ಸಮಾಜಕ್ಕೆ ಬಸವಣ್ಣರ ವಚನಗಳ ಕೊಡುಗೆ ಅಪಾರ- ಜಿಎಸ್ ಗೋನಾಳ

| Published : Jan 02 2024, 02:15 AM IST

ಸಮಾಜಕ್ಕೆ ಬಸವಣ್ಣರ ವಚನಗಳ ಕೊಡುಗೆ ಅಪಾರ- ಜಿಎಸ್ ಗೋನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು ಹಲವಾರು ಸಮಾಜಕ್ಕೆ ವಚನಗಳ ಕೊಡುಗೆಗಳನ್ನು ನೀಡಿದ್ದು, ಪಟ್ಟಣದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಇಂತಹ ವಿಶೇಷವಾದ ಕಾರ್ಯಕ್ರಮ ಏರ್ಪಡಿಸಿ, ಶರಣರ ವಚನಗಳನ್ನು ಬರೆದು ಉತ್ತಮ ಜ್ಞಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕುಷ್ಟಗಿ: 12ನೇ ಶತಮಾನದ ಕಾಲಘಟ್ಟದಲ್ಲಿ ಬಸವಣ್ಣನವರು ಶೋಷಿತ ವರ್ಗವನ್ನು ಒಂದು ಕಡೆ ಸೇರಿಸಿ ಶಕ್ತಿ, ಜ್ಞಾನ ತುಂಬುವ ಉದ್ದೇಶದಿಂದ ಅನುಭವ ಮಂಟಪ ಕಟ್ಟಿದ್ದರು ಎಂದು ಶರಣ ಸಾಹಿತ್ಯ ಪರೀಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಗೋನಾಳ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಮೌನೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರೀಷತ್ತು ಹೋಬಳಿ ಘಟಕ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಚನ ಕಂಠಪಾಠ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಸವಣ್ಣನವರು ಹಲವಾರು ಸಮಾಜಕ್ಕೆ ವಚನಗಳ ಕೊಡುಗೆಗಳನ್ನು ನೀಡಿದ್ದು, ಪಟ್ಟಣದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಇಂತಹ ವಿಶೇಷವಾದ ಕಾರ್ಯಕ್ರಮ ಏರ್ಪಡಿಸಿ, ಶರಣರ ವಚನಗಳನ್ನು ಬರೆದು ಉತ್ತಮ ಜ್ಞಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಚನ ಕಂಠಪಾಠ ಬರೆಯುವ ಸ್ಪರ್ಧೆ ಜಿಲ್ಲೆ, ತಾಲ್ಲೂಕು, ರಾಜ್ಯದಲ್ಲಿ ಮೊದಲು ನಡೆಸಲಾಗಿದೆ. ಇದರಿಂದ ಶರಣರ ಸಾಹಿತ್ಯ, ಸಂಸ್ಕೃತಿ ಹೆಚ್ಚು ವಿಸ್ತಾರವಾಗಲು ಸಾಧ್ಯವಾಗಲಿದೆ ಎಂದರು.ಕಿರಣ ಸರನಾಡಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ನಟರಾಜ ಸೋನಾರ್, ಕಸಾಪ ತಾಲ್ಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷ ರವಿಂದ್ರ ಬಾಕಳೆ ಸಾಹಿತಿ ಶೇಖರಗೌಡ ಸರನಾಡಗೌಡರ ಮಾತನಾಡಿದರು.ನಂತರ ವಚನ ಕಂಠಪಾಠ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ 9 ಮತ್ತು 10 ನೇ ತರಗತಿ ವಿಭಾಗದ ಮೂವರು, 7 ಮತ್ತು 8 ನೇ ತರಗತಿ ವಿಭಾಗದ ಮೂವರು, 5 ಮತ್ತು 6ನೆ ತರಗತಿ ಮೂವರು 15 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ವಿವಿಧ ಸಾಧಕರು, ಸಾಹಿತ್ಯಾಸಕ್ತರು, ಸರನಾಡಗೌಡರನ್ನು ಗೌರವಿಸಲಾಯಿತು.ಕಪ್ಪತಗುಡ್ಡ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸಾಹಿತಿ ಶೇಖರಗೌಡ ಸರನಾಡಗೌಡರ, ಲಿಯೋ ಯುಥ್ ಕ್ಲಬ್ ಗೌರವಾಧ್ಯಕ್ಷ ನಾರಾಯಣಗೌಡ ಮೆದಿಕೇರಿ, ಬಸಪ್ಪ ಗಡಿಗಿ, ಶರಣಬಸಪ್ಪ ಬ್ಯಾಲಿಹಾಳ, ಕಸಾಪ ಹೋಬಳಿ ಘಟಕದ ಸದಸ್ಯರು, ಶರಣಸಾಹಿತ್ಯ ಪರಿಷತ್ತು ಸದಸ್ಯರು ಮತ್ತು ಸಾಹಿತ್ಯಾಸಕ್ತರು, ಶಿಕ್ಷಣ ಪ್ರೇಮಿಗಳು, ಶಿಕ್ಷಣ ಇಲಾಖೆಯ ವಿವಿಧ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಹನಮಂತಪ್ಪ ಶಿರವಾರ ಸ್ವಾಗತಿಸಿದರು. ಸೋಮಲಿಂಗಪ್ಪ ತುರ್ವಿಹಾಳ ನಿರೂಪಿಸಿದರು.