ತಿರುಮಲ ಇಂಟನ್ಯಾಷನಲ್ ಶಾಲೆ ಆಯೋಜಿಸಿದ್ದ ಕಾಂತಾರ ಕಲರವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮುಂದೆ ಹಿರಿಯರ ನಡವಳಿಕೆ ಸೂಕ್ತವಾಗದಿದ್ದರೆ ಮಕ್ಕಳ ನಡವಳಿಕೆಯಲ್ಲೂ ಬದಲಾವಣೆಯಾಗುತ್ತದೆ. ಶೈಕ್ಷಣಿಕವಾಗಿ ನಾವು ಭಾರತದ ದುರಾವಸ್ಥೆಯನ್ನು ಕಂಡಿದ್ದೆವು. ಆದರೆ ಇಂದು ಶೈಕ್ಷಣಿಕ ಮಹತ್ವ ಅರಿತು ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ವಿಸ್ತರಿಸುವ ಕಾರ್ಯ ಮಾಡುತ್ತಿವೆ ಎಂದು ವಾಗ್ಮಿ ಪಾಂಡವಪುರದ ಕೃಷ್ಣೇಗೌಡ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹಿಂದೆಲ್ಲಾ ಹಿರಿಯರು ಕಿರಿಯರಿಗೆ ಆದರ್ಶವಾಗಿರುತ್ತಿದ್ದರು. ಆದರೆ, ಇಂದು ಹಿರಿಯರ ನಡವಳಿಕೆಯಲ್ಲೇ ಸಾಕಷ್ಟು ಸುಧಾರಣೆಯಾಗಬೇಕಿದೆ. ಹಾಗಾಗಿ ದೊಡ್ಡವರು ಕೂಡ ಮಕ್ಕಳ ಮುಂದೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಅರಿಯುವ ಅಗತ್ಯವಿದೆ ಎಂದು ನಾಡಿನ ಶ್ರೇಷ್ಠ ಅಂಕಣಕಾರ, ವಾಗ್ಮಿ ಪಾಂಡವಪುರದ ಕೃಷ್ಣೇಗೌಡ ಕಿವಿಮಾತು ಹೇಳಿದರು.ಪಟ್ಟಣದ ತಿರುಮಲ ಇಂಟನ್ಯಾಷನಲ್ ಶಾಲೆ ಆಯೋಜಿಸಿದ್ದ ಕಾಂತಾರ ಕಲರವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮುಂದೆ ಹಿರಿಯರ ನಡವಳಿಕೆ ಸೂಕ್ತವಾಗದಿದ್ದರೆ ಮಕ್ಕಳ ನಡವಳಿಕೆಯಲ್ಲೂ ಬದಲಾವಣೆಯಾಗುತ್ತದೆ. ಶೈಕ್ಷಣಿಕವಾಗಿ ನಾವು ಭಾರತದ ದುರಾವಸ್ಥೆಯನ್ನು ಕಂಡಿದ್ದೆವು. ಆದರೆ ಇಂದು ಶೈಕ್ಷಣಿಕ ಮಹತ್ವ ಅರಿತು ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ವಿಸ್ತರಿಸುವ ಕಾರ್ಯ ಮಾಡುತ್ತಿವೆ. ಶಿಕ್ಷಣದಲ್ಲಿ ಅಮ್ಮ ಎಂಬ ವ್ಯಕ್ತಿತ್ವವೇ ಶಿಕ್ಷಣ, ತಾಯಿತನದ ವಿಸ್ತರಣೆ ಭಾಗವೇ ಇಂದು ಶಿಕ್ಷಕಿ, ಅದ್ಭುತ ಶಕ್ತಿಯಾಗಿ ಅಕ್ಷರ ಕ್ರಾಂತಿಗೆ ಮಹಿಳೆ ಕಾರಣವಾಗಿದ್ದಾಳೆ. ದಶಕಗಳ ಹಿಂದಿನ ಚನ್ನರಾಯಪಟ್ಟಣಕ್ಕೂ ಇಂದಿಗೂ ಶಿಕ್ಷಣ ಸಾಮಾಜಿಕ ಬದಲಾವಣೆಯಲ್ಲಿ ಮಹತ್ತರ ಸಾಧನೆ ಸಾಧಿಸಿದೆ. ಮಗು ಶಾಲೆಗೆ ಬರುತ್ತದೆ. ಮನಸ್ಸಿನಲ್ಲಿ ಏನನ್ನು ಹೊತ್ತುಕೊಂಡು ಹೋಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಪಟ್ಟಣದ ಅನೇಕ ಪ್ರತಿಭಾವಂತರು ದೇಶ ವಿದೇಶಗಳಲ್ಲಿ ತಮ್ಮ ಚಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು.

ತಿರುಮಲ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷರಾದ ಡಾ. ರಮೇಶ್ ಬಾಬು, ಕಾರ್ಯದರ್ಶಿ ಹಾಗೂ ಉದ್ಯಮಿ ಕಾಂತರಾಜು, ಆರ್‌ಟಿಒ ಪ್ರಕಾಶ್, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೃಷ್ಣೇಗೌಡರು, ಯೂರೋ ಕಿಡ್ಸ್‌ ಅಧ್ಯಕ್ಷ ಸಿ.ಆರ್‌.ರಘು, ಸೌಮ್ಯಾ ರಘು, ಪೊಲೀಸ್ ಇನ್ಸೆಕ್ಟರ್ ರಘುಪತಿ, ಬಿಆರ್‌ಸಿ ಅನಿಲ್, ಪ್ರಾಂಶುಪಾಲರಾದ ರಾಹುಲ್, ಧನಲಕ್ಷ್ಮಿ ಲಕ್ಷ್ಮೀನಾರಾಯಣ ಮುಂತಾದವರಿದ್ದರು. ಪದೋನ್ನತಿ ಪಿಯು ಕಾಲೇಜಿನ ಆರಂಭಕ್ಕಾಗಿ ಲೋಗೋ ಉದ್ಘಾಟನೆ ಮಾಡಲಾಯಿತು. ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.