ಮಕ್ಕಳಿಗೆ ಚಾಕಲೇಟ್ ನೀಡಿ ಉತ್ತರ ಪಡೆದ ಸಿಎಂ

| Published : Dec 18 2023, 02:00 AM IST

ಸಾರಾಂಶ

ಸಿಎಂ ಸಿದ್ದರಾಮಯ್ಯ ಭಾನುವಾರ ಗದಗ ನಗರದಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿದ್ದರು. ಅಲ್ಲಿದ್ದ ಮಕ್ಕಳಿಗೆ ಚಾಕಲೇಟ್ ನೀಡಿದ ಅವರು ಏನೇ ಇರಲಿ ಬಾಯಿ ಸಿಹಿ ಮಾಡೋಣ ಎನ್ನುವಂತೆ ಮಕ್ಕಳ ಪ್ರೀತಿಗೆ ಪಾತ್ರವಾದರು.

ಗದಗ: ಸಿಎಂ ಸಿದ್ದರಾಮಯ್ಯ ಭಾನುವಾರ ಗದಗ ನಗರದಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿದ್ದರು. ಅಲ್ಲಿದ್ದ ಮಕ್ಕಳಿಗೆ ಚಾಕಲೇಟ್ ನೀಡಿದ ಅವರು ಏನೇ ಇರಲಿ ಬಾಯಿ ಸಿಹಿ ಮಾಡೋಣ ಎನ್ನುವಂತೆ ಮಕ್ಕಳ ಪ್ರೀತಿಗೆ ಪಾತ್ರವಾದರು. ನಗರದ ಸಂಭಾಪುರ ರಸ್ತೆಯಲ್ಲಿ ₹1.99 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬಾಲಕಿಯರ ಬಾಲ ಮಂದಿರವನ್ನು ಭಾನುವಾರ ಉದ್ಘಾಟಿಸಿದ ಸಿದ್ದರಾಮಯ್ಯ ಬಾಲಕಿಯರ ಬಾಲ ಮಂದಿರದಲ್ಲಿರುವ ಮಕ್ಕಳಿಗೆ ಪ್ರಶ್ನೆ ಕೇಳಿ, ತಲೆ ಸವರಿ ಧೈರ್ಯ ತುಂಬಿ ಹುರುದುಂಬಿಸಿದರು.

ಬಾಲ ಮಂದಿರ ಲೋಕಾರ್ಪಣೆಗೊಳಿಸಿದ ನಂತರ ಗೋಡೆಯ ಮೇಲೆ ಗ್ರಾಮ ಸ್ವರಾಜ್ ಬಗ್ಗೆ ಬರೆದಿದ್ದನ್ನು ಗಮನಿಸಿದ ಸಿಎಂ ಅವರು ಗ್ರಾಮ ಸ್ವರಾಜ್​ ಕುರಿತು ಹಾಗೂ ರಾಷ್ಟ್ರಪಿತ ಯಾರೆಂದು ಮಕ್ಕಳಿಗೆ ಪ್ರಶ್ನಿಸಿದರು. ಮಕ್ಕಳು ಬಾಪೂಜಿ ಎಂದು ಉತ್ತರಿಸಿದರು. ಬಾಪೂಜಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟವರು ಎಂದ ಹೇಳುತ್ತಲೇ ಸಿದ್ದರಾಮಯ್ಯ ಅವರು ಮಕ್ಕಳಿಗೆ ಚಾಕಲೇಟ್​ ವಿತರಿಸಿ ಮಕ್ಕಳೊಂದಿಗೆ ಬೆರೆತು ವಿಶೇಷತೆ ಮತ್ತು ಸರಳತೆಯನ್ನು ಮೆರೆದರು. ಈ ಸಂದರ್ಭದಲ್ಲಿ ಸಚಿವ ಎಚ್​.ಕೆ. ಪಾಟೀಲ, ಶಾಸಕ ಜಿ.ಎಸ್​. ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.