ಕನ್ನಡಪ್ರಭ ವಾರ್ತೆ ಹುಣಸೂರುಗೂಡ್ಸ್ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು-ಬಂಟ್ವಾಳ ಹೆದ್ದಾರಿ-275ರ ಹುಣಸೂರು ತಾಲೂಕಿನ ಕೊತ್ತೆಗಾಲ ಗೇಟ್ ಬಳಿಯಲ್ಲಿ ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಬೈಕ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಹೊಸಕೊಪ್ಪಲಿನ ಕಾಳೇಗೌಡರಪುತ್ರ ಸುರೇಶ್ (63) ಹಾಗೂ ಇದೇ ಗ್ರಾಮದ ತಮ್ಮೇಗೌಡರಪುತ್ರ ಮದೇವ(52) ಮೃತರು. ಸುರೇಶ್ ತಮ್ಮ ಬೈಕಿನಲ್ಲಿ ಹೊಸಕೊಪ್ಪಲಿನಿಂದ ಹುಣಸೂರಿಗೆ ಬರುತ್ತಿದ್ದ ವೇಳೆ ಕೊತ್ತೆಗಾಲ ಗೇಟ್ ಬಳಿಯಲ್ಲಿ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ತಲೆ, ಕೈ,ಗಾಲುಗಳಿಗೆ ತೀವ್ರಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಅಪಘಾತದ ತೀವ್ರತೆಗೆ ಬೈಕ್ ಬೆಂಕಿ ಹತ್ತಿಕೊಂಡು ಉರಿದು ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.ಅಪಘಾತದಿಂದ ಹೆದ್ದಾರಿಯಲ್ಲಿ ಎರಡೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಒಂದು ಗಂಟೆಕಾಲ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಡಿವೈ.ಎಸ್.ಪಿ. ರವಿ, ಎಸ್.ಐ.ರಾಧ ಭೇಟಿ ಇತ್ತು ಪರಿಶೀಲಿಸಿದ್ದಾರೆ. ಈ ಸಂಬAಧ ಗ್ರಾಮಾತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಡ್ಸ್ ಲಾರಿ ಡಿಕ್ಕಿ: ಬೈಕ್ಸವಾರಿಬ್ಬರು ಸಾವು
ಸುರೇಶ್ ತಮ್ಮ ಬೈಕಿನಲ್ಲಿ ಹೊಸಕೊಪ್ಪಲಿನಿಂದ ಹುಣಸೂರಿಗೆ ಬರುತ್ತಿದ್ದ ವೇಳೆ ಕೊತ್ತೆಗಾಲ ಗೇಟ್ ಬಳಿಯಲ್ಲಿ ಎದುರಿನಿಂದ ಬಂದ ಲಾರಿ ಡಿಕ್ಕಿ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.