ಸಾರಾಂಶ
ಭಾವಸಾರ ಕ್ಷತ್ರಿಯ ಸಮಾಜಕ್ಕೆ ಸುಧೀರ್ಘ ಇತಿಹಾಸವಿದೆ. ಪುರಾತನ ಕಾಲದಿಂದ ಪರಶುರಾಮನ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ಮಾಜಿ ಶಾಸಕ ರಾಕೇಶ್‌ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಭಾವಸಾರ ಕ್ಷತ್ರಿಯ ಸಮಾಜಕ್ಕೆ ಸುಧೀರ್ಘ ಇತಿಹಾಸವಿದೆ. ಪುರಾತನ ಕಾಲದಿಂದ ಪರಶುರಾಮನ ಕಾಲದಿಂದ ನಡೆದುಕೊಂಡು ಬಂದಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಪಾಕಿಸ್ತಾನದ ಬಲೂಚಿಸ್ತಾನದವರೆಗೆ ಅಸ್ತಿತ್ವದಲ್ಲಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.ನಗರದ ಶ್ರೀ ಪಾಂಡುರಂಗ ರುಕ್ಮೀಣಿ ಭವನದಲ್ಲಿ ಭಾವಸಾರ ಕ್ಷತ್ರಿಯ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ದಿಂಡಿ ಉತ್ಸವ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದರು.
ಭಾವಸಾರ ಕ್ಷತ್ರಿಯ ಸಮುದಾಯ ಜೀವನದಲ್ಲಿ ಉತ್ತಮ ಉದ್ದೇಶ, ನಿಲುವುಗಳನ್ನು ಬೆಳೆಸಿಕೊಂಡು ಬಂದಿದೆ. ಬದ್ದತೆಗಳನ್ನು ಅಳವಡಿಸಿಕೊಂಡು ಬಂದಿದೆ. ಪೌರಾಣಿಕ ಕಾಲದಲ್ಲಿ ಯೋಧರಾಗಿದ್ದ ಭಾವಸಾರ ಕ್ಷತ್ರಿಯ ಸಮುದಾಯದವರು. ನಂತರ ರಾಜಮಹಾರಾಜರ ಅಸ್ತಿತ್ವದ ಆಳ್ವಿಕೆಯ ಕಾಲದಲ್ಲಿ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡು. ವ್ಯಾಪಾರದ ಕಸುವನ್ನು ಅಳವಡಿಸಿಕೊಂಡು ಬಂದರು. ಭಾರತ ದೇಶ ವೈಭವ ಪಾರಂಪರಿಕ ದೇಶವಾಗಲು ಭಾವಸಾರ ಕ್ಷತ್ರೀಯ ಸಮುದಾಯ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದೆ ಎಂದರು.ಶಾಸಕನಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ ಭಾವಸಾರ ಕ್ಷತ್ರಿಯ ಸಮುದಾಯದ ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಅಭಿವೃದ್ಧಿಗೆ ೫ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದೆ. ಆ ನಂತರ ಚುನಾವಣೆಯಲ್ಲಿ ಪರಾಭವಗೊಂಡ ಹಿನ್ನೆಲೆಯಲ್ಲಿ ನನ್ನ ವೈಯಕ್ತಿಕವಾಗಿ ೫ ಲಕ್ಷ ರು. ಗಳನ್ನು ನೀಡಿದ್ದೇನೆ. ಭಾವಸಾರ ಕ್ಷತ್ರಿಯ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು. ಸಮುದಾಯದ ಮಕ್ಕಳು ಎಂಜಿನಿಯರ್, ವೈದ್ಯರು, ಐಎಎಸ್ ಅಧಿಕಾರಿಗಳು ಆಗಬೇಕು. ವೃತ್ತಿಪರ ಶಿಕ್ಷಣದತ್ತ ಗಮನ ಕೊಟ್ಟು ಅಭಿವೃದ್ಧಿ ಹೊಂದಲಿ ಎಂದರು.
ಈ ಸಂದರ್ಭದಲ್ಲಿ ಪಂಡರಾಪುರ ಗುರುಗಳಾದ ಪ್ರಭಾಕರ್ ಬೊಂದಲೇ ಮಹಾರಾಜ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ರಾಮಲಿಂಗರಾವ್, ಪುಂಡಲೀಕ್, ಜಯಸಿಂಹ ರಾವ್, ಕೃಷ್ಣ, ಕಾಶಿನಾಥ್ ರಾವ್ ಎ.ವಿ. ಸೇರಿದಂತೆ ಹಲವರು ಹಾಜರಿದ್ದರು.