ಸಾರಾಂಶ
ಗ್ರಾಮೀಣ ಪ್ರದೇಶದಲ್ಲಿ ಆದಾಯ ಕಡಿಮೆ ಇದ್ದು ಖರ್ಚು ಹೆಚ್ಚಾಗಿ ಇರುತ್ತದೆ, ಗ್ರಾಮೀಣ ಮಹಿಳೆಯನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ ಹೆಗ್ಗಡೆಯವರ ಮೂಲ ಆಶಯವಾಗಿದೆ ಎಂದು ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಮಮತಾ ರಾವ್ ಹೇಳಿದರು. ಪ್ರತಿವಾರದಲ್ಲಿ ತಮ್ಮ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಉಳಿಸುತ್ತಾ ಬಂದಿರುವ ಸದಸ್ಯರು ತಮ್ಮ ಆರ್ಥಿಕ ಸುಧಾರಣೆಯಲ್ಲಿ ತೊಡಗಿದ್ದಾರೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಗ್ರಾಮೀಣ ಪ್ರದೇಶದಲ್ಲಿ ಆದಾಯ ಕಡಿಮೆ ಇದ್ದು ಖರ್ಚು ಹೆಚ್ಚಾಗಿ ಇರುತ್ತದೆ, ಗ್ರಾಮೀಣ ಮಹಿಳೆಯನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ ಹೆಗ್ಗಡೆಯವರ ಮೂಲ ಆಶಯವಾಗಿದೆ ಎಂದು ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಮಮತಾ ರಾವ್ ಹೇಳಿದರು.ಶ್ರೀ ಕ್ಷೇತ್ರದಲ್ಲಿ ಇದೇ 26 ರಿಂದ 30ರವರೆಗೆ ನಡೆಯಲಿರುವ ಲಕ್ಷ ದೀಪೋತ್ಸವ, ಹಾಗೂ ನ. 29ರಂದು ನಡೆಯಲಿರುವ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪತ್ರಕರ್ತರೊoದಿಗೆ ಮಾತನಾಡಿ, ಅರಸೀಕೆರೆ ತಾಲೂಕಿನಲ್ಲಿ 5033 ಸಂಘಗಳಿದ್ದು 38,401 ಸದಸ್ಯರಿದ್ದಾರೆ, ಕರ್ನಾಟಕ ಬ್ಯಾಂಕ್ ವತಿಯಿಂದ 238 ಕೋಟಿ ಪ್ರಗತಿ ನಿಧಿ ಯೋಜನೆ ನೀಡಲಾಗಿದ್ದು, ಚಾಲ್ತಿ ಮೊತ್ತವಾಗಿದೆ, ಪ್ರತಿವಾರದಲ್ಲಿ ತಮ್ಮ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಉಳಿಸುತ್ತಾ ಬಂದಿರುವ ಸದಸ್ಯರು ತಮ್ಮ ಆರ್ಥಿಕ ಸುಧಾರಣೆಯಲ್ಲಿ ತೊಡಗಿದ್ದಾರೆ. ವಿವಿಧ ದುಡಿಮೆಗಳಲ್ಲಿ ಬಂಡವಾಳವಾಗಿ ವಿನಯೋಗಿಸುವ ಮೂಲಕ ವ್ಯವಹಾರಿಕ ಹಾಗೂ ಸಂಸಾರದ ಆರ್ಥಿಕ ಸುಧಾರಣೆಯಲ್ಲಿಯೂ ಅವರು ಸಬಲರಾಗುತ್ತಿದ್ದಾರೆ ಎಂದರು.
ತಾಲೂಕಿನ 257 ನಿರ್ಗತಿಕರಿಗೆ ಮಾಶಾಸನವಾಗಿ 2, 57 ಲಕ್ಷ ರು. ನೀಡಲಾಗುತ್ತಿದೆ. 37 ಶುದ್ಧ ಗಂಗಾ ಘಟಕಗಳಿವೆ. 10 ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. 25 ಶಾಲೆಗಳಿಗೆ 2 ಲಕ್ಷ 34,ಸಾ ಪೀಠೋಪಕರಣ, ಶಾಲ ದುರಸ್ತಿ ವಿದ್ಯಾನಿಧಿ ಯೋಜನೆಯಲ್ಲಿ ಶಿಕ್ಷಕರಿಗೆ ವೇತನ, 159 ಧಾರ್ಮಿಕ ಕ್ಷೇತ್ರಗಳ ಸ್ವಚ್ಛತೆ, ಜನ ಮಂಗಳ ಕಾರ್ಯಕ್ರಮದಡಿ 450 ಫಲಾನುಭವಿಗಳಿಗೆ ವಿತರಣೆ ಸಂಪೂರ್ಣ ಸುರಕ್ಷಾ 4,800 ಆರೋಗ್ಯ ಕವಚ 19,901 ಫಲಾನುಭವಿಗಳಿಗೆ ವಿತರಿಸಲಾಗಿದೆ, ದೇವಸ್ಥಾನಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಗಳಿಗೆ ಮೂರು ಕೋಟಿ ನೀಡಲಾಗಿದೆ ಪಾನ ಮುಕ್ತ ಶಿಬಿರದಡಿ 380 ಮದ್ಯ ವ್ಯಸನಿಗಳನ್ನು ಹೊರ ತರಲಾಗಿದೆ, 300 ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 30 ಲಕ್ಷ 72 ಸಾಲ ವಿತರಿಸಲಾಗುತ್ತಿದೆ. ಈ ವರ್ಷ ನಮ್ಮ ತಾಲೂಕಿಗೆ 248 ವಿದ್ಯಾರ್ಥಿಗಳಿಗೆ 3.5 ಲಕ್ಷ ರು. ಗಳು ಮಂಜೂರಾಗಿದೆ ಎಂದರು. ಸಿಎಸ್‌ಸಿ ಯೋಜನೆಯಡಿ ಈಶ್ರಮ್ 5000, ಪಿಎಂ ದಿಶಾ 6740, ಆಯುಷ್ಮಾನ್ 60176, ಫಸಲ್ ಭಿಮಾ 10,181, ಪಾನ್ ಕಾರ್ಡ್ 9,500, ಪಿಎಂ ವಿಶ್ವಕರ್ಮ ಯೋಜನೆ 8194, ನೊಂದಣಿ ಮಾಡಲಾಗಿದೆ ಎಂದ ಅವರು ಸ್ವಉದ್ಯೋಗ ಯಾವುದೇ ಘಟಕವನ್ನು ಮಾಡುವುದಾದರೂ ಅದಕ್ಕೆ ಆರ್ಥಿಕ ನೆರವನ್ನು ನಮ್ಮ ಸಂಸ್ಥೆಯಿಂದ ಕೊಡಲಾಗುತ್ತದೆ ಎಂದರು.ಅರಸೀಕೆರೆ ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ, ಬಾಣಾವರ ಘಟಕದ ಯೋಜನಾಧಿಕಾರಿ ಜಯಂತ್ ಉಪಸ್ಥಿತರಿದ್ದರು.