ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಹೋರಾಟದ ಬಗ್ಗೆ ಸಿಎಂ ತಲೆ ಕೆಡಿಸಿಕೊಂಡಿದ್ದಾರೆ : ವಿಜಯೇಂದ್ರ

| N/A | Published : Apr 17 2025, 12:52 AM IST / Updated: Apr 17 2025, 01:10 PM IST

Karanataka BJP President, B Y Vijayendra (Photo/ANI)
ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಹೋರಾಟದ ಬಗ್ಗೆ ಸಿಎಂ ತಲೆ ಕೆಡಿಸಿಕೊಂಡಿದ್ದಾರೆ : ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಹೋರಾಟದ ಬಗ್ಗೆ ಸಿಎಂ ಸಿದ್ದರಾಮಯ್ಯ ತಲೆ ಕೆಡಿಸಿಕೊಂಡಿದ್ದಾರೆ. ಸಿಎಂ, ಡಿಸಿಎಂ, ಸಚಿವರು ಬರೀ ಬೆಂಗಳೂರಿಗೆ ಸೀಮಿತವಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದರು.

 ಬೆಳಗಾವಿ :   ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಹೋರಾಟದ ಬಗ್ಗೆ ಸಿಎಂ ಸಿದ್ದರಾಮಯ್ಯ ತಲೆ ಕೆಡಿಸಿಕೊಂಡಿದ್ದಾರೆ. ಸಿಎಂ, ಡಿಸಿಎಂ, ಸಚಿವರು ಬರೀ ಬೆಂಗಳೂರಿಗೆ ಸೀಮಿತವಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ದುಬಾರಿ ಸರ್ಕಾರದ ಬಗ್ಗೆ ನಾಡಿನ ಜನತೆ ತತ್ತರಿಸಿದ್ದಾರೆ. ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈಗ ಸಿಎಂಗೆ ಬಿಸಿ ತಟ್ಟಿದೆ. ಇದರ ಪರಿಣಾಮವಾಗಿ ಕಾಂಗ್ರೆಸ್ ಏ.17ರಂದು ಕೇಂದ್ರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.ಸಿಎಂ, ಸಚಿವರು ಹಳ್ಳಿಗಳಿಗೆ ಬಂದು ಆಡಳಿತ ಕೊಡಬೇಕು. ಬರೀ‌ ನಿಮ್ಮ ಗ್ಯಾರಂಟಿ ಅಧ್ಯಕ್ಷರಿಂದ ಆಗುವುದಿಲ್ಲ. 

ಗ್ಯಾರಂಟಿ ಯೋಜನೆಯಿಂದ ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಸಿಎಂಗೆ ಶಾಸಕರು ಹೋಗಿ ಅನುದಾನ ಕೇಳಿದರೆ ಗ್ಯಾರಂಟಿ ಕೊಟ್ಟಿದ್ದೇವೆ ಅಂತಾರೆ. ಪೆಟ್ರೋಲ್, ಹಾಲು, ನೀರು ಸೇರಿದಂತೆ ಜನರು ಬಳಸುವ 50 ಕ್ಕೂ ಹೆಚ್ಚು ವಸ್ತು ಬೆಲೆ ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಲಾರಿ ಮುಷ್ಕರವು ಆರಂಭವಾಗಿದೆ. ದೇಶದಲ್ಲಿ ಅತಿವೇಗವಾಗಿ ರಾಜ್ಯ ಸರ್ಕಾರ ತನ್ನ ಜನಪ್ರಿಯತೆ ಕಳೆದುಕೊಂಡಿದೆ. ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಇಡಿ ತನಿಖೆ ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎ1, ಎ2 ಆಗಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸುತ್ತಾರೆ. ಕಾನೂನಿಗಿಂತಲೂ ದೊಡ್ಡವರು ಯಾರು ಇಲ್ಲ ಎಂದರು.