ಶೌಚಾಲಯ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

| Published : Nov 29 2024, 01:01 AM IST

ಶೌಚಾಲಯ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾರೋಹಳ್ಳಿ: ನವಜಾತ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ದೇವರಕಗ್ಗಲಹಳ್ಳಿಯಲ್ಲಿನ ದಯಾನಂದ ವಿವಿಯ ಡಾ.ಚಂದ್ರಮ್ಮ ದಯಾನಂದ ಸಾಗರ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್‌ನಲ್ಲಿ ನಡೆದಿದೆ.

ಹಾರೋಹಳ್ಳಿ: ನವಜಾತ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ದೇವರಕಗ್ಗಲಹಳ್ಳಿಯಲ್ಲಿನ ದಯಾನಂದ ವಿವಿಯ ಡಾ.ಚಂದ್ರಮ್ಮ ದಯಾನಂದ ಸಾಗರ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್‌ನಲ್ಲಿ ನಡೆದಿದೆ.

ಆಗ ತಾನೆ ಜನಿಸಿದ ಮಗುವನ್ನು ದುರುಳರು ಬುಧವಾರ ರಾತ್ರಿ 10.30ರ‌ ಸಮಯದಲ್ಲಿ ಶೌಚಾಲಯದ ಗುಂಡಿಯಲ್ಲಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆಯ ಎಫ್ ಬ್ಲಾಕ್ ಕಟ್ಟಡದ ನೆಲಮಹಡಿಯಲ್ಲಿರುವ ರೇಡಿಯಾಲಜಿ ಡಿಪಾರ್ಟ್ ಮೆಂಟ್ ಪಕ್ಕದಲ್ಲಿರುವ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ಟಾಯ್ಲೆಟ್​​ನಲ್ಲಿ‌ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ನೀರು ಫ್ಲಶ್ ಆಗದ ಕಾರಣ‌ ವೈದ್ಯಕೀಯ ಸಿಬ್ಬಂದಿ ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು ಹೌಸ್ ಕೀಪಿಂಗ್ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಅದರಂತೆ, ಸಿಬ್ಬಂದಿ ವ್ಯಾಕ್ಯೂಮ್‌ನಿಂದ ಶೌಚಾಲಯ ಗುಂಡಿ ಕ್ಲೀನ್ ಮಾಡಿದ್ದಾರೆ. ಆಗ, ಏನೋ‌ ವಸ್ತು ಅಡ್ಡ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ, ಬಟ್ಟೆ ಅಥವಾ ಏನಾದರು ಕೊಳೆ ಇರಬಹುದು ಎಂದು ಅವರು ಶಂಕಿಸಿದ್ದಾರೆ.

ಟಾಯ್ಲೆಟ್ ಗುಂಡಿಯಲ್ಲಿ ಸಿಕ್ಕಿಕೊಂಡಿತ್ತು ಶಿಶುವಿನ ದೇಹ:

ಟಾಯ್ಲೆಟ್ ಶುಚಿಗೊಳಿಸುವ ಪರಿಕರವನ್ನು ಬಳಸಿ ಒಳಗೆ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಶುಚಿ ಮಾಡಿ, ಯಾವ ವಸ್ತು ಕಟ್ಟಿಕೊಂಡು ಟಾಯ್ಲೆಟ್ ಬ್ಲಾಕ್ ಆಗಿತ್ತು ಎಂದು ತಿಳಿದುಕೊಳ್ಳಲು ಹಿಂಭಾಗದಲ್ಲಿರುವ ಫಿಡ್ ಕಡೆಗೆ ಹೋಗಿ ನೋಡಿದಾಗ ಸಿಬ್ಬಂದಿ ಆಘಾತಕ್ಕೊಳಗಾಗಿದ್ದರು. ನವಜಾತ ಶಿಶುವಿನ ದೇಹ ಅವರಿಗೆ ಸಿಕ್ಕಿದೆ. ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಟಾಯ್ಲೆಟ್ ಒಳಗೆ ನವಜಾತ ಶಿಶು ಹೇಗೆ ಬಂದಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಯಾವ ತಾಯಿ ಕೂಡ ಹೀಗೆ ಮಾಡಲು ಸಾಧ್ಯವೇ ಎಂದು ಸ್ಥಳದಲ್ಲಿದ್ದವರು ಕಳವಳ ವ್ಯಕ್ತಪಡಿಸಿದ್ದಾರೆ. ಅದೇ‌ ಆಸ್ಪತ್ರೆಯಲ್ಲಿ ನವಜಾತ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮಗುವಿನ ಡಿಎನ್ ಎ ವರಧಿ ಆಧರಿಸಿ ಪೋಷಕರ ಪತ್ತೆ ಹಚ್ಚುವುದರ ಜೊತಗೆ ಆಸ್ಪತ್ರೆಗೆ ಬಂದು ಶಿಶುವಿಗೆ ಜನ್ಮ ಕೊಟ್ಟಿರುವುದೇ, ಮಗುವಿನ ಜನನ ಮರೆಮಾಚಲು ಹಾಗೂ ಮಗುವಿನ ಮೃತದೇಹವನ್ನು ರಹಸ್ಯವಾಗಿ ವಿಲೆ ಮಾಡಲು ಎಸಗಿರುವ ಕೃತ್ಯವೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಇನ್ನಷ್ಟು ವಿಚಾರಗಳು ತನಿಖೆಯಿಂದ ತಿಳಿದುಬರಬೇಕಿದೆ.

ಈ ಸಂಬಂಧ ಡಾ.ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆಯ ಆಡಳಿತ ವಿಭಾಗದ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಮಧು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

28ಕೆಆರ್ ಎಂಎನ್ 4,5.ಜೆಪಿಜಿ

5.ದಯಾನಂದ ಸಾಗರ್ ಆಸ್ಪತ್ರೆ.