ಅನ್ಯಾಯಗಳನ್ನು ನೋಡಿಕೊಂಡು ಸುಮ್ಮನೆ ಕುಂತರೇ ಅದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ ಎಂದು ಹೇಳಿ ಬಲಪಂಥೀಯ ರಾಜಕಾರಣಿಗಳು ರಾಮಾಯಣ ಮತ್ತು ಮಹಾಭಾರತವನ್ನು ಹಾಳು ಮಾಡಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
ಭಾರತದಲ್ಲಿ ಕರ್ಮಸಿದ್ಧಾಂತದ ಒಂದು ಬಾಂಬ್ ಶತಮಾನಗಳಿಂದಲೂ ಬಹುಸಂಖ್ಯಾತರನ್ನು ಕೊಲ್ಲುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯು ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರು ಕರ್ಮ ಸಿದ್ಧಾಂತವನ್ನು ನಿರಾಕರಿಸಿದರು. ಆದರೆ, ಕರ್ಮ ಸಿದ್ಧಾಂತ ಎಂಬ ಬಾಂಬ್ ನಮ್ಮ ದೇಶವನ್ನು ಸುಡುತ್ತಿದೆ ಹಾಗೂ ಅಸಮಾನತೆಯನ್ನು ಪ್ರತಿನಿಧಿಸುವುದಕ್ಕೆ ಭಾರತೀಯ ಸಂಸ್ಕೃತಿ ಹೇಳುತ್ತದೆ ಎಂದರು.
ಅನ್ಯಾಯಗಳನ್ನು ನೋಡಿಕೊಂಡು ಸುಮ್ಮನೆ ಕುಂತರೇ ಅದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ ಎಂದು ಹೇಳಿ ಬಲಪಂಥೀಯ ರಾಜಕಾರಣಿಗಳು ರಾಮಾಯಣ ಮತ್ತು ಮಹಾಭಾರತವನ್ನು ಹಾಳು ಮಾಡಿದ್ದಾರೆ. ತಮಗೆ ಬೇಕಾದ ಹಾಗೆ ಕಥೆಗಳನ್ನು ಸೃಜಿಸಿಕೊಂಡು ಬೇಕಾ ಬಿಟ್ಟಿಯಾಗಿ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಪಠ್ಯ ಪುಸ್ತಕಗಳಲ್ಲಿ ನೈಜ ಚರಿತ್ರೆಯನ್ನು ತೆಗೆಯಲಾಗುತ್ತಿವೆ. ಪ್ರಸ್ತುತ ನಮ್ಮ ದೇಶದ ಪ್ರಧಾನಿಗಳೇ ಪೂಜೆ ಭಟ್ಟರ ಹಾಗೆ ಕಾಣುತ್ತಿದ್ದಾರೆ. ಧಾರ್ಮಿಕ ಅಸಮಾನತೆ ಹೆಚ್ಚಾಗುತ್ತಿದೆ. ಅಲ್ಪಸಂಖ್ಯಾತರ ರಕ್ಷಣೆ ನಮ್ಮ ಹಕ್ಕು. ಏಕೆಂದರೆ ಅವರೆಲ್ಲರೂ ನಮ್ಮ ಭಾಷೆಯನ್ನು ಕಟ್ಟಿದ್ದಾರೆ. ನಾವು ಬೌದ್ಧಿಕವಾಗಿ ಬೆಳೆಯದೆ ಹೋದರೆ ಅದು ನಮಗೆ ನಾವೇ ಮಾಡಿಕೊಳ್ಳುವ ಮೋಸ ಎಂದು ಅವರು ಹೇಳಿದರು.
ಮಹಿಳಾ ಪ್ರಾತಿನಿಧ್ಯ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಲೇಖಕಿ ಶೈಲಜಾ ಹಿರೇಮಠ ಮಾತನಾಡಿದರು.ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಪಂ ಮಾಜಿ ಅಧ್ಯಕ್ಷರಾದ ಬಿ.ಎಂ. ರಾಮು, ಲತಾ ಸಿದ್ದಶೆಟ್ಟಿ, ಮಾಜಿ ಮೇಯರ್ ಗಳಾದ ನಾರಾಯಣ, ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಅನಂತ, ಮೋದಾಮಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಪದಾಧಿಕಾರಿಗಳಾದ ಸಿದ್ದರಾಜು, ರಮೇಶ, ಪುಷ್ಪವಲ್ಲಿ, ಎಂ. ಶಿವಣ್ಣ, ಎನ್. ಭಾಸ್ಕರ್, ಎಡತಲೆ ಮಂಜುನಾಥ, ಶಿವಪ್ರಸಾದ್, ಬಿ.ಎಂ. ರಾಮು, ಈಶ್ವರ್ ಚಕ್ಕಡಿ, ಯೋಗೇಶ, ಭಾಸ್ಕರ್, ಅಶೋಕ್, ಸಿದ್ದಯ್ಯ, ನಾಗರಾಜ, ತಲಕಾಡು ಮಂಜುನಾಥ, ತಾರಾ ಕುಮಾರ್, ಕಂದೇಗಾಲ ನಾಗೇಶ್ ಮೊದಲಾದವರು ಇದ್ದರು.
----ಕೋಟ್...
ಇತ್ತೀಚಿನ ರಾಜಕೀಯ ಬೆಳವಣಿಗೆ ಪ್ರಜಾಪ್ರಭುತ್ವದಿಂದ ರಾಜಪ್ರಭುತ್ವದ ಕಡೆ ಸಾಗುತ್ತಿದೆ. ದರಿದ್ರರು ಇಂದು ದೇಶ ಆಳುತ್ತಿದ್ದಾರೆ. ನಮ್ಮ ದೇಶದ ಧರ್ಮ ಗ್ರಂಥ ನಮ್ಮ ಸಂವಿಧಾನ. ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟಿದು ನರೇಂದ್ರ ಮೋದಿ ಅಲ್ಲ, ಆರ್ಟಿಕಲ್ 14ರ ಮೂಲಕ ಡಾ. ಅಂಬೇಡ್ಕರ್ ನೀಡಿದ್ದು. ಹೆಣ್ಣು ಪೂಜೆಗಿಂತ ಹೆಚ್ಚು ಸಂವಿಧಾನದ ಓದಿನಲ್ಲಿ ತೊಡಗಿಸಿಕೊಳ್ಳಬೇಕು.- ಶೈಲಜಾ ಹಿರೇಮಠ, ಲೇಖಕಿ