ಗ್ರಾಹಕರ ಹಣ ಎಗರಿಸಿದ್ದ ಕ್ಯಾಷಿಯರ್‌ ಎತ್ತಂಗಡಿ

| Published : Jun 08 2024, 12:36 AM IST

ಸಾರಾಂಶ

ಗ್ರಾಹಕನಿಗೆ ಗೊತ್ತಿಲ್ಲದಂತೆ ಆತನ ಖಾತೆಯಿಂದ ₹1.50 ಲಕ್ಷ ಹಣವನ್ನು ಡ್ರಾ ಮಾಡಿಕೊಂಡಿದ್ದ ಜಲನಗರದ ಅಂಚೆ ಕಚೇರಿ ಕ್ಯಾಷಿಯರ್ ಶ್ರೀಕಾಂತ ಶಿವೂರ ಅವರನ್ನು ಎತ್ತಂಗಿಡಿ ಮಾಡಿ ಆದೇಶ ಹೊರಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಗ್ರಾಹಕನಿಗೆ ಗೊತ್ತಿಲ್ಲದಂತೆ ಆತನ ಖಾತೆಯಿಂದ ₹1.50 ಲಕ್ಷ ಹಣವನ್ನು ಡ್ರಾ ಮಾಡಿಕೊಂಡಿದ್ದ ಜಲನಗರದ ಅಂಚೆ ಕಚೇರಿ ಕ್ಯಾಷಿಯರ್ ಶ್ರೀಕಾಂತ ಶಿವೂರ ಅವರನ್ನು ಎತ್ತಂಗಿಡಿ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಕುರಿತು ಜೂನ್ 3ರಂದು ಗ್ರಾಹಕರ ಹಣವನ್ನೇ ಡ್ರಾ ಮಾಡಿಕೊಂಡ ಕ್ಯಾಷಿಯರ್ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡಪ್ರಭ ವರದಿ ಪ್ರಕಟ ಮಾಡಿತ್ತು. ಈ ವರದಿಯನ್ನು ಆಧರಿಸಿ ಇದೀದ ಕ್ಯಾಷಿಯರ್‌ನನ್ನು ಎತ್ತಂಡಗಿ ಮಾಡಲಾಗಿದೆ.

ಜಲನಗರ ಪೋಸ್ಟ್ ಆಫೀಸ್‌ನಲ್ಲಿ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ ಶಿವೂರ ಎಂಬಾತ ಮಾಡಿದ್ದ ಅಕ್ರಮದ ಹಿನ್ನೆಲೆ ಗ್ರಾಹಕ ನಗರದ ನಿವಾಸಿ ಚೆನ್ನಬಸಯ್ಯ ಶಾಸ್ತ್ರೀಮಠ ಎಂಬುವವರು ಅಂಚೆ ಅಧೀಕ್ಷಕರಿಗೆ ದೂರು ನೀಡಿದ್ದರು. ದೂರು ಆಧರಿಸಿ ವಿಚಾರಣೆ ಮಾಡಿದಾಗ ಮೇಲ್ನೋಟಕ್ಕೆ ವಂಚನೆ ಆಗಿರುವುದು ಖಚಿತವಾಗುತ್ತಿದ್ದಂತೆ ಕ್ಯಾಷಿಯರ್ ಶ್ರೀಕಾಂತನನ್ನು ಇನ್ನೊಂದು ಅಂಚೆ ಕಚೇರಿಗೆ ಟ್ರಾನ್ಸ್‌ಫರ್ ಮಾಡಲಾಗಿದೆ. ಅದು ಕೂಡ ನಾನ್ ಕ್ಯಾಷ್‌ ಟ್ರಾಂಜಕ್ಷನ್ ಪೋಸ್ಟ್‌ಗೆ ನಿಯೋಜಿಸಲಾಗಿದೆ.

--

ಕೋಟ್

ತಮಗೆ ಆದ ಅನ್ಯಾಯದ ಬಗ್ಗೆ ಗ್ರಾಹಕ ಚೆನ್ನಬಸಯ್ಯ ಶಾಸ್ತ್ರೀಮಠ ಅವರು ಲಿಖಿತ ದೂರು ನೀಡಿದ್ದರು. ದೂರು ಆಧರಿಸಿ ಪ್ರಾಥಮಿಕ ಹಂತದಲ್ಲಿ ಕ್ಯಾಷಿಯರ್ ಶ್ರೀಕಾಂತ ಶಿವೂರ ಅವರನ್ನು ನಗರದ ಪ್ರಧಾನ ಅಂಚೆ ಕಚೇರಿಗೆ ವರ್ಗಾಯಿಸಿ, ಅಲ್ಲಿ ಹಣಕಾಸಿನ ವ್ಯವಹಾರ ಇಲ್ಲದ ಜಾಗಕ್ಕೆ ನಿಯೋಜನೆ ಮಾಡಲಾಗಿದೆ. ಅಕ್ರಮದ ಕುರಿತು ತನಿಖೆ ಮುಂದುವರದಿದ್ದು, ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ಮೇಲೆ ಖಂಡಿತ ಕ್ರಮ ಆಗಲಿದೆ.

-ಬಿ.ಎಸ್.ದಾಸರ, ಸಹಾಯಕ ಅಂಚೆ ಅಧೀಕ್ಷಕರು, ವಿಜಯಪುರ.