ಪಕ್ಷನಿಷ್ಠೆಗೆ ಒಲಿದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷಗಿರಿ

| Published : Oct 16 2025, 02:00 AM IST

ಪಕ್ಷನಿಷ್ಠೆಗೆ ಒಲಿದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷಗಿರಿ
Share this Article
  • FB
  • TW
  • Linkdin
  • Email

ಸಾರಾಂಶ

31 ವರ್ಷಗಳಿಂದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತ ರಾಜಕೀಯ ಕ್ಷೇತ್ರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಪಕ್ಷನಿಷ್ಠೆ ವಿಷಯ ಬಂದಾಗ ಯಾರೊಂದಿಗೂ ರಾಜೀಯಾಗದೇ ಅನೇಕ ಸ್ನೇಹಿತರು, ಬಂಧುಗಳನ್ನು ದೂರ ಮಾಡಿಕೊಂಡಿದ್ದೆ. ನನಗೆ ಕಾಂಗ್ರೆಸ್ ಪಕ್ಷವೇ ಸರ್ವಸ್ವವಾಗಿದೆ ಎಂದು ಜಿಲ್ಲಾಧ್ಯಕ್ಷ ಹಾಗೂ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದ್ದಾರೆ.

- ಹೊನ್ನಾಳಿ ಪಟ್ಟಣದಲ್ಲಿ ಸನ್ಮಾನ ಸ್ವೀಕರಿಸಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಅಭಿಮತ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

31 ವರ್ಷಗಳಿಂದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತ ರಾಜಕೀಯ ಕ್ಷೇತ್ರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಪಕ್ಷನಿಷ್ಠೆ ವಿಷಯ ಬಂದಾಗ ಯಾರೊಂದಿಗೂ ರಾಜೀಯಾಗದೇ ಅನೇಕ ಸ್ನೇಹಿತರು, ಬಂಧುಗಳನ್ನು ದೂರ ಮಾಡಿಕೊಂಡಿದ್ದೆ. ನನಗೆ ಕಾಂಗ್ರೆಸ್ ಪಕ್ಷವೇ ಸರ್ವಸ್ವವಾಗಿದೆ ಎಂದು ಜಿಲ್ಲಾಧ್ಯಕ್ಷ ಹಾಗೂ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಮಂಗಳವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಎಚ್.ಬಿ.ಮಂಜಪ್ಪ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹೊನ್ನಾಳಿ ಖಾದಿ ಗ್ರಾಮೋದ್ಯೋಗ ಸಹಾಕಾರಿ ಸಂಘ ಅಧ್ಯಕ್ಷ, ನಂತರ ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿ ದುಡಿದಿದ್ದೇನೆ. ತಾಲೂಕು ಪಂಚಾಯಿತಿ, ಯುವ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದೇನೆ. ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಮನೂರು ಕುಟುಂಬದ ಹಿರಿಯ ರಾಜಕಾರಣಿ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಅಭಿಮಾನದ ಫಲವಾಗಿ ಇಂದು ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿ ನೇಮಕಗೊಂಡಿದ್ದೇನೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಸಣ್ಣಕ್ಕಿ ಬಸನವಗೌಡ, ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಆರ್.ನಾಗಪ್ಪ ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ, ಹರಿಹರದ ಮಾಜಿ ಶಾಸಕ ರಾಮಪ್ಪ,ದಾವಣಗೆರೆ ಡಿಸಿಸಿ ಬ್ಯಾಂಕ್ ಮುದೇಗೌಡ್ರ ಗಿರೀಶ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಸವರಾಜಪ್ಪ, ಡಿ.ಜಿ.ವಿಶ್ವನಾಥ, ಹೊದಿಗೆರೆ ರಮೇಶ್, ಕೆ.ಷಣ್ಮುಪ್ಪ, ಶಿಕಾರಿಪುರ ಮುಖಂಡ ಗೋಣಿ ಮಹಾಂತೇಶ್, ಪುರಸಭೆ ಸದಸ್ಯ ಧರ್ಮಪ್ಪ ಚಮನ್ ಸಾಬ್, ಡಾ.ಈಶ್ವರ ನಾಯ್ಕ, ವರದರಾಜಪ್ಪ ಗೌಡ, ಚಂದ್ರಶೇಖರಪ್ಪ, ಮುಂತಾದವರು ಮಾತನಾಡಿದರು.

ಕುರುಬ ಸಮಾಜ ಸೇರಿದಂತೆ ವೀರಶೈವ ಲಿಂಗಾಯಿತ, ಬಂಜಾರ ಸಂಘಗಳು, ವಿವಿಧ ಸಮುದಾಯಗಳು ಎಚ್.ಬಿ.ಮಂಜಪ್ಪ ಅವರಿಗೆ ಸನ್ಮಾನಿಸಿದರು. ಸಾವಿರಾರು ಅಭಿಮಾನಿಗಳು ಮಂಜಪ್ಪ ಅವರನ್ನು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅದ್ಧೂರಿ ಮೆರವಣಿಗೆ ಮೂಲಕ ಹಿರೇಕಲ್ಮಠದ ಸಮುದಾಯ ಭವನದ ವೇದಿಕೆಗೆ ಕರೆತರಲಾಯಿತು.

ಇದೇ ವೇಳೆ ಕುರುಬ ಸಮಾಜದಿಂದ ಕರಿ ಕಂಬಳಿ ಮತ್ತು ಕುರಿ ಹಾಗೂ ಬೆಳ್ಳಿಗದೆಗಳನ್ನು ನೀಡಿ ಎಚ್.ಬಿ.ಮಂಜಪ್ಪ, ಶಾಸಕ ಡಿ.ಜಿ.ಶಾಂತನಗೌಡ ಅವರನ್ನು ಸನ್ಮಾನಿಸಲಾಯಿತು.

ಮುಖಂಡ ವಸಂತ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕುರುಬ ಸಮಾಜದ ಮೋಹನ್, ವಾಗೀಶ್, ಸೇರಿದಂತೆ ಪುಟ್ಟಪ್ಪ, ಬೆನಕಪ್ಪ, ವಾಸಪ್ಪ, ವಿಜೇಂದ್ರಪ್ಪ, ಎಚ್.ಬಿ.ಅಣ್ಣಪ್ಪ, ಮುಖಂಡ ಗದ್ದಿಗೇಶ್, ಮಧುಗೌಡ, ನರಸಿಂಹಪ್ಪ, ತಮ್ಮಣ್ಣ ಪುರಸಭೆ ಅಧ್ಯಕ್ಷ ಮೈಲಪ್ಪ, ಉಪಾಧ್ಯಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ವಿವಿಧ ತಾಲೂಕುಗಳ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

- - -

(ಬಾಕ್ಸ್‌) * ಹೊಗಳಿಕೆಗೆ ಒಳ್ಳೆ ಮನಸ್ಸಿರಬೇಕು, ತೆಗಳಿಕೆಗೆ ಧೈರ್ಯವಿರಬೇಕು: ಶಾಸಕ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅ‍ವರ ತಂದೆ ಎಚ್.ಬಿ.ಗಿಡ್ಡಪ್ಪ ಕೂಡ 36 ವರ್ಷಗಳಿಂದ ಕಾಂಗ್ರೆಸ್ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ. 25 ವರ್ಷಗಳಿಂದ ತಾನೂ ಕೆಲಸ ಮಾಡುತ್ತಿದ್ದೇನೆ. ಎಚ್.ಬಿ. ಮಂಜಪ್ಪ ಅವರೊಂದಿಗೆ ಸೇರಿ ಹೊನ್ನಾಳಿ ಕ್ಷೇತ್ರದಲ್ಲಿ ವಿವಿಧ ಹಂತ ಚುನಾವಣೆಗಳ ಸಂದರ್ಭ ಗೆಲ್ಲುವ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಗೆಲ್ಲಿಸುವ ಹಂತದವರೆಗೆ ಪಕ್ಷನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಹೊಗಳಿಕೆಗೆ ಒಳ್ಳೆ ಮನಸ್ಸಿರಬೇಕು, ತೆಗಳಿಕೆಗೆ ಧೈರ್ಯವಿರಬೇಕು ಎಂದು ಮಹಾತ್ಮರು ಹೇಳಿದ್ದಾರೆ. ಅದರಂತೆ ಉತ್ತಮ ಮನಸ್ಸಿನಿಂದ ಎಚ್.ಬಿ.ಮಂಜಪ್ಪ ಅವರನ್ನು ಅಭಿನಂದಿಸಿದ್ದೇನೆ ಎಂದರು.

- - -

-14ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಹಿರೇಕಲ್ಮಠದಲ್ಲಿ ಮಂಗಳವಾರ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರಿಗೆ ಬೆಳ‍್ಳಿಗದೆ ನೀಡಿ ಸನ್ಮಾನಿಸಲಾಯಿತು. ಶಾಸಕ ಡಿ.ಜಿ.ಶಾಂತನಗೌಡ ಇತರರು ಇದ್ದರು.