ಭಾರತೀಯ ಯೋಧರ ಶೌರ್ಯ, ಬಲಿದಾನ ಸ್ಮರಣೀಯ

| Published : May 21 2025, 02:36 AM IST

ಸಾರಾಂಶ

ಕಾಶ್ಮೀರದ ಪಹಲ್ಗಾಂ ದಾಳಿಗೆ ಪ್ರತಿಯಾಗಿ ನಮ್ಮ ವೀರಯೋಧರು ಪಾಕಿಸ್ತಾನ ಹಾಗೂ ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿದು, ಅವರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಇಂಥ ವೀರಸೈನಿಕರಿಗೆ ಮತ್ತಷ್ಟು ಆತ್ಮಸ್ಥೈರ್ಯ ಮೂಡಿಸಲು ಮಂಗಳವಾರ ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಸುರಿಯುವ ಮಳೆಯಲ್ಲಿಯೇ ಬೃಹತ್ ತಿರಂಗಾ ಯಾತ್ರೆ ನಡೆಯಿತು.

- ಬೃಹತ್ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕಾಶ್ಮೀರದ ಪಹಲ್ಗಾಂ ದಾಳಿಗೆ ಪ್ರತಿಯಾಗಿ ನಮ್ಮ ವೀರಯೋಧರು ಪಾಕಿಸ್ತಾನ ಹಾಗೂ ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿದು, ಅವರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಇಂಥ ವೀರಸೈನಿಕರಿಗೆ ಮತ್ತಷ್ಟು ಆತ್ಮಸ್ಥೈರ್ಯ ಮೂಡಿಸಲು ಮಂಗಳವಾರ ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಸುರಿಯುವ ಮಳೆಯಲ್ಲಿಯೇ ಬೃಹತ್ ತಿರಂಗಾ ಯಾತ್ರೆ ನಡೆಯಿತು.

ಈ ಸಂದರ್ಭ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕಾಶ್ಮೀರ ಪ್ರವಾಸದಲ್ಲಿದ್ದ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರನ್ನು ಉಗ್ರರು ತಮ್ಮ ಧರ್ಮ ಯಾವುದೆಂದು ಕೇಳಿ 26 ಹಿಂದುಗಳನ್ನು ಹತ್ಯೆ ಮಾಡಿದ್ದರು. ಇಂಥ ಉಗ್ರರನ್ನು ಮಟ್ಟಹಾಕಿದ ನಮ್ಮ ವೀರಯೋಧರನ್ನು ಪ್ರತಿಯೊಬ್ಬರೂ ಗೌರವಿಸಿ ಅವರ ಸೇವೆ ಸ್ಮರಿಸಬೇಕು ಎಂದರು.

ಭಾರತ ಯೋಧರು ಪಾಕ್‌ಗೆ ತಕ್ಕಪಾಠ ಕಲಿಸುತ್ತಿದ್ದರೂ ಇನ್ನೂ ಬುದ್ಧಿ ಬಂದಿಲ್ಲ. ಯಾವುದೇ ದೇಶ ನಮ್ಮ ಮೇಲೆ ಆಕ್ರಮಣ ಮಾಡಿದರೂ ಅದನ್ನು ತಡೆಯುವಲ್ಲಿ ಭಾರತೀಯ ಯೋಧರು ಸಮರ್ಥರಾಗಿದ್ದಾರೆ. ಅಂತಹ ಯುದ್ಧೋಪಕರಣಗಳು ನಮ್ಮ ಬಳಿ ಇವೆ. ಇಂಥ ಪರಿಸ್ಥಿತಿಯಲ್ಲೂ ಭಾರತವನ್ನು ಸುಖಾಸುಮ್ಮನೆ ಟೀಕಿಸುವುದು, ನಮ್ಮ ರಹಸ್ಯಗಳನ್ನು ಪಾಕಿಸ್ತಾನ ಜತೆ ಹಂಚಿಕೊಳ್ಳುವುದು, ಬೇರೆ ದೇಶಕ್ಕೆ ಹೋದಾಗ ಭಾರತದ ಸಾರ್ವಭೌಮತೆ ಎತ್ತಿಹಿಡಿಯುವ ಬದಲು ದೇಶದ ವಿರುದ್ಧವೇ ಮಾತನಾಡುವ ಚಾಳಿ ಹೆಚ್ಚಾಗುತ್ತಿದೆ. ಇಂತಹ ಆಂತರಿಕ ದೇಶದ್ರೋಹಿಗಳಿಗೆ ಕೇಂದ್ರ ಸರ್ಕಾರ ತಕ್ಕಪಾಠ ಕಲಿಸಬೇಕು ಎಂದರು.

ಮಾಜಿ ಸೈನಿಕ ಹನುಮಂತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮುಖಂಡ ಧನಂಜಯ ಕಡ್ಲೇಬಾಳು ಇತರರು ಮಾತನಾಡಿದರು.

ಮಾಜಿ ಸೈನಿಕರಾದ ಎಂ.ವಾಸಪ್ಪ, ಸಿದ್ದೇಶಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ದೊಡ್ಡೇರಿ ರಾಜಣ್ಣ, ಶಿವಾನಂದ್ ಸಿ.ಆರ್. ಮಹೇಂದ್ರಗೌಡ, ಎಂ.ಎಸ್. ಪಾಲಕ್ಷಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ವಿ. ಶ್ರೀಧರ್, ರಂಗನಾಥ್, ಬಾಬು ಹೋಬಳದಾರ್, ಕುಬೇರಪ್ಪ, ಮಂಜುನಾಥ್ ಇಂಚರ, ಮಹೇಶ್ ಹುಡೇದ್, ಸುರೇಂದ್ರ ನಾಯ್ಕ, ಮಾರುತಿ ನಾಯ್ಕ, ಶ್ರೀನಿವಾಸ್, ರಾಜು ಪಲ್ಲವಿ, ಎಸ್.ಎಸ್. ಬೀರಪ್ಪ ಇತರರು ಇದ್ದರು.

- - -

(ಬಾಕ್ಸ್) * 150 ಮೀಟರ್ ಉದ್ದದ ತಿರಂಗಾ ಧ್ವಜ ಮೆರವಣಿಗೆ ಜಾಥಾವು ಸಹಸ್ರಾರು ಜನರೊಂದಿಗೆ ಹಿರೇಕಲ್ಮಠದಿಂದ ಆರಂಭಗೊಂಡು, ಮರಳೋಣಿ ರಸ್ತೆ ಮೂಲಕ ವೀರಯೋಧನ ಪುತ್ಥಳಿ ಸ್ಥಳದಲ್ಲಿ ಮಾಲಾರ್ಪಣೆ ಮಾಡಿ, ಅನಂತರ ದುರ್ಗಿಗುಡಿ ಸರ್ಕಲ್ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿತು. ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸುರಿಯುವ ಮಳೆಯನ್ನೂ ಲೆಕ್ಕಿಸದೇ ವಿದ್ಯಾರ್ಥಿಗಳು 150 ಮೀಟರ್ ಉದ್ದದ ತಿರಂಗಾ ಧ್ವಜ ಹಿಡಿದು ಮೆರ‍ವಣಿಗೆಯಲ್ಲಿ ಸಾಗಿದರು. ಕನಕ ರಂಗಮಂದಿರದಲ್ಲಿ ಸಾರ್ವಜನಿಕ ಸಭೆಯಲ್ಲಿ ಗಣ್ಯರು ಮಾತನಾಡಿದರು. ಸೋಮವಾರ ಸಂಜೆ ಸಾವಿರಾರು ಯುವಕರು ಬೈಕ್ ರ್ಯಾಲಿ ಕೂಡ ನಡೆಸಿದ್ದರು.

- - -

-20ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿ ತಾಲೂಕು ಬಿಜೆಪಿ ಘಟಕದಿಂದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ 150 ಮೀಟರ್ ಉದ್ದದ ತಿರಂಗಾ ಧ್ವಜ ಬೃಹತ್ ಯಾತ್ರೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಪಾಲ್ಗೊಂಡರು.