ಜನರ ಆಶೀರ್ವಾದವೇ ಬಸವರಾಜಗೆ ಶ್ರೀರಕ್ಷೆ: ಹಾಲಪ್ಪ ಆಚಾರ

| Published : May 01 2024, 01:16 AM IST

ಸಾರಾಂಶ

ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್‌ಗೆ ಜನರ ಆಶೀರ್ವಾದವೇ ಶ್ರೀರಕ್ಷೆ ಆಗಲಿದೆ.

ಅಬ್ ಕೀ ಬಾರ್ 400 ಬಾರ್ ಪಕ್ಕಾ । ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿಕೆ

ಕನ್ನಡಪ್ರಭ ವಾರ್ತೆ ಕುಕನೂರು

ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್‌ಗೆ ಜನರ ಆಶೀರ್ವಾದವೇ ಶ್ರೀರಕ್ಷೆ ಆಗಲಿದೆ. ಮೋದಿಯಿಂದ ದೇಶ ರಕ್ಷಣೆ ಆಗಲಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ಬಳಗೇರಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಭಾಷಾ ಜ್ಞಾನಿ, ಜನಾನುರಾಗಿ ವೈದ್ಯ ಆಗಿದ್ದಾರೆ. ಸಂಸತ್ತಿನಲ್ಲಿ ಈ ಭಾಗದ ಸಮಸ್ಯೆಗಳನ್ನು ಪ್ರತಿಧ್ವನಿಸಲಿದ್ದಾರೆ. ಪ್ರಧಾನಿ ಮೋದಿ ಹಸಿವಿನಿಂದ ಬಳಸಬಾರದು ಎಂದು ಕೊರೋನಾ ವೇಳೆ 10 ಕೆಜೆ ಆಹಾರ ಧಾನ್ಯ ನೀಡಿದರು. ಈಗ ಕೊಡುತ್ತಿರುವ 5 ಕೆಜಿ ಸಹ ಕೇಂದ್ರ ಸರ್ಕಾರದ್ದು. ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದರು.

ರಾಜ್ಯ ಕಾಂಗ್ರೆಸ್ ಆಡಳಿತದಿಂದ ಒಂದು ವರ್ಷದಿಂದ ಕತ್ತಲಲ್ಲಿ ಅಡಗಿದೆ. ರೈತರ ಪಂಪ್‌ಸೆಟ್ ಅನುಮತಿಗೆ ₹15000 ಭರಿಸುವ ಹೊರೆ ಬಿದ್ದಿದೆ. ಮೋದಿ ರೈತರಿಗೆ ₹6 ಸಾವಿರ, ಬಿ.ಎಸ್. ಯಡಿಯೂರಪ್ಪ ₹4 ಸಾವಿರ ಪಿಎಂ ಕಿಸಾನ್ ಯೋಜನೆಯಲ್ಲಿ ನೀಡುತ್ತಿದ್ದರು. ಬಿಎಸ್ ವೈ ನೀಡಿದ 4 ಸಾವಿರ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ವಿದ್ಯಾ ನಿಧಿ ಸಹ ನಿಲ್ಲಿಸಲಾಗಿದೆ. ಎಸ್ಸಿ, ಎಸ್ಟಿ ನಿಗಮದ ₹350 ಕೋಟಿಯನ್ನು ಕಿತ್ತುಕೊಂಡಿದ್ಜಾರೆ ಎಂದರು.

ಕೃಷ್ಣ ಯೋಜನೆಗೆ ಕಾಂಗ್ರೆಸ್ ಹೇಳಿದಂತೆ ಅನುದಾನ ನೀಡಲಿಲ್ಲ. ಗವಿಮಠಕ್ಕೆ ಬಿಜೆಪಿ ಸರ್ಕಾರ ನೀಡಿದ ₹10 ಕೋಟಿಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ಡಿಎಂಕೆ ಸಿಎಂ ಸನಾತನ ಧರ್ಮ ಸರ್ವನಾಶ ಮಾಡಬೇಕು ಅನ್ನುತ್ತಾರೆ. ಇನ್ನೊಬ್ಬ ಕಾಂಗ್ರೆಸ್ ಸಲಹೆಗಾರ ಶ್ಯಾಂ ಪಿತ್ರಾರ್ಜಿತ ಆಸ್ತಿಯನ್ನು ಪಾಲನ್ನು ಸರ್ಕಾರಕ್ಕೆ ನೀಡಬೇಕು ಎಂದು ಹೇಳುತ್ತಾರೆ. ಕಾಂಗ್ರೆಸ್ 30ರಿಂದ 40 ಸ್ಥಾನ ಮಾತ್ರ ಗೆಲ್ಲಲಿದೆ. ಬಿಜೆಪಿ 400 ಸ್ಥಾನ ಗೆಲ್ಲುವುದು ಪಕ್ಕಾ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಮಾತನಾಡಿ, ಮೋದಿಯವರ ಹತ್ತು ವರ್ಷದ ಆಡಳಿತ ಮೆಲುಕು ಹಾಕಬೇಕು. ಬೇರೆಯವರು ಏನೇ ಮಾತನಾಡಲಿ, ನಮ್ಮ ಜೀವಕ್ಕೆ ಮೋದಿಯವರೇ ಗ್ಯಾರಂಟಿ. ದೇಶದ ಜನರ ಜೊತೆಗೆ ಗಡಿಯಲ್ಲಿ ನಿರ್ಭಯವಾಗಿ ಜನರು ಜೀವನ ಮಾಡುತ್ತಿದ್ದಾರೆ. 140 ಕೋಟಿ ಜನರಿಗೆ ಯೋಜನೆ ತಲುಪಿವೆ. 35 ಕೋಟಿ ಜನರಿಗೆ ಉಜ್ವಲ್ ಯೋಜನೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯೋಜನೆ ರೂಪಿಸಿದ್ದಾರೆ ಎಂದರು.

ಮುಖಂಡ ಸಿ.ಎಚ್. ಪೊಪಾ ಮಾತನಾಡಿದರು. ಬಿಜೆಪಿ ಮಂಡಳದ ಅಧ್ಯಕ್ಷ ಮಾರುತಿ ಹೊಸಮನಿ, ಮುಖಂಡರಾದ ಅಯ್ಯನಗೌಡ ಕೆಂಚಮ್ಮನವರ್, ರಥನ್ ದೇಸಾಯಿ, ವಿಶ್ವನಾಥ್ ಮರಿಬಸಪ್ಪನವರ್, ಶರಣಪ್ಪ ಈಳಗೇರ, ಬಸನಗೌಡ ತೊಂಡಿಹಾಳ, ಶ್ರೀನಿವಾಸ ತಿಮ್ಮಾಪೂರ, ಶಂಭು ಜೋಳದ, ವಿರೂಪಾಕ್ಷಪ್ಪ ಹುಳ್ಳಿ, ಸೋಮನಗೌಡ, ಶರಣಪ್ಪ ಗುಂಗಾಡಿ, ಸೋಮಶೇಖರ್ ಸೋಂಪೂರು, ಶಿವಕುಮಾರ ನಾಗಲಾಪೂರಮಠ, ಶರಣಪ್ಪ ಬಣ್ಣದ ಬಾವಿ, ವಿಜಯಕುಮಾರ್ ಕಣ್ಣಾರಿ, ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ವೀರೇಶ ನಾಗೋಜಿ, ಶ್ರೀನಿವಾಸ ತಿಮ್ಮಾಪೂರ, ಪ್ರಕಾಶ್ ತಳವಾರ್, ನಾಗರಾಜ ವೆಂಕಟಾಪೂರ, ರಾಮಣ್ಣ ಹೊಸಮನಿ ಇತರರಿದ್ದರು.