ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಂಭ್ರಮ ಜೋರಾಗಿದ್ದು, ಭಕ್ತರು ಶ್ರದ್ಧಾ-ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಂಢಿದ್ದ ಏಳು ದೇವರ ಪಲ್ಲಕ್ಕಿಗಳ ದರ್ಶನ ಪಡೆದು ಪುನೀತರಾದರು. ಜಾತ್ರಾ ಮಹೋತ್ಸವ ಅಂಗವಾಗಿ ಹೋಮ ಹವನ ಹಾಗೂ ಪಲ್ಲಕ್ಕಿ ಉತ್ಸವ ನಡೆದವು.
ಕನ್ನಡಪ್ರಭ ವಾರ್ತೆ ವಿಜಯಪುರ: ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಂಭ್ರಮ ಜೋರಾಗಿದ್ದು, ಭಕ್ತರು ಶ್ರದ್ಧಾ-ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಂಢಿದ್ದ ಏಳು ದೇವರ ಪಲ್ಲಕ್ಕಿಗಳ ದರ್ಶನ ಪಡೆದು ಪುನೀತರಾದರು.
ಜಾತ್ರಾ ಮಹೋತ್ಸವ ಅಂಗವಾಗಿ ಹೋಮ ಹವನ ಹಾಗೂ ಪಲ್ಲಕ್ಕಿ ಉತ್ಸವ ನಡೆದವು. ಈ ಪಲ್ಲಕ್ಕಿ ಉತ್ಸವದಲ್ಲಿ ಏಳು ಊರಿನ ಪಲ್ಲಕ್ಕಿಗಳು ಭಾಗವಹಿಸಿದ್ದವು. ಕೊಂತೇವ್ವನ ಬಬಲಾದಿ ಕುಂತಾದೇವಿಯ ಪಲ್ಲಕ್ಕಿ, ಧರಿಬಡಚಿಯ ನಾಗಪ್ಪ ಒಡೆಯನ ಪಲ್ಲಕ್ಕಿ, ಇಂದಾಪುರ ಬಳ್ಳೋಗವಿಸಿದ್ದನ ಪಲ್ಲಕ್ಕಿ, ಅಚ್ಛೆಗಾಂವದ ಶೀಲಸಿದ್ದನ ಪಲ್ಲಕ್ಕಿ, ತಿಕ್ಕುಂಡಿಯ ಮುತ್ತಪ್ಪ ಒಡೆಯನ ಪಲ್ಲಕ್ಕಿ ಹಾಗೂ ಕವಲಗುಡ್ಡದ ಕರಿಯೋಗಸಿದ್ಧನ ಪಲ್ಲಕ್ಕಿಗಳು ಭಾಗವಹಿಸಿದ್ದು, ಜನರು ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದು. ಅಲ್ಲದೇ, ಜಾತ್ರೆ ಮಹೋತ್ಸವದಲ್ಲಿ ವಿವಿಧ ಭಾಗಗಳ ನೂರಾನು ಭಕ್ತು ಭಾಗವಹಿಸಿದ್ದು, ಉತ್ಸವ ಸಂಭ್ರಮದಿಂದ ನಡೆಸಲಾಯಿತು. ಕಾತ್ರೋತ್ಸವದ ಅಂಗವಾಗಿ ರಾತ್ರಿ ಡೊಳ್ಳಿನ ಪದಗಳ ಗಾಯನ ಹಮ್ಮಿಕೊಳ್ಳಲಾಗಿತ್ತು.