ಸಾರಾಂಶ
ಅಣ್ಣ-ತಂಗಿಯರ ರಕ್ಷಾಬಂಧನವನ್ನು ಹಿಂದೂ-ಮುಸ್ಲಿಂರು ಡಂಬಳ ಹೋಬಳಿಯ ಗ್ರಾಮಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದರು.
ಡಂಬಳ: ಅಣ್ಣ-ತಂಗಿಯರ ರಕ್ಷಾಬಂಧನವನ್ನು ಹಿಂದೂ-ಮುಸ್ಲಿಂರು ಡಂಬಳ ಹೋಬಳಿಯ ಗ್ರಾಮಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದರು.
ಭ್ರಾತೃತ್ವ ಬೆಸೆಯುವ ಹಬ್ಬದಲ್ಲಿ ಮುಂಜಾನೆಯಿಂದ ಜನರು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಮನೆಯಲ್ಲಿ ಸಹ ವಿಶೇಷಪೂಜೆ ನೆರವೇರಿಸಿದರು. ಬಳಿಕ ಮನೆಯಲ್ಲಿನ ಸಹೋದರರಿಗೆ ಸಹೋದರಿಯರು ಆರತಿ ಬೆಳಗಿ ಪರಸ್ಪರ ರಕ್ಷಾಬಂಧನ ರಾಖಿ ಕಟ್ಟಿ ಹಬ್ಬದ ಶುಭಾಶಯ ಕೋರಿದರು. ಇನ್ನು ಮನೆಯಲ್ಲಿ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ಸವಿದರು.ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಮನೆಗಳಿಗೆ ತೆರಳಿ ರಕ್ಷಾಬಂಧನ ಕಟ್ಟುವ ಮೂಲಕ ಭ್ರಾತೃತ್ವ ಸಂಬಂಧ ಸಾರುತ್ತ ಹಬ್ಬದ ಶುಭಾಶಯ ಕೋರಿದರು. ಒಟ್ಟಾರೆ ಅಣ್ಣನ ಸ್ಥಾನದಲ್ಲಿ ನಿಂತು ರಕ್ಷಣೆಗೆ ನಾವಿದ್ದೇವೆ. ನಿಮ್ಮ ಒಳಿತು ಬಯಸುತ್ತೇವೆ ಎಂದು ಡಂಬಳ ಹೋಬಳಿಯ ಗ್ರಾಮಗಳ ಮನೆಗಳಲ್ಲಿ ರಕ್ಷಾಬಂಧನ ಹಬ್ಬವನ್ನು ಶನಿವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಭ್ರಾತೃತ್ವ ಬೆಸೆಯುವ ಹಬ್ಬದಲ್ಲಿ ಮುಂಜಾನೆಯಿಂದ ಜನರು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ, ಮನೆಯಲ್ಲಿಯೂ ಪೂಜೆ ನೆರವೇರಿಸಿದರು. ಇನ್ನು ಮನೆಯಲ್ಲಿ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಿದರು.ಇನ್ನು ದೇವಾಲಯ, ಶಾಲಾ ಕಾಲೇಜು, ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ರಕ್ಷಾಬಂಧನ ಕಟ್ಟುವ ಮೂಲಕ ಭ್ರಾತೃತ್ವ ಸಂಬಂಧ ಸಾರುತ್ತ ಹಬ್ಬದ ಶುಭಾಶಯ ಕೋರಿದರು.
ಅಣ್ಣ-ತಂಗಿಯರ ನಡುವಿನ ಪವಿತ್ರ ಬಾಂಧವ್ಯ ಸಾರುವ ರಕ್ಷಾ ಬಂಧನ ಮಹಿಳೆಯರ ಘನತೆ ಎತ್ತಿ ಹಿಡಿಯುವ ಮತ್ತು ಅವರಿಗೆ ಸದಾ ಗೌರವ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪವನ್ನು ಮಾಡುವ ಹಬ್ಬವಾಗಿದೆ ಎಂದು ಮುಂಡರಗಿ ಆರ್‌ಎಫ್‌ಓ ಮಂಜುನಾಥ ಮೇಗಲಮನಿ ಹೇಳಿದರು.