ಗ್ರಾಮ ವಿಕಾಸದ ಪರಿಕಲ್ಪನೆ ಯೊಂದಿಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಿದಾಗ ಮಾತ್ರ ಮುಂದಿನ ಜನಾಂಗಕ್ಕೆ ಅದು ಆರೋಗ್ಯಕರವಾದ ಸಮಾಜಕ್ಕೆ ಅಡಿಗಲ್ಲು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ಹರಿಕೃಷ್ಣ ಹೇಳಿದರು.
ಬೆಳ್ತಂಗಡಿ : ಗ್ರಾಮ ವಿಕಾಸದ ಪರಿಕಲ್ಪನೆ ಯೊಂದಿಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಿದಾಗ ಮಾತ್ರ ಮುಂದಿನ ಜನಾಂಗಕ್ಕೆ ಅದು ಆರೋಗ್ಯಕರವಾದ ಸಮಾಜಕ್ಕೆ ಅಡಿಗಲ್ಲು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ಹರಿಕೃಷ್ಣ ಹೇಳಿದರು.
ನ. 22 ರಂದು ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಹಿಂದೂ ಯುವಸೇನೆ ಸೇವಾ ಸಂಘದ ದಶಮಾನೋತ್ಸವ ಮತ್ತು ಸಂಚಾರ ಚಿತಾಗಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಶ್ವಥ್ ಸಾಲ್ಯಾನ್ ವರ್ಪಾಳೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಅಳದಂಗಡಿಯ ವೈದ್ಯೆ ಸುಷ್ಮಾ ಡೋಂಗ್ರೆ ಅವರು ಇವತ್ತಿನ ಜೀವನ ಶೈಲಿಯಲ್ಲಿ ನಮ್ಮ ಆಹಾರ ಪದ್ಧತಿ ವಿಷ ಪೂರಿತ ಇರುವುದು ಕಳವಳಕಾರಿ. ಇದರ ಬಗ್ಗೆ ಇಂತಹ ಸಮಾಜ ಸೇವಾ ಸಂಘಟನೆ ಮೂಲಕ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಸಂಘದ ಸ್ಥಾಪಕ ಅಧ್ಯಕ್ಷ ರವಿ ಸಾಲ್ಯಾನ್ ಪ್ರಸ್ತಾವಿಸಿದರು. ಸಂಘದ ಕಾರ್ಯದರ್ಶಿ ಸುದರ್ಶನ್ ಅಂಬಡೆದಡಿ ವರದಿ ನೀಡಿದರು.ಸಂಘದ ಸೇವಾ ಯೋಜನೆ ಭಾಗವಾಗಿ ಕಾರ್ಯಕ್ರಮದಲ್ಲಿ ಮೂರು ಜನ ಅಶಕ್ತ ಕುಟುಂಬಗಳಿಗೆ ಧನ ಸಹಾಯ ನೀಡಲಾಯಿತು.
ನಂದನ್ ಕುಮಾರ್ ಸ್ವಾಗತಿಸಿದರು. ಸುಧೀರ್ ಸುವರ್ಣ ವಂದಿಸಿದರು. ಧನ್ಯವಾದ ಮಾಡಿದರು. ಪುರುಷೋತ್ತಮ್ ಹೊಸ ಮನೆ ಪಟ್ಲ ಕಾರ್ಯಕ್ರಮ ನಿರೂಪಿಸಿದರು.