ಸಾರಾಂಶ
- ಸಾರಥಿ ಗ್ರಾಮದಲ್ಲಿ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ಹರಿಹರ ಶಾಸಕ ಹರೀಶ್
- - -ಕನ್ನಡಪ್ರಭ ವಾರ್ತೆ ಹರಿಹರ
ನಾಡಿನಲ್ಲಿ ರೆಡ್ಡಿ ಸಮಾಜದವರು ಯಾವುದೇ ಸಂದರ್ಭ ಬಂದರೂ ಸ್ವಾಭಿಮಾನ ಬಿಟ್ಟು ಬದುಕುವಂಥವರಲ್ಲ. ರೆಡ್ಡಿ ಸಮಾಜದ ಜನರು ರೆಡ್ಡಿ ಲಿಂಗಾಯತರು ಎಂದು ಬಿಂಬಿತವಾಗಿದ್ದು, ಮಧ್ಯ ಕರ್ನಾಟಕ, ಹಿರಿಯೂರು, ಕಡೂರು ಸೇರಿದಂತೆ ಇತರೆ ಭಾಗದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ತಾಲೂಕಿನ ಸಾರಥಿ ಗ್ರಾಮದಲ್ಲಿ ಸೋಮವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆಯ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ವಿಶಾಲವಾದ ದೊಡ್ಡ ದೇವಸ್ಥಾನ ನಿರ್ಮಾಸಿದ್ದು ಶ್ಲಾಘನೀಯ. ಸುಮಾರು ₹2 ಕೋಟಿ ಸಂಗ್ರಹಿಸಿ ಗ್ರಾಮಸ್ಥರು, ಭಕ್ತರು ಒಗ್ಗಟ್ಟಿನಿಂದ ಆ ಧರ್ಮ ಕಾರ್ಯ ಸಂಪೂರ್ಣಗೊಳಿಸಿದ್ದು ಅನುಕರಣೀಯ ಎಂದರು.
ಸಾರಥಿ ಗ್ರಾಮದಲ್ಲಿ ಇತ್ತೀಚೆಗೆ ಧಾರ್ಮಿಕ ಸಮಾರಂಭಗಳು ಹೆಚ್ಚು ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಕಳೆದ ತಿಂಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಅನಾವರಣ, ಭಾನುವಾರ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಅನಾವರಣ, ಇಂದು ಸೋಮವಾರ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ಸರ್ವಧರ್ಮ ಸಮನ್ವಯ ಸಭೆ. ಈ ಕಾರ್ಯಗಳಿಂದಾಗಿ ಗ್ರಾಮದಲ್ಲಿ ಎಲ್ಲ ಜನಾಂಗದ ಜನರು ಒಗ್ಗಟ್ಟಿನಿಂದ ಇರುವು ಸಾಧ್ಯವಾಗಿದೆ. ಧಾರ್ಮಿಕತೆಗೆ ಹೆಚ್ಚು ಒತ್ತುಕೊಡುವಂತ ನಿಟ್ಟಿನಲ್ಲಿ ಜನರು ಸಾಗಿದ್ದು ಉತ್ತಮ ಕಾರ್ಯವಾಗಿದೆ. ಗ್ರಾಮದಲ್ಲಿ ಶಾಂತಿ- ನೆಮ್ಮದಿ ನೆಲೆಸಲಿಕ್ಕೆ ಕಾರಣವಾಗಿದೆ ಎಂದು ಹೇಳಿದರು.ರೆಡ್ಡಿ ಸಮಾಜದ ಜನರು ಕೂಡ ಎಲ್ಲರಂತೆ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿ ಅವರಿಗೆ ಧರ್ಮ, ಸಂಸ್ಕಾರ, ಪರಂಪರೆಯ ವಿಚಾರಗಳನ್ನು ತಿಳಿಸಬೇಕು. ಆಗ ಅವರು ಕೂಡ ಭಾರತದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮವರು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ರೆಡ್ಡಿ ಸಮಾಜದವರು ತಾಲೂಕಿನಲ್ಲಿ ಸ್ವಾಭಿಮಾನ ಮತ್ತು ಒಗ್ಗಟ್ಟಿನಿಂದ ಬಾಳುತ್ತಿದ್ದಾರೆ. ಇದರ ಫಲವಾಗಿ ಸಾರಥಿ ಗ್ರಾಮದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಿಸಲು ಸಾಧ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಧರ್ಮದ ಆಚಾರ ವಿಚಾರಗಳನ್ನು ಅರಿತು ಬಾಳುವಂತೆ ಆಗಬೇಕು ಎಂದು ಹೇಳಿದರು.ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಸಾರಥಿ ಗ್ರಾಮದಲ್ಲಿ ನಿರ್ಮಿಸಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಮುಂದಿನ ದಿನಗಳಲ್ಲಿ ಧಾರ್ಮಿಕ ಕೇಂದ್ರವಾಗಿ ಹಾಗೂ ಶಕ್ತಿದೇವತೆಯಾಗಿ ರೂಪಗೊಳ್ಳುತ್ತದೆ. ಈ ದೇವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ಸತ್ಸಂಗ ಮುಂತಾದ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಸದ್ವಿಚಾರಗಳಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಈ ವೇಳೆ ಮೇಮನ ಮಠದ ಶ್ರೀ ವೇಮಾನಾನಂದ ಹಾಗೂ ಅವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಬೆಳಗ್ಗೆ ವಿಶೇಷ ಪೂಜಾ ಕಾರ್ಯಗಳು ಮತ್ತು ಕಳಸಾರೋಹಣ ನೆರವೇರಿಸಲಾಯಿತು.ಷಡಕ್ಷರಿ ಶ್ರೀ, ವಿಶ್ವಕರ್ಮ ಶಂಕರಾತ್ಮಾನಂದ ಸರಸ್ವತಿ ಶ್ರೀ, ಪದ್ಮಸಾಲಿ ಸಮಾಜದ ಪ್ರಭುಲಿಂಗ ಶ್ರೀ, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀ, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಶ್ರೀ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕಾಂಗ್ರೆಸ್ ಮುಖಂಡ ಜಿ.ಬಿ. ಹಾಲೇಶ್ ಗೌಡ ಗುತ್ತೂರು ಗ್ರಾಪಂ ಅಧ್ಯಕ್ಷ ಪರಶುರಾಮ್, ನಡುಮನೆ ನಿಂಗಪ್ಪ, ಎಸ್.ಬಿ. ರಾಜಶೇಖರ, ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟ್ ಅಧ್ಯಕ್ಷ ಜಿ ಹನುಮಂತಗೌಡ, ದಿಟೂರು ಶೇಖರಪ್ಪ, ಕಡ್ಲೆಗೊಂದಿ ಹನುಮಂತಪ್ಪ, ನೀರು ಬಳಕೆದಾರರ ಸಂಘದ ದ್ಯಾಮಪ್ಪ ರೆಡ್ಡಿ ಇತರರು ಹಾಜರಿದ್ದರು.
- - --27HRR02:
ಹರಿಹರ ತಾಲೂಕಿನ ಸಾರಥಿ ಗ್ರಾಮದಲ್ಲಿ ಸೋಮವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನಾ ಸಮಾರಂಭವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು. ಮಠಾಧೀಶರು, ಹಲವು ಗಣ್ಯರು ಇದ್ದರು.;Resize=(128,128))
;Resize=(128,128))
;Resize=(128,128))