ಕೇಂದ್ರ ಬಿಜೆಪಿ ಸರ್ಕಾರ ರೈತರ ಒಂದು ರು. ಸಾಲ ಮನ್ನಾ ಮಾಡಿಲ್ಲ-ಶಾಸಕ ಶ್ರೀನಿವಾಸ ಮಾನೆ

| Published : Mar 30 2024, 12:57 AM IST / Updated: Mar 30 2024, 12:58 AM IST

ಕೇಂದ್ರ ಬಿಜೆಪಿ ಸರ್ಕಾರ ರೈತರ ಒಂದು ರು. ಸಾಲ ಮನ್ನಾ ಮಾಡಿಲ್ಲ-ಶಾಸಕ ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಅಧಿಕಾರದ ಅವಧಿಯಲ್ಲಿ ಶ್ರೀಮಂತರ ಪರ ಕೆಲಸ ಮಾಡಿ ೫ ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಿದೆ. ಆದರೆ ರೈತರ ಒಂದು ರು.ಸಾಲ ಮನ್ನಾ ಮಾಡಿಲ್ಲ, ಸರ್ಕಾರಗಳ ಸಾಧನೆಯನ್ನು ಗಮನಿಸಿ ವಿನೋದ ಅಸೂಟಿಯವರನ್ನು ಗೆಲ್ಲಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಶಿಗ್ಗಾವಿ: ಬಿಜೆಪಿ ಅಧಿಕಾರದ ಅವಧಿಯಲ್ಲಿ ಬೆಲೆ ಏರಿಕೆ, ಅತಿವೃಷ್ಟಿ, ಅನಾವೃಷ್ಟಿಗಳಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದ್ದು, ಬಿಜೆಪಿ ಸರ್ಕಾರ ಬಡವರ ಬಗ್ಗೆ ಕಿಂಚಿತ್ತು ಚಿಂತಿಸದೆ, ಶ್ರೀಮಂತರ ಪರ ಕೆಲಸ ಮಾಡಿ ೫ ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಿದೆ. ಆದರೆ ರೈತರ ಒಂದು ರುಪಾಯಿ ಸಾಲ ಮನ್ನಾ ಮಾಡಿಲ್ಲ, ಪ್ರಚೋದನಕಾರಿ, ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡದೆ, ಸರ್ಕಾರಗಳ ಸಾಧನೆಯನ್ನು ಗಮನಿಸಿ ವಿನೋದ ಅಸೂಟಿಯವರನ್ನು ಗೆಲ್ಲಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಪಟ್ಟಣದ ಸಂತೆ ಮೈದಾನದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರಾರ್ಥವಾಗಿ ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಧಾರವಾಡ ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹಾಕಿಕೊಟ್ಟ ಮಾರ್ಗದಲ್ಲಿ ಹಾಗೂ ಬಸವ ತತ್ವದ ಆಧಾರದ ಮೇಲೆ ಕಾಂಗ್ರೆಸ ನಡೆಯುತ್ತಿದ್ದು, ಈ ಕಾರಣದಿಂದಾಗಿ ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದೇನೆ, ಜಾತಿ, ಮತ ಧರ್ಮಗಳನ್ನು ಮೀರಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೊರಟಿರುವ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಿದೆ. ಬಿಜೆಪಿ ರೈತರು ಸಾಲ ಮಾಡುವಂತೆ ಮಾಡಿದೆ. ಜನಸೇವೆಯೇ ನನ್ನ ಮುಖ್ಯ ಗುರಿ, ಈ ಬಾರಿ ನನಗೆ ಆಶೀರ್ವಾದ ಮಾಡಿ ನಾನು ಸದಾ ನಿಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.ಕಾಂಗ್ರೆಸ್ ಮುಖಂಡ ಯಾಸೀರಖಾನ ಪಠಾಣ ಮಾತನಾಡಿ, ಈ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ, ಒಂದೇ ಒಂದು ಕೆಡಿಪಿ ಸಭೆಯನ್ನೂ ಮಾಡಿಲ್ಲ, ಈ ಕ್ಷೇತ್ರದ ಸಂಸದ ಪ್ರಹ್ಲಾದ್‌ ಜೋಶಿ ಜನರ ಕಷ್ಟವನ್ನು ಆಲಿಸದೆ ಇಬ್ಬರೂ ಕ್ಷೇತ್ರಕ್ಕೆ ಮೋಸಮಾಡಿದ್ದಾರೆ. ವಿನೋದ ಅಸೂಟಿಯವರಿಗೆ ಈ ಕ್ಷೇತ್ರದಲ್ಲಿ ೧ ಲಕ್ಷ ಮತಗಳಿಗಿಂತ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಆರಿಸಿ ತರೋಣ ಎಂದರು.ವಿ.ಪ. ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಕೇಂದ್ರದ ಸವಲತ್ತುಗಳನ್ನು ಕ್ಷೇತ್ರಕ್ಕೆ ತರುವಲ್ಲಿ ವಿನೋದ ಅಸೂಟಿಯವರು ಪ್ರಾಮಾಣಿಕ ಪ್ರಯತ್ನ ಮಾಡುವ ವ್ಯಕ್ತಿ ಯಾಗಿದ್ದು, ಬಸವರಾಜ ಬೊಮ್ಮಾಯಿಯವರ ಆಟ ನಡೆಯದೆ, ಹಾವೇರಿ ಮತ್ತು ಧಾರವಾಡ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಉಪ ಸಭಾಪತಿ ರುದ್ರಪ್ಪ ಲಮಾಣಿ, ಐ.ಜಿ. ಸನದಿ, ಅನೀಲ ಪಾಟೀಲ, ಸವಣೂರನ ಎಸ್.ಬಿ, ಪಾಟೀಲ ಮಾತನಾಡಿದರು.ಶಾಕೀರ ಸನದಿ, ಸಂಜೀವ ನೀರಲಗಿ, ಪ್ರೇಮಾ ಪಾಟೀಲ, ರಾಜೇಶ್ವರಿ ಪಾಟೀಲ, ಶಿವಾನಂದ ರಾಮಗೇರಿ, ಎಸ್.ವಿ. ಪಾಟೀಲ್, ಗುಡ್ಡಪ್ಪಾ ಜಲದಿ, ಠಾಕನಗೌಡ ಪಾಟೀಲ, ಶಿವಾನಂದ ರಾಮಗೇರಿ, ರಾಜು ಕುನ್ನೂರ, ಶಿಗ್ಗಾವಿ, ಸವಣೂರ ತಾಲೂಕು ಅಧ್ಯಕ್ಷ ಬಿ.ಸಿ. ಪಾಟೀಲ, ಎಂ.ಜೆ. ಮುಲ್ಲಾ ಚಂದ್ರಣ್ಣ ನಡುವಿನಮನಿ, ನಂಜಯ್ಯನಮಠ, ಸೇರಿದಂತೆ ಪ್ರಮುಖರು ಇದ್ದರು. ಸುಧೀರ ಅಂಗಡಿ(ಲಮಾಣಿ) ಸ್ವಾಗತಿಸಿದರು. ಎಸ್.ಎಫ್. ಮಣಕಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಾಜಿ ಶಾಸಕ ಖಾದ್ರಿ ಕಡೆಗಣನೆ: ಕಾರ್ಯಕ್ರಮದಲ್ಲಿ ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಜೀಂಪೀರ ಎಸ್. ಖಾದ್ರಿಯವರನ್ನು ಕಡೆಗಣಿಸಲಾಗಿದ್ದು, ಕ್ಷೇತ್ರದ ಕಾಂಗ್ರೆಸ್ ಒಳಗಿನ ಮುಸುಕಿನ ಗುದ್ದಾಟಕ್ಕೆ ಪುಷ್ಟಿಕೊಡುವಂತೆ ಕಾಣುತ್ತಿತ್ತು.