ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಅಡಕೆ ಮಂಡಳಿ ಸ್ಥಾಪಿಸಲಿ

| Published : Mar 13 2025, 12:50 AM IST

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಅಡಕೆ ಮಂಡಳಿ ಸ್ಥಾಪಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಅಡಕೆ ಬೆಳೆಗಾರರ ದೀರ್ಘಕಾಲಿಕ ಹಿತಕ್ಕಾಗಿ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಬಿಹಾರದಲ್ಲಿರುವ ಮಖಾನಾ ಮಂಡಳಿ ಮಾದರಿಯಲ್ಲಿ ''ಅಡಕೆ ಮಂಡಳಿ'' ಸ್ಥಾಪಿಸಬೇಕು ಎಂದು ನವದೆಹಲಿಯ ಸಂಸತ್ ಅಧಿವೇಶನದಲ್ಲಿ ದಾವಣಗೆರೆ ಸಂಸದೆ ದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಅಡಕೆ ಆಮದು ಶುಲ್ಕ ಹೆಚ್ಚಿಸಬೇಕು, ಅಕ್ರಮ ಆಮದು ತಡೆಯಬೇಕು ಎಂದು ಒತ್ತಾಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಅಡಕೆ ಬೆಳೆಗಾರರ ದೀರ್ಘಕಾಲಿಕ ಹಿತಕ್ಕಾಗಿ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಬಿಹಾರದಲ್ಲಿರುವ ಮಖಾನಾ ಮಂಡಳಿ ಮಾದರಿಯಲ್ಲಿ ''ಅಡಕೆ ಮಂಡಳಿ'' ಸ್ಥಾಪಿಸಬೇಕು ಎಂದು ನವದೆಹಲಿಯ ಸಂಸತ್ ಅಧಿವೇಶನದಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಸದನದ ಪ್ರಶ್ನೋತ್ತರ ವೇಳೆಯಲ್ಲಿ ‌ಕರ್ನಾಟಕದಲ್ಲಿ ಅತ್ಯವಶ್ಯಕ ಆಗಿರುವ ಅಡಕೆ ಮಂಡಳಿ ಸ್ಥಾಪನೆ ಬಗ್ಗೆ ಗಮನ ಸೆಳೆದ ಸಂಸದರು, ಕರ್ನಾಟಕವು ಅಡಕೆ ಬೆಳೆ ಬೆಳೆಯುತ್ತಿರುವ ಪ್ರಮುಖ ರಾಜ್ಯವಾಗಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ 40%ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ಈ ಬೆಳೆಯನ್ನು ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ನನ್ನ ಲೋಕಸಭಾ ಕ್ಷೇತ್ರ ದಾವಣಗೆರೆಯಲ್ಲಿಯೂ ವ್ಯಾಪಕವಾಗಿ ಅಡಕೆ ಬೆಳೆಸಲಾಗುತ್ತಿದೆ ಎಂದರು.

ಹಿಂದಿನಿಂದಲೂ ಕರಾವಳಿ, ಮಲೆನಾಡು ಹಾಗೂ ಅರ್ಧ ಮಲೆನಾಡು ಪ್ರದೇಶಗಳಲ್ಲಿ ಬೆಳೆಸಲಾಗುತ್ತಿರುವ ಅಡಕೆ ಈಗ ಸಮತಟ್ಟು ಪ್ರದೇಶಗಳಿಗೂ ವಿಸ್ತರಿಸಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಬೆಳೆಯೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಜೀವನ ನಿರ್ವಹಿಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆಗಾರರು ಹಲವಾರು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಡಕೆ ಬೆಳೆಯು ಬೇರು ಕೊಳೆರೋಗ, ಹಳದಿಎಲೆ ಚುಕ್ಕಿ ಇತ್ಯಾದಿ ರೋಗಗಳಿಗೆ ತುತ್ತಾಗುತ್ತಿದೆ. ಬೆಳೆಯ ಉತ್ಪಾದನೆಗೆ ತೀವ್ರ ಪರಿಣಾಮ ಬೀರುತ್ತಿದೆ ಎಂದರು.

ವಿದೇಶಗಳಿಂದ ಅಕ್ರಮವಾಗಿ ಅಡಕೆ ಆಮದು ಆಗುತ್ತಿರುವುದರಿಂದ ಬೆಲೆ ಕುಸಿತವು ಸಂಭವಿಸಿದೆ. ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಲೆ ಸ್ಥಿರತೆ ಇಲ್ಲದಿರುವುದು ಹಾಗೂ ನಿಯಂತ್ರಣ ಕೊರತೆಯಿಂದಾಗಿ ರೈತರು ಮಾರುಕಟ್ಟೆಯ ಅಸ್ಥಿರತೆ ಎದುರಿಸುತ್ತಿದ್ದಾರೆ. ಆದ್ದರಿಂದ, ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವಾಲಯ ಅಡಕೆ ಬೆಲೆಗೆ ನಿಯಂತ್ರಣ ಒದಗಿಸಬೇಕು, ಆಮದು ಶುಲ್ಕ ಹೆಚ್ಚಿಸಬೇಕು ಮತ್ತು ಅಕ್ರಮ ಆಮದುಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಅಡಕೆ ಬೆಳೆಗಾರರ ದೀರ್ಘಕಾಲಿಕ ಹಿತಕ್ಕಾಗಿ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ''''ಅಡಕೆ ಮಂಡಳಿ'''' ಸ್ಥಾಪಿಸಬೇಕು. ಅಡಕೆ ಬೆಳೆಗಾರರ ಹಿತಕಾಪಾಡಲು ಸದಾ ಸಿದ್ಧ ಎಂದು ಸಂಸದರು ಸದನದ ಗಮನ ಸೆಳೆದರು.

- - -

-12ಕೆಡಿವಿಜಿ42: ಡಾ.ಪ್ರಭಾ ಮಲ್ಲಿಕಾರ್ಜುನ್