ಆರತಿ ಬೆಳಗಿ, ತಿಲಕ ಇರಿಸಿ, ರಕ್ಷಾ ಬಂಧನ ಆಚರಿಸಿದ ಚಿಣ್ಣರು

| Published : Aug 11 2025, 01:39 AM IST

ಸಾರಾಂಶ

ಪುಟ್ಟ ಪುಟ್ಟ ಪುಟಾಣಿಗಳೇ ತುಂಬಿರುವ ಈ ಪ್ಲೇ ಸ್ಕೂಲ್‌ನಲ್ಲಿ ಶನಿವಾರ ಸಂಭ್ರಮ ಸಡಗರ ಮನೆಮಾಡಿತ್ತು. ಪುಷ್ಪಾಲಂಕೃತ ದೀವಿಗೆಯ ಸುತ್ತ ರಕ್ಷೆಯನ್ನಿಟ್ಟು ಆರತಿ ಬೆಳಗಿದ ಬಳಿಕ ತಿಲಕವಿಟ್ಟು,ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ಪುಟಾಣಿಗಳು ಸಂಭ್ರಮಿಸಿದರು. ಜೊತೆಗೆ ಒಬ್ಬರಿಗೊಬ್ಬರು ಸಿಹಿತಿಂಡಿ ಹಂಚಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದರು. ಹಿರಿಯರು ಅಕ್ಷತೆಯ ಮೂಲಕ ಹರಸಿದರು.

ಉಳ್ಳಾಲ: ಬಾಂಧವ್ಯ ಬೆಸೆಯುವ, ಒಗ್ಗಟ್ಟನ್ನು ಸಾಂಕೇತಿಸುವ ಬಂಧುತ್ವದ ಹಬ್ಬ ರಕ್ಷಾ ಬಂಧನ ನಾಡಿನೆಲ್ಲೆ ಶನಿವಾರ ನಡೆದಿದೆ. ದೇರಳಕಟ್ಟೆಯ ಚಿಲ್ಟನ್ ಪ್ಲೇ ಸ್ಕೂಲ್‌ನಲ್ಲಿಯೂ ವಿಶೇಷ ರೀತಿಯಲ್ಲಿ ರಕ್ಷಾ ಬಂಧನದ ಆಚರಣೆ ನಡೆಯಿತು. ಪುಟ್ಟ ಪುಟ್ಟ ಪುಟಾಣಿಗಳೇ ತುಂಬಿರುವ ಈ ಪ್ಲೇ ಸ್ಕೂಲ್‌ನಲ್ಲಿ ಶನಿವಾರ ಸಂಭ್ರಮ ಸಡಗರ ಮನೆಮಾಡಿತ್ತು. ಪುಷ್ಪಾಲಂಕೃತ ದೀವಿಗೆಯ ಸುತ್ತ ರಕ್ಷೆಯನ್ನಿಟ್ಟು ಆರತಿ ಬೆಳಗಿದ ಬಳಿಕ ತಿಲಕವಿಟ್ಟು,ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ಪುಟಾಣಿಗಳು ಸಂಭ್ರಮಿಸಿದರು. ಜೊತೆಗೆ ಒಬ್ಬರಿಗೊಬ್ಬರು ಸಿಹಿತಿಂಡಿ ಹಂಚಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದರು. ಹಿರಿಯರು ಅಕ್ಷತೆಯ ಮೂಲಕ ಹರಸಿದರು.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇಲ್ಲಿ ಎಳವೆಯಲ್ಲಿಯೇ ಸಂಸ್ಕಾರದ ದೀವಿಗೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಎಲ್ಲರ ಗಮನಸೆಳೆಯುತ್ತಿದೆ. ಸಂಸ್ಥೆಯ ಪ್ರಮುಖರಾದ ಅಮಿತಾ, ಚಂದ್ರಾವತಿ, ಮಕ್ಕಳನ್ನು ಜತನದಿಂದ ನೋಡಿಕೊಳ್ಳುವ ಸಂಧ್ಯಾ, ವಿದ್ಯಾ ಇವರುಗಳ ಮುತುವರ್ಜಿ ಇಲ್ಲಿ ಎದ್ದು ಕಾಣುತ್ತದೆ. ಪ್ರತಿಯೊಂದು ಆಚರಣೆಯನ್ನು ಇಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಮೂಲಕ ಮಕ್ಕಳಿಗೆ ಸಂಸ್ಕೃತಿಯ ಪುಟ್ಟ ಪಾಠ ಹೇಳಿಕೊಡಲಾಗುತ್ತಿದೆ.