ಕೆಲವು ಉಚ್ಚಾಟಿತರು ಪಂಚಮಸಾಲಿ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಗೊಂದಲ ಸೃಷ್ಟಿಸುವವರಿಗೆ ಸಮುದಾಯದ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಜನರನ್ನು ಇಬ್ಭಾಗ ಮಾಡುವ ಪ್ರಯತ್ನವನ್ನು ಸಮಾಜ ಸಹಿಸುವುದಿಲ್ಲ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಅಧ್ಯಕ್ಷ ಶಂಕರ ಬಿಸರಹಳ್ಳಿ ಹೇಳಿದರು.
ಹಾವೇರಿ:ಕೆಲವು ಉಚ್ಚಾಟಿತರು ಪಂಚಮಸಾಲಿ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಗೊಂದಲ ಸೃಷ್ಟಿಸುವವರಿಗೆ ಸಮುದಾಯದ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಜನರನ್ನು ಇಬ್ಭಾಗ ಮಾಡುವ ಪ್ರಯತ್ನವನ್ನು ಸಮಾಜ ಸಹಿಸುವುದಿಲ್ಲ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಅಧ್ಯಕ್ಷ ಶಂಕರ ಬಿಸರಹಳ್ಳಿ ಹೇಳಿದರು.
ನಗರದ ಹುಕ್ಕೇರಿಮಠದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ಸಂಘವೇ ಅಧಿಕೃತ ಸಂಘವಾಗಿದೆ. ಸುಮಾರು ಐದು ಸಾವಿರ ಜನರು ಸಭೆಯಲ್ಲಿ ಪಾಲ್ಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಉಚ್ಚಾಟಿತರು ಕೂಡಿಕೊಂಡು ಸಮಾಜವನ್ನು ಒಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಗೊಂದಲಗಳಿಗೆ ಸಮಾಜದ ಜನರು ಕಿವಿಗೊಡಬಾರದು ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ `ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ''''''''ದ ಹೆಸರಿನಲ್ಲಿ ಸಮುದಾಯದ ಒಂದು ಬಣದ ಮುಖಂಡರು ವಾರ್ಷಿಕ ಸಭೆ ನಡೆಸಿದ ಬೆನ್ನಲ್ಲೇ, ಹಾವೇರಿಯಲ್ಲೂ ಅದೇ ಹೆಸರಿನಲ್ಲಿ ಶನಿವಾರ ವಾರ್ಷಿಕ ಮಹಾಸಭೆ ನಡೆಸಲಾಗಿದೆ. ಇದರಿಂದ ಸಂಘದೊಳಗಿನ ಭಿನ್ನಾಭಿಪ್ರಾಯ ಮತ್ತೆ ಮುನ್ನೆಲೆಗೆ ಬಂದಿದೆ ಎಂದರು.ಸಂಘದ ಕಾನೂನು ಸಲಹೆಗಾರ ಸೋಮಶೇಖರ ಕೋತಂಬರಿ ಮಾತನಾಡಿ, ಕೆಲವರನ್ನು ಸಂಘದಿಂದ ಉಚ್ಚಾಟಿಸಲಾಗಿದೆ. ಆದರೆ, ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
2016-18ರಲ್ಲಿ ಸಂಘವನ್ನು ಸೂಪರ್‌ಸೀಡ್ ಮಾಡಲು ಕೆಲವರುರ ಪ್ರಯತ್ನಿಸಿದ್ದರು. ಈಗಲೂ ಅದೇ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಅವರೆಲ್ಲರನ್ನೂ ಸಂಘದಿಂದ ಈಗಾಗಲೇ ಉಚ್ಚಾಟಿಸಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ಸಂಘದ ಪರಮೇಶ ಪಟ್ಟಣಶೆಟ್ಟಿ, ಬಸವರಾಜ ದಿಂಡೂರ, ಬಾವಿ ಬೆಟ್ಟಪ್ಪ, ಬಿ.ಸಿ. ಉಮಾಪತಿ, ಬಿ. ನಾಗನಗೌಡ, ವಸಂತಾ ಹುಲ್ಲತ್ತಿ, ರಶ್ಮಿ ಕೆ., ಸಿದ್ದೇಶ ಬೇಗೂರ, ವಿರೂಪಾಕ್ಷಪ್ಪ ಬಳ್ಳಾರಿ, ಪಿ.ಡಿ. ಶಿರೂರ, ಶಿವಕುಮಾರ ಬಳಿಗಾರ, ಮಹೇಶ ಹಾವೇರಿ, ವೀರೇಶ ಮತ್ತೀಹಳ್ಳಿ, ಮಲ್ಲಿಕಾರ್ಜುನ ಅಂಗಡಿ, ಮಂಜನಗೌಡ ಪಾಟೀಲ, ಪ್ರಭು ವರ್ದಿ, ಸೋಮು ಎಣ್ಣಿಯವರ, ಕೊಟ್ರೇಶಪ್ಪ ವಿಜಾಪುರ, ಮಲ್ಲಿಕಾರ್ಜುನ ಹಾವೇರಿ, ರೇಣುಕಾ ಶಿರಗುಂಬಿ, ಚಂದ್ರಶೇಖರ ಬಾದಾಮಿ ಇದ್ದರು.
ಸಂಘದ ರಾಜ್ಯ ಸಮಿತಿಯ 38 ನಿರ್ದೇಶಕರು ಮಹಾಸಭೆಯಲ್ಲಿ ಪಾಲ್ಗೊಂಡು 6 ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅದಕ್ಕೆ ಬದ್ಧವಾಗಿ ನಾನು ಸಮುದಾಯದ ಕೆಲಸ ಮಾಡುತ್ತೇನೆ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಅಧ್ಯಕ್ಷ ಶಂಕರ ಬಿಸರಹಳ್ಳಿಪ್ರಮುಖ ನಿರ್ಣಯಕ್ಕೆ ಅಸ್ತು:
1. ಸಂಘದ ಪರ ಕಾನೂನು ಕ್ರಮ ಕೈಗೊಳ್ಳಲು ಹಾಗೂ ವಕೀಲರನ್ನು ನೇಮಿಸಲು ಅಧ್ಯಕ್ಷರಿಗೆ ಅಧಿಕಾರ.2. ಆಡಳಿತ ಮಂಡಳಿಯ ಅವಧಿ ಮುಗಿದ ಬಳಿಕ ಬೈಲಾ ಪ್ರಕಾರ ಸಾರ್ವತ್ರಿಕ ಚುನಾವಣೆ ನಡೆಸಲು ತೀರ್ಮಾನ
3. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಿ ಅರ್ಹರಿಗೆ ಸಮಾನ ಅವಕಾಶ ಕಲ್ಪಿಸುವುದು.4. ಚುನಾವಣಾಧಿಕಾರಿಯನ್ನು ನೇಮಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಯಿತು.
5. ಸಂಘದ ಹಣಕಾಸು ಮತ್ತು ಲೆಕ್ಕಪತ್ರಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲು ಸಮ್ಮತಿ6. ಸಂಘದ ಶಿಸ್ತು ಮತ್ತು ಘನತೆಗೆ ಧಕ್ಕೆ ತರುವವರ ವಿರುದ್ಧ ಪುರಾವೆ ಆಧರಿಸಿ ಕ್ರಮ ಕೈಗೊಂಡು, ಮುನ್ನೋಟಿಸ್ ನೀಡಿ ಸ್ಪಷ್ಟನೆ ಪಡೆಯಲು ತೀರ್ಮಾನಿಸಲಾಯಿತು.