ಸ್ನೇಹಿತನನ್ನೇ ಕೊಂದು, ಸುಟ್ಟು, ಕೆರೆಗೆ ಎಸೆದಿದ್ದ ಕಟುಕ!

| Published : Dec 29 2024, 01:15 AM IST

ಸಾರಾಂಶ

ದೊಡ್ಡಬಳ್ಳಾಪುರ: ಆ ಕಟುಕ ಚೀಟಿ ಹಣ ಕೊಡುವುದಾಗಿ ನಂಬಿಸಿ ಕರೆದೊಯ್ದ ಸ್ನೇಹಿತನೇ ಆತನ ಗೆಳೆಯನನ್ನು ಕೊಲೆ ಮಾಡಿ, ದೇಹವನ್ನು ಹೂತು, ಬಳಿಕ ಹೂತಿಟ್ಟ ಶವ ತೆಗೆದು ಸುಟ್ಟು, ಅವಶೇಷಗಳನ್ನು ಕೆರೆಗೆ ಎಸೆದಿದ್ದ. ಬಳಿಕ ಪ್ರಕರಣಕ್ಕೆ ಸಾಕ್ಷ್ಯ ಇಲ್ಲದಂತೆ ಮಾಡಲು, ಮೃತ ವ್ಯಕ್ತಿ ಕಾಣೆಯಾದ ಬಗ್ಗೆ ನಾಟಕ ಸೃಷ್ಟಿಸಿ ಕುಟುಂಬದೊಂದಿಗೆ ಕನಿಕರದಿಂದಿದ್ದ ದುಷ್ಟನ ನಿಜಬಣ್ಣ ಬಯಲಾಗಿದೆ.

ದೊಡ್ಡಬಳ್ಳಾಪುರ: ಆ ಕಟುಕ ಚೀಟಿ ಹಣ ಕೊಡುವುದಾಗಿ ನಂಬಿಸಿ ಕರೆದೊಯ್ದ ಸ್ನೇಹಿತನೇ ಆತನ ಗೆಳೆಯನನ್ನು ಕೊಲೆ ಮಾಡಿ, ದೇಹವನ್ನು ಹೂತು, ಬಳಿಕ ಹೂತಿಟ್ಟ ಶವ ತೆಗೆದು ಸುಟ್ಟು, ಅವಶೇಷಗಳನ್ನು ಕೆರೆಗೆ ಎಸೆದಿದ್ದ. ಬಳಿಕ ಪ್ರಕರಣಕ್ಕೆ ಸಾಕ್ಷ್ಯ ಇಲ್ಲದಂತೆ ಮಾಡಲು, ಮೃತ ವ್ಯಕ್ತಿ ಕಾಣೆಯಾದ ಬಗ್ಗೆ ನಾಟಕ ಸೃಷ್ಟಿಸಿ ಕುಟುಂಬದೊಂದಿಗೆ ಕನಿಕರದಿಂದಿದ್ದ ದುಷ್ಟನ ನಿಜಬಣ್ಣ ಬಯಲಾಗಿದೆ.

ಕೊಲೆ ಪ್ರಕರಣದ ಸಂಬಂಧ ಇಲ್ಲಿನ ಇನ್ಫೋಸಿಟಿಯಲ್ಲಿ ವಿಧಿ ವಿಜ್ಞಾನ ತಂಡದೊಂದಿಗೆ ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ಸಾಧಿಕ್ ಪಾಷಾ ನೇತೃತ್ವದಲ್ಲಿ ಕಾರ್ಯಚರಣೆಯಲ್ಲಿ ಹತ್ಯೆಗೀಡಾಗಿದ್ದ ದೇವರಾಜು ಅಸ್ಥಿಪಂಜರ ತಾಲೂಕಿನ ಮಧುರೆ ಕೆರೆಯಲ್ಲಿ ಪತ್ತೆಯಾಗಿದೆ.

ಕಳೆದ ಅಕ್ಟೋಬರ್‌ 17ರಂದು ಬಾಶೆಟ್ಟಿಹಳ್ಳಿ ನಿವಾಸಿ ದೇವರಾಜು(65) ಕಾಣೆಯಾಗಿದ್ದಾರೆ ಎಂದು ಆತನ ಕುಟುಂಬಸ್ಥರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗ್ರಾಮಾಂತರ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಿಸಿ, ಕೊಲೆ ಆರೋಪಿಗಳಾದ ರಾಜಕುಮಾರ್ ಮತ್ತು ಅನಿಲ್‌ರನ್ನು ವಶಕ್ಕೆ ಪಡೆದು ಕೊಲೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಘಟನೆ ವಿವರ: ತಾನು ಕೊಡಬೇಕಿದ್ದ ಹಣ ವಾಪಸ್ ಕೊಡುವುದಾಗಿ ಹೇಳಿ ಕೊಲೆ ಆರೋಪಿ ರಾಜಕುಮಾರ್, ದೇವರಾಜು ಅವರನ್ನು ಕಾರಿನಲ್ಲಿ ಕರೆದೊಯ್ದು ಗೌರಿಬಿದನೂರು ಸಮೀಪ ಹಗ್ಗದಿಂದ ನೇಣು ಬಿಗಿದು ಕೊಂದಿದ್ದಾನೆ. ಅಲ್ಲಿಂದ ನೇರವಾಗಿ ಇನ್ಪೋಸಿಟಿಯ ತನ್ನ ಸೈಟ್‌ನಲ್ಲಿ ಮೊದಲೇ ಸಿದ್ಧಪಡಿಸಿದ್ದ ಗುಂಡಿಯಲ್ಲಿ ಶವ ಹಾಕಿ ಮುಚ್ಚಲಾಗಿದೆ. ನಂತರ ಸಾಕ್ಷಿ ಸಿಗದಂತೆ ದೇವರಾಜ್ ಶವವನ್ನು ಗುಂಡಿಯಿಂದ ಹೊರ ತೆಗೆದು ಪೆಟ್ರೋಲ್ ಸುರಿದು ಸುಟ್ಟು, ಬೂದಿ ಮತ್ತು ಅಸ್ಥಿಪಂಜರವನ್ನು ತಾಲೂಕಿನ ಮಧುರೆ ಕೆರೆಯಲ್ಲಿ ಬಿಸಾಡಿದ್ದಾನೆ. ಪೊಲೀಸರು ಶವ ಹೂತಿದ್ಧ ಸ್ಥಳದಲ್ಲಿ ಮೃತ ದೇವರಾಜು ತಲೆಕೂದಲು ಮತ್ತು ಚಪ್ಪಲಿ ಸಂಗ್ರಹಿಸಿ, ಬಳಿಕ ಮಧುರೆ ಕೆರೆಯಲ್ಲಿ ಅಸ್ಥಿಪಂಜರ ದೊರೆತಿದ್ದು ತನಿಖೆ ಮುಂದುವರಿದಿದೆ.

ಕೊಲೆಯಾದ ದೇವರಾಜು ಯಾರು?

ದೇವರಾಜ್ ಸಹೋದರನ ಮಗ ಮೋಹನ್ ಕುಮಾರ್ ಮಾತನಾಡಿ, ಚೀಟಿ ಹಣ ಕೊಡುವುದಾಗಿ ಹೇಳಿ ಕರೆಸಿಕೊಂಡ ರಾಜಕುಮಾರ್, ತಮ್ಮ ಚಿಕ್ಕಪ್ಪ ದೇವರಾಜ್ ಅವರನ್ನು ಕೊಲೆ ಮಾಡಿದ್ದಾರೆ. ಚಿಕ್ಕಪ್ಪ ರಾಜಕುಮಾರ್ ಹಣದ ವ್ಯವಹಾರ ಮಾಡುತ್ತಿದ್ದರು. ಅವರು ಪಡೆದಿದ್ದ ಹಣ ಹಿಂತಿರುಗಿಸುವುದಾಗಿ ಕರೆದು ಈ ಕೃತ್ಯ ವೆಸಗಿದ್ದಾರೆ. ಪೊಲೀಸರು ಆರೋಪಿಗಳಿಗೆ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕಿದೆ ಎಂದರು.

ಮೃತ ದೇವರಾಜ್ ಪತ್ನಿ ಕಲಾವತಿ ಮಾತನಾಡಿ, ನಾನು ಬರುವುದಿಲ್ಲ ಎಂದು ಎಷ್ಟು ಬಾರಿ ಹೇಳಿದರೂ, ಬಿಡದೆ ಕರೆ ಮಾಡಿ ನೀವು ಬಂದರೆ ಚೀಟಿ ಹಣ ನೀಡುತ್ತೇನೆ ಎಂದು ರಾಜಕುಮಾರ್ ಬಲವಂತವಾಗಿ ನನ್ನ ಪತಿಯನ್ನು ಕರೆಸಿಕೊಂಡು ಈ ಕೃತ್ಯವೆಸಗಿದ್ದಾನೆ. ರಾಜಕುಮಾರ್ ಆಗಾಗ ಹಣ ಪಡೆದು ಹಿಂದಿರುಗಿಸುತ್ತೇನೆ ಎಂದು ಹೇಳುತ್ತಿದ್ದ, 70ರಿಂದ 80 ಲಕ್ಷ ರು. ಸಾಲ ಪಡೆದಿದ್ದ. ಇಂತಹ ವಿಶ್ವಾಸಘಾತುಕನಿಗೆ ಕಾನೂನು ಶಿಕ್ಷೆ ವಿಧಿಸಬೇಕಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

28ಕೆಡಿಬಿಪಿ2-

ಕೊಲೆಯಾದ ದೇವರಾಜ್.

28ಕೆಡಿಬಿಪಿ3-

ದೊಡ್ಡಬಳ್ಳಾಪುರದ ಮಧುರೆ ಕೆರೆಯಲ್ಲಿ ಅಸ್ಥಿಪಂಜರ ಪತ್ತೆ.