಿದರು.

ಕನ್ನಡಪ್ರ ವಾರ್ತೆ ಕಲಬುರಗಿ

ಕನ್ನಡಪ್ರಬ ಬಳಗದವರು ಹೊರತಂದಿರುವ ಬಸವಪ್ರಭ ವಿಶೇಷ ಸಂಚಿಕೆಯ ಮೂಲಕ 12ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರ ತತ್ವಗಳು ಜನಮನಕ್ಕೆ ಇನ್ನೂ ಹೆಚ್ಚು ಹತ್ತಿರವಾದವು ಎಂದು ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಮೆಚ್ಚುಗೆ ನುಡಿಗಳನ್ನಾಡಿದರು.

ಬಸವ ಜಯಂತಿ ಅಂಗವಾಗಿ ಕನ್ನಡಪ್ರಭ ಹೊರತಂದಿರುವ ಬಸವಪ್ರಭ ವಿಶೇಷ ಸಂಚಿಕೆಯನ್ನು ದಾಸೋಹ ಮಹಾ ಮನೆಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಸವಣ್ಣನವರು 12 ನೇ ಶತಮಾನದಲ್ಲಿಯೇ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದವರು. ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದವರು. ಇಂದಿನ ಪಳಿಗೆಗೆ ಇಂತಹ ಮಹಾತ್ಮರ ಕಾರ್ಯಗಳು ಸದಾ ನೆನಪಿರಬೇಕು. ಅಂತಹ ಕೆಲಸ ಪತ್ರಿಕೆಯವರು ಮಾಡಿದ್ದೀರಿ ಎಂದು ಕನ್ನಡಪ್ರಭ ಸಂಚಿಕೆಯನ್ನು ಹೊಗಳಿದರು.

ಸಿಚಂಕೆಯಲ್ಲಿ ಮಡಿ ಬಂದಿರುವ ಪ್ರತಿಯೊಂದು ಲೇಖನ ಬಸವೇಶ್ವರರ ಕುರಿತಂತೆ ತುಂಬ ಮಾಹಿತಿಗಳನ್ನು ಓದುರಿಗೆ ನೀಡಿದೆ. ಇಂತಹ ಕೆಲಸಕ್ಕಾಗಿತಾವು ದಾಸೋಹ ಪೀಠದ ಪರವಾಗಿ ಕನ್ನಡಪ್ರಭ ತಂಡಕ್ಕೆ ಶುಭ ಹಾರೈಸೋದಾಗಿಯೂ ಮಾತೋಶ್ರಿಯವರು ಹೇಳಿದರು.

ಮಹಾ ದಾಸೋಹ 9 ನೇ ಪೀಠಾಧಿಪತಿಗಳಾದ ಚಿ. ದೊಡ್ಡಪ್ಪ ಅಪ್ಪಾಜಿಯವರು ಉಪಸ್ಥಿತರಿದ್ದು ಬಸವಪ್ರಭ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಹರಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಸಿದ್ದ ಕನ್ನಡಪ್ರಭ ಪತ್ರಿಕೆಯ ಸಂಪಾದಕ ಸಮನ್ವಯ ವಿಶೇಷ ಸಂಚಿಕೆ ಬಿವಿ ಮಲ್ಲಿಕಾರ್ಜುನಯ್ಯ ಅವರು ಮಾತನಾಡುತ್ತ ಕನ್ನಡಪ್ರಭ ಸದಾಕಾಲ ಹೊಸತನದೊಂದಿಗೆ ಜನರ ಮುಂದೆ ಬರುವುದನ್ನು ಮೈಗೂಡಿಸಿಕೊಂಡು ಬಂದಿದೆ. ಪತ್ರಿಕೆಯ ಹೊಸ ಪ್ರಯತ್ನಗಳಿಗೆ ಕಲಬುರಗಿಯ ಮಹಾ ದಾಸೋಹ ಪೀಠದಿಂದ ಸದಾಕಾಲ ಬೆಂಬಲ ಇದೆ ಎಂದು ಹೇಳುತ್ತ ಬಸವೇಶ್ವರರನ್ನು ಹೊಸ ರೂಪದಲ್ಲಿ ಪರಿಚಯಿಸಲು ಉದ್ದೇಶದಿಂದ ಬಸವ ಪ್ರಭ ಹೊರತಂದಿರೋದಾಗಿ ಹೇಳಿದರು.

ಕನ್ನಡಪ್ರಭ ಕಲ್ಯಾಣ ಕರ್ನಾಟಕ ಬ್ಯೂರೋ ಮುಖ್ಯಸ್ಥರಾದ ಅಪ್ಪಾರಾವ ಸೌದಿ, ಕನ್ನಡಪ್ರಭ ಕಲಬುರಗಿ ಕಚೇರಿಯ ಜಾಹೀರಾತು, ಪ್ರಸರಣ, ಲೆಕ್ಕ ವಿಭಾಗ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕನ್ನಡಪ್ರಭ ಕಲಬುರಗಿ ಜಿಲ್ಲೆಯ ವಿಶೇಷ ಪ್ರತಿನಿಧಿ ಶೇಷಮೂರ್ತಿ ಅವಧಾನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಲಬುರಗಿ ಜನಮನ ಸೆಳೆದ ಬಸವ ಪ್ರಭ ಸಂಚಿಕೆ: ಕನ್ನಡಪ್ರಭ ಹೊರ ತಂದಿರುವ ಬಸ ಪ್ರಭ ವಿಶೇಷ ಸಂಚಿಕೆ ಕಲಬುರಗಿಯಲ್ಲಿ ಜನಮನ ಸೆಳೆದಿದೆ. ಅದರಲಲೂ ಬಸವ ಭಕ್ತರೆಲ್ಲರೂ ಸಂಚಿಕೆಯನ್ನು ಕಂಡು ಓದಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅನೇಕರು ಪತ್ರಿಕೆಯ ಕಚೇರಿಗೆ ಕರೆ ಮಾಡಿ ಹೊರ ತಂದಿರುವ ಬಸವಪ್ರಭ, ಅದರಲ್ಲಿನ ಲೇಖನಗಳು ತುಂಬ ಚಿಂತನಪೂರ್ಣವಾಗಿವೆ ಎಂದು ಅಭಿನಂದಿಸಿದ್ದಾರೆ.

ಕಲಬುರಗಿಯ ಗಂಜ್ ನಿವಾಸಿ ಪತ್ರಿಕೆ ಓದುಗ ರೇವಪ್ಪ ಮೂಲಗೆ ಈ ಬಗ್ಗೆ ಪತ್ರಿಕೆಗೆ ಲಿಖಿತವಾಗಿ ಅಭಿಪ್ರಾಯ ತಿಳಿಸಿದ್ದು ಲೇಖನಗಳೆಲ್ಲವೂ ವಿಚಾರ ಪ್ರಚೋದಕವಾಗಿವೆ. ಕೃತಿ ಓದಲು ತುಂಬ ಖುಷಿಯಾಯ್ತು ಎಂದು ಪತ್ರಿಕೆಯ ಬಳಗಕ್ಕೆ ಅಭಿನಂದಿಸಿದ್ದಾರೆ. ಜಿಲ್ಲೆಯ ಕಮಲಾಪುರದಲ್ಲಿಯೂ ಬಸವಪ್ರಭ ಲ್ಲಿನ ಭಸವ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.