ಶಿಕ್ಷಕರಿಲ್ಲವೆಂದು ಬಿಇಒ ಕಚೇರಿಗೆ ಬಂದು ಕುಳಿತ ಮಕ್ಕಳು

| Published : Sep 03 2024, 01:39 AM IST

ಶಿಕ್ಷಕರಿಲ್ಲವೆಂದು ಬಿಇಒ ಕಚೇರಿಗೆ ಬಂದು ಕುಳಿತ ಮಕ್ಕಳು
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ನಮ್ಮ ಶಾಲೆಗೆ ಒಬ್ಬರೂ ಶಿಕ್ಷಕರೇ ಇಲ್ಲ ಎಂದು ವಿದ್ಯಾರ್ಥಿಗಳು ನಗರದ ಬಿಇಒ ಕಚೇರಿಗೆ ಬಂದು ಕುಳಿತಿರುವ ಘಟನೆ ಸೋಮವಾರ ನಡೆದಿದೆ. ರಾತ್ರಿಯಾದರೂ ಮಕ್ಕಳು ಬಿಇಒ ಕಚೇರಿಯಲ್ಲಿಯೇ ಕುಳಿತು ತಮ್ಮ ಶಾಲೆಗೆ ಶಿಕ್ಷಕರನ್ನು ಒದಗಿಸುವಂತೆ ಪಟ್ಟು ಹಿಡಿದಿದ್ದರು.

ಮೇಲಿನ ಹುಲವತ್ತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 9 ವಿದ್ಯಾರ್ಥಿಗಳು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಮ್ಮ ಶಾಲೆಗೆ ಒಬ್ಬರೂ ಶಿಕ್ಷಕರೇ ಇಲ್ಲ ಎಂದು ವಿದ್ಯಾರ್ಥಿಗಳು ನಗರದ ಬಿಇಒ ಕಚೇರಿಗೆ ಬಂದು ಕುಳಿತಿರುವ ಘಟನೆ ಸೋಮವಾರ ನಡೆದಿದೆ. ರಾತ್ರಿಯಾದರೂ ಮಕ್ಕಳು ಬಿಇಒ ಕಚೇರಿಯಲ್ಲಿಯೇ ಕುಳಿತು ತಮ್ಮ ಶಾಲೆಗೆ ಶಿಕ್ಷಕರನ್ನು ಒದಗಿಸುವಂತೆ ಪಟ್ಟು ಹಿಡಿದಿದ್ದರು.

ಚಿಕ್ಕಮಗಳೂರು ತಾಲೂಕು ಮೇಲಿನ ಹುಲವತ್ತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 9 ವಿದ್ಯಾರ್ಥಿಗಳು ಬಿಇಒ ಕಚೇರಿಯಲ್ಲಿ ಬಂದು ಕುಳಿತಿದ್ದಾರೆ. ಶಾಲೆಯಲ್ಲಿದ್ದ ಓರ್ವ ಶಿಕ್ಷಕರು ವರ್ಗಾವಣೆಯಾಗಿ ತೆರಳಿದ್ದಾರೆ. ಆದರೆ, ಶಾಲೆಗೆ ಹೊಸ ಶಿಕ್ಷಕರು ಬರುವ ಮುನ್ನವೇ ಹಳೆ ಶಿಕ್ಷಕರನ್ನು ರಿಲೀವ್ ಮಾಡಲಾಗಿದೆ.

ಹೀಗಾಗಿ ಮೇಲಿನ ಹುಲವತ್ತಿ ಗ್ರಾಮದ ಶಾಲೆಯಲ್ಲಿದ್ದ ಓರ್ವ ಶಿಕ್ಷಕರು ವರ್ಗಾವಣೆಯಾಗಿದ್ದು ಶಾಲೆಯಲ್ಲಿ ಯಾವುದೇ ಶಿಕ್ಷಕರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳಲ್ಲಿ ಯಾವುದೇ ಪಾಠ ಪ್ರವಚನಗಳು ನಡೆಯದ ಹಿನ್ನೆಲೆಯಲ್ಲಿ ಮಕ್ಕಳು ತಮಗೆ ಕೂಡಲೇ ಶಿಕ್ಷಕರನ್ನು ಒದಗಿಸುವಂತೆ ಒತ್ತಾಯಿಸಿ, ನೇರವಾಗಿ ಬಿಇಒ ಕಚೇರಿಗೆ ಬಂದು ಪಟ್ಟು ಹಿಡಿದು ಕುಳಿತಿದ್ದರು.

ಸ್ಥಳಕ್ಕೆ ಬಿಇಒ ಬಂದು ಶಾಲೆಗೆ ಶಿಕ್ಷಕರನ್ನು ಕಲ್ಪಿಸಬೇಕು ಅಲ್ಲಿಯವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ರಾತ್ರಿ 7.40 ರ ವೇಳೆಯವರಿಗೆ ಸ್ಥಳದಲ್ಲಿಯೇ ಕುಳಿತಿದ್ದರು. 2 ಕೆಸಿಕೆಎಂ 6ತಮ್ಮ ಶಾಲೆಗೆ ಶಿಕ್ಷಕರನ್ನು ಒದಗಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರಿನ ಬಿಇಒ ಕಚೇರಿ ಎದುರು ಸೋಮವಾರ ಕುಳಿತು ಕೊಂಡಿದ್ದ ಮೇಲಿನ ಹುಲವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.