5ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಾಮಗಾರಿ ವರದಿ ಕೇಳಿದ ಸಿಎಂ ಕಚೇರಿ

| Published : Oct 21 2024, 12:48 AM IST

5ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಾಮಗಾರಿ ವರದಿ ಕೇಳಿದ ಸಿಎಂ ಕಚೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ‘ಕೋಟ್ಯಂತರ ರು. ರಸ್ತೆ ಕಾಮಗಾರೀಲಿ ಗುಣಮಟ್ಟ ಕ್ಷೀಣ?’ ಎಂಬ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳ ಕಚೇರಿಯು ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದೆ.

ಕನ್ನಡಪ್ರಭ ವಾರ್ತೆ, ಬೀದರ್‌

ಸುಮಾರು 5ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆಯ ಕಾಮಗಾರಿಯ ಗುಣಮಟ್ಟದ ಅನುಮಾನವೆತ್ತಿದ್ದ ಕನ್ನಡಪ್ರಭ ವರದಿ ಮುಖ್ಯಮಂತ್ರಿಗಳ ಕಚೇರಿ ತಲುಪಿದ್ದು, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಈ ಕುರಿತಂತೆ ವರದಿ ನೀಡುವಂತೆ ಮುಖ್ಯಮಂತ್ರಿಗಳ ಕಚೇರಿ ಸೂಚಿಸಿದೆ.

ಭಾನುವಾರ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ‘ಕೋಟ್ಯಂತರ ರು. ರಸ್ತೆ ಕಾಮಗಾರೀಲಿ ಗುಣಮಟ್ಟ ಕ್ಷೀಣ?’ ಎಂಬ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳ ಕಚೇರಿಯು ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದೆ.

ಇಲ್ಲಿನ ಪಾಪನಾಶ ಗೇಟ್‌ನಿಂದ ಬರೀದಶಾಹಿ ಉದ್ಯಾನದ ವರೆಗೆ (1.1ಕಿಮೀ) ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುತ್ತಿಲ್ಲ ಎಂದು ಸಾರ್ವಜನಿ ಕರು ಆರೋಪಿಸಿದ್ದಲ್ಲದೆ ರಸ್ತೆಯ ಮತ್ತೊಂದು ಬದಿಯಲ್ಲಿ ಕಲ್ಲುಗಳು ಹಾಸುಹೊಕ್ಕಾಗಿ ಬಿದ್ದಿರುವುದು ವಾಹನ ಸವಾರರಿಗೆ ಸಂಚಕಾರ ತಂದೊಡ್ಡಿದೆ. ಅಷ್ಟೇ ಅಲ್ಲ ರಸ್ತೆ ನಿರ್ಮಾಣ ಕಾಮಗಾರಿಯು ನಿಯಮಿತವಾಗಿಲ್ಲ ಎಂಬ ಆರೋಪವೂ ಇದೆ. ರಸ್ತೆಯನ್ನು ತೋಡಿ ಮರು ನಿರ್ಮಾಣಕ್ಕೆ ಮುಂದಾಗಬೇಕಾದ ಗುತ್ತಿಗೆದಾರರು ಕೆಲವೇ ಇಂಚುಗಳಷ್ಟು ರಸ್ತೆ ತೋಡಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಇನ್ನು ರಸ್ತೆಯ ಎತ್ತರ ಹೆಚ್ಚಳವಾದಲ್ಲಿ ಅಕ್ಕಪಕ್ಕದಲ್ಲಿರುವ ಅಂಗಡಿ ಮುಂಗಟ್ಟುಗಳ ಒಳಗೆ ಮಳೆ ನೀರು ಹೊಕ್ಕುವದರಲ್ಲಿ ಅನುಮಾನವಿಲ್ಲ. ಚರಂಡಿ ನಿರ್ಮಾಣ ಅನಿವಾರ್ಯ ವಾಗಲಿದೆ. ಅಷ್ಟಕ್ಕೂ ಹೊಸದಾಗಿ ನಿರ್ಮಾಣ ಮಾಡುವ ರಸ್ತೆಯ ಗುಣಮಟ್ಟ ಕಾಪಾಡುವದಕ್ಕೆ ರಸ್ತೆಯನ್ನು ಟೆಂಡರ್‌ನ ನಿಯಮಾವಳಿಗಳಂತೆ ತೋಡಬೇಕಾಗಿರುವದು ಗುತ್ತಿಗೆದಾರರ ಕರ್ತವ್ಯ ಇಲ್ಲಿ ಎಡವಲಾಗಿದೆ ಎಂದೂ ಆರೋಪಿಸಲಾಗುತ್ತಿರುವದು ವಿಶೇಷ. ಇತ್ತ ಲೋಕೋಪಯೋಗಿ ಇಲಾಖೆ ಗಂಭೀರವಾಗಬೇಕು. ರಸ್ತೆ ನಿರ್ಮಿಸುತ್ತಿರುವ ಗುತ್ತಿಗೆದಾರರಿಗೆ ಮತ್ತೊಂದು ಬದಿಯ ರಸ್ತೆಯ ಮೇಲೆಲ್ಲ ಚೆಲ್ಲಾಪಿಲ್ಲಿಯಾಗಿರುವ ಕಲ್ಲುಗಳನ್ನು ತೆಗೆದು ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಕಿವಿ ಹಿಂಡುವ ಕೆಲಸ ಮಾಡಬೇಕಿದೆ.ಫೈಲ್‌ 20ಬಿಡಿ7