ಸಾರಾಂಶ
- ಸುರಪುರ ತಾಲೂಕಿನ ಅಲ್ದಾಳ ಹಾವಿನಾಳ ಮಾರ್ಗದ ನೂತನ ಸೇತುವೆ
-1.30 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ-------
ಕನ್ನಡಪ್ರಭ ವಾರ್ತೆ ಸುರಪುರತಾಲೂಕಿನ ಆಲ್ದಾಳ- ಹಾವಿನಾಳ ಮಾರ್ಗದ ನೂತನ ಸೇತುವೆ ಮುಂಭಾಗದಲ್ಲಿ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿದೆ. 1.30 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಿದ ಸೇತುವೆಗೆ ಈ ತಡೆಗೋಡೆ ಕಟ್ಟಲಾಗಿತ್ತು. ಉದ್ಘಾಟನೆಗೂ ಮುನ್ನವೇ ಇದು ಕುಸಿದಿರುವುದು ಗುಣಮಟ್ಟದ ಬಗ್ಗೆ ಸಾರ್ವಜನಿಕರ ಆಕ್ಷೇಪಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಸುರಿದ ನಿರಂತರ ಮಳೆ ಮತ್ತು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾವಿನಾಳ ಮತ್ತು ಆಲ್ದಾಳ ಗ್ರಾಮಗಳ ಮಧ್ಯೆ ಇರುವ ಹಳ್ಳಕ್ಕೆ 1.30 ಕೋಟಿ ರು.ಗಳು ವೆಚ್ಚದಲ್ಲಿ ಪಿಡಬ್ಲ್ಯುಡಿ ಇಲಾಖೆಯಿಂದ ನೂತನ ಸೇತುವೆ ನಿರ್ಮಿಸಲಾಗಿದೆ. ಆದರೂ ಇನ್ನೂ ಉದ್ಘಾಟನೆಯಾಗಿರಲಿಲ್ಲ. ಸೇತುವೆ ಯಾವುದೇ ಹಾನಿಯಾಗಿಲ್ಲ.ಕಳೆದ ಒಂದು ವಾರದಿಂದ ವರುಣ ಅರ್ಭಟ ಹೆಚ್ಚಾಗಿದ್ದು, ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೊಲಗಳಿಂದ ಹಳ್ಳಕ್ಕೆ ಬರುವ ನೀರು ಅಧಿಕವಾಗಿದೆ. ಸೇತುವೆ ಬಳಿ ಎರಡು ಕಡೆಯಿಂದಲೂ ಹಳ್ಳವನ್ನು ಒತ್ತುವರಿ ಮಾಡಲಾಗಿದೆ. ಇದರಿಂದ ನೀರು ಹೋಗಲು ಸ್ಥಳಾವಕಾಶವಿಲ್ಲದೆ ನೀರಿನ ಹರಿವಿನ ಪ್ರಮಾಣ ಅಧಿಕವಾಗಿದೆ. ಇದರಿಂದಾಗಿ ನೀರಿನ ರಭಸಕ್ಕೆ ಸೇತುವೆ ಮುಂಭಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ತಡೆಗೋಡೆ ಕುಸಿದಿದ್ದರಿಂದ ಮಣ್ಣು ಕೊಚ್ಚಿ ಹೋಗಿದೆ. ಕೆಲಸ ಮಾಡಿ ಕೊಡುತ್ತೇವೆ ಎಂಬುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಆಲ್ದಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಗಂಗಮ್ಮ ಆರ್. ದೊರೆ ತಿಳಿಸಿದ್ದಾರೆ.
----------ಕೋಟ್-1: ಕ್ರಿಯಾಯೋಜನೆಯಲ್ಲಿ ಇರುವಂತೆ ಸೇತುವೆ ನಿರ್ಮಿಸಿದ್ದೇವೆ. ಸೇತುವೆಗೆ ಯಾವುದೇ ಹಾನಿಯಾಗಿಲ್ಲ. ಪಿಲ್ಲರ್‌ಗಳನ್ನು ನಿರ್ಮಿಸಿ ತಡೆಗೋಡೆ ನಿರ್ಮಿಸಲು ಅನುದಾನ ಅವಶ್ಯಕತೆಯಿದೆ. ಈ ಕುರಿತು ಶಾಸಕರ ಗಮನಕ್ಕೆ ತರಲಾಗುವುದು. ಜನರಿಗೆ ತೊಂದರೆಯಾಗದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
- ಎಸ್.ಜಿ. ಪಾಟೀಲ್, ಪಿಡಬ್ಲ್ಯಡಿ ಎಇಇ, ಸುರಪುರ.-
9ವೈಡಿಆರ್8: ಸುರಪುರ ತಾಲೂಕಿನ ಆಲ್ದಾಳ-ಹಾವಿನಾಳ ಮಾರ್ಗ ಮಧ್ಯೆದ ಸೇತುವೆ ಮುಂಭಾಗದ ತಡೆ ಗೋಡೆ ಕುಸಿದಿರುವುದು.