ಕಾಂಗ್ರೆಸ್‌ ಸರ್ಕಾರಕ್ಕೆ ಶಾಪ ತಟ್ಟದೇ ಬಿಡಲ್ಲ

| Published : Oct 29 2025, 11:30 PM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಸನಾತನ ಧರ್ಮ ಸಂಸ್ಕೃತಿಯ ಮೇಲೆ ಬೆಳೆದಿರುವ ಸ್ವಾಮಿಜಿಗಳೆಂದರೆ ಎಲ್ಲರೂ ಗೌರವದಿಂದ ಕಾಣುತ್ತಾರೆ. ಅಂತಹ ಧರ್ಮ ಸಂಸ್ಕೃತಿಯ ನೆಲಗಟ್ಟಿನ ಮೇಲೆ ಗೋವುಗಳ ರಕ್ಷಣೆ, ಸಾವಯವ ಕೃಷಿಯ ಬಗ್ಗೆ ಉಪದೇಶ ನೀಡುತ್ತ ದೇಶಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾ ಸಾಗಿದ್ದ ಕೆನ್ಹೇರಿಯ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳನ್ನು ಜಿಲ್ಲೆಗೆ ನಿರ್ಬಂಧ ವಿಧಿಸಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಶಾಪ ತಟ್ಟದೇ ಬಿಡುವದಿಲ್ಲ ಎಂದು ಕೆಸರಟ್ಟಿ ಶಂಕರಲಿಂಗ ಗುರುಪೀಠದ ಸೋಮಲಿಂಗ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸನಾತನ ಧರ್ಮ ಸಂಸ್ಕೃತಿಯ ಮೇಲೆ ಬೆಳೆದಿರುವ ಸ್ವಾಮಿಜಿಗಳೆಂದರೆ ಎಲ್ಲರೂ ಗೌರವದಿಂದ ಕಾಣುತ್ತಾರೆ. ಅಂತಹ ಧರ್ಮ ಸಂಸ್ಕೃತಿಯ ನೆಲಗಟ್ಟಿನ ಮೇಲೆ ಗೋವುಗಳ ರಕ್ಷಣೆ, ಸಾವಯವ ಕೃಷಿಯ ಬಗ್ಗೆ ಉಪದೇಶ ನೀಡುತ್ತ ದೇಶಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾ ಸಾಗಿದ್ದ ಕೆನ್ಹೇರಿಯ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳನ್ನು ಜಿಲ್ಲೆಗೆ ನಿರ್ಬಂಧ ವಿಧಿಸಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಶಾಪ ತಟ್ಟದೇ ಬಿಡುವದಿಲ್ಲ ಎಂದು ಕೆಸರಟ್ಟಿ ಶಂಕರಲಿಂಗ ಗುರುಪೀಠದ ಸೋಮಲಿಂಗ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದಲ್ಲಿ ಕನ್ಹೇರಿ ಶ್ರೀಗಳಿಗೆ ನಿರ್ಬಂಧ ವಿಧಿಸಿದ್ದನ್ನು ಖಂಡಿಸಿ ಹಿಂದೂ ಜಾಗೃತಿ ವೇದಿಕೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು. ಕನ್ಹೇರಿ ಶ್ರೀಗಳು ಮಾಡಿದ ಸಮಾಜಮುಖಿ ಕಾರ್ಯಗಳನ್ನು ನೋಡಬೇಕು ಸರ್ಕಾರ ಮಾಡಬೇಕಾದ ಕೆಲಸವನ್ನು ಕನ್ಹೇರಿ ಶ್ರೀಗಳು ಮಾಡುತ್ತಿದ್ದಾರೆ. ಸಾವಿರಾರು ಗೋವುಗಳನ್ನು ಸಾಕಿದ್ದು, ರೈತರಿಗೆ ಬೆನ್ನೆಲುಬಾಗಿ ಕೃಷಿ ಸಂತರಾಗಿ ಕೆಲಸ ಮಾಡುತ್ತಿದ್ದಾರೆ. ಅಂತವರಿಗೆ ಈ ಸರ್ಕಾರ ನಿರ್ಬಂಧ ಹೇರಿರುವುದು ಖಂಡನೀಯ. ಸ್ವಾಮಿಗಳ ತಂಟೆಗೆ ಬರಬ್ಯಾಡ್ರಿ ಯಾಕೆಂದರೆ ಉತ್ತರ ಪ್ರದೇಶದಲ್ಲಿ ಯೋಗಿ ಯಾವ ರೀತಿ ಮುಖ್ಯಮಂತ್ರಿಯಾಗಿದ್ದಾರೋ ಹಾಗೆ ಕನ್ಹೇರಿ ಶ್ರೀಗಳು ಮುಂದೊಂದು ದಿನ ಕರ್ನಾಟಕದ ಯೋಗಿಯಾಗಿ ಬರಬಹುದು ಎಂದು ಆಶಯ ವ್ಯಕ್ತಪಡಿಸಿದರು.

ಗುಂಡಕನಾಳ ಬೃಹನ್ ಮಠದ ಗುರುಲಿಂಗ ಶಿವಾಚಾರ್ಯರು ಮಾತನಾಡಿ, ಶ್ರೀಗಳಿಗೆ ನಿರ್ಬಂಧ ಹೇರಿರುವುದು ಇಡೀ ಕಾವಿ ಕುಲಕ್ಕೆ ಅವಮಾನ. ಕನ್ಹೇರಿಶ್ರೀಗಳನ್ನು ಜಿಲ್ಲೆಗೆ ನಿಬಂಧ ಹೇರುವುದು ಈ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಕೂಡಲೇ ಸರ್ಕಾರ ಎಚ್ಚೆತ್ತು ಶ್ರೀಗಳಿಗೆ ನಿರ್ಬಂಧ ಹೇರಿರುವದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದೆ ದೊಡ್ಡ ಸಮಸ್ಯೆಯಾಗಿ ಮಾರ್ಪಡಲಿದೆ ಎಂದು ಎಚ್ಚರಿಸಿದರು.ಬಳಗಾನೂರ ಶ್ರೀ ಮಂಜುಳಾತಾಯಿ ಅಮ್ಮನವರು ಮಾತನಾಡಿ, ಕನ್ಹೇರಿಶ್ರೀಗಳು ಯಾರಿಗೂ ನೋವು ಕೊಡುವ ವ್ಯಕ್ತಿತ್ವ ಅವರಲ್ಲಿಲ್ಲ. ಅವರಿಗೆ ನಿರ್ಬಂಧಿಸಿರುವುದು ಖಂಡನೀಯ. ಕೂಡಲೇ ಸರ್ಕಾರ ಮತ್ತು ಅಧಿಕಾರಿಗಳು ಶ್ರೀಗಳ ನಿರ್ಬಂಧ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಮುಖಂಡ ಆರ್.ಎಸ್.ಪಾಟೀಲ(ಕೂಚಬಾಳ) ಮಾತನಾಡಿದರು. ಅಂಬಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಬಸವೇಶ್ವರ ವೃತ್ತಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿರು. ಬಳಿಕ ತಹಸೀಲ್ದಾರ್‌ ವಿನಯಾ ಹೂಗಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸುರೇಶ ಹಜೇರಿ, ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಹಿಪ್ಪರಗಿ, ಸುವರ್ಣಾ ಬಿರಾದಾರ, ಪ್ರಮೋದ ಅಗರವಾಲಾ, ರಾಘವೇಂದ್ರ ವಿಜಾಪೂರ, ಜೈಸಿಂಗ್ ಮೂಲಿಮನಿ, ಆಕಾಶ ಪಿಂಪಳೆ, ಮಂಜು ಶೆಟ್ಟಿ, ಈಶ್ವರ ಹೂಗಾರ, ರಾಘವೇಂದ್ರ ಮಾನೆ, ರಾಜು ಹಂಚಾಟೆ, ಆರ್.ಎಲ್.ಕೊಪ್ಪದ, ಮುದಕಪ್ಪ ಬಡಿಗೇರ, ಬಸವರಾಜ ಕಶೆಟ್ಟಿ, ಕಾಶಿನಾಥ ಮುರಾಳ, ಕಾಶಿನಾಥ ಸಜ್ಜನ, ಕಾಶಿನಾಥ ಅರಳಿಚಂಡಿ, ಪ್ರಭು ಬಿಳೇಭಾವಿ, ಹರಿಸಿಂಗ್ ಮೂಲಿಮನಿ, ಸಂಗಮೇಶ ಮದರಕಲ್ಲ, ಚಂದ್ರೇಶೇಖರ ದೊಡಮನಿ, ರಾಜು ಅಲ್ಲಾಪೂರ, ಸುದೀರ ದೇಶಪಾಂಡೆ, ಅನೀಲ ಹಜೇರಿ, ರಮೇಶ ಮೋಹಿತೆ, ಸತ್ಯನಾರಾಯಣ ತಾಳಪಲ್ಲೆ, ಭೀಮರಾವ್ ಕುಲಕರ್ಣಿ, ಶಿವಾಜಿ ಸೂರ್ಯವಂಶಿ, ಸಿ.ವ್ಹಿ.ಚೊಂಡಿಪಾಟೀಲ, ಶ್ರೀನಿವಾಸ ಸೇವಳಕರ, ಬಾಬು ಹಂಚಾಟೆ, ವಿಠ್ಠಲ ಮೋಹಿತೆ, ಡಿ.ವ್ಹಿ.ಪಾಟೀಲ, ರಾಜು ವಿಜಾಪೂರ, ನಿಂಗನಗೌಡ ಗಡಿಸೋಮನಾಳ, ಯಲ್ಲೇಶ ದಾಯಪುಲೆ, ಬಾಪುಗೌಡ ವಂದಲಿ, ಘಜದಂಡಯ್ಯ ಹಿರೇಮಠ, ಸಿದ್ದು ಕೂಚಬಾಳ, ಪ್ರಕಾಶ ಕಟ್ಟಿಮನಿ, ಗುರಪ್ಪ ಬ್ಯಾಕೋಡ ಇತರರು ಇದ್ದರು.