ದೇಶದ ಪ್ರಗತಿಗೆ ಇಂಜಿನಿಯರುಗಳ ಕೊಡುಗೆ ಅಪಾರವಾದದ್ದು. ಅಣೆಕಟ್ಟೆ, ರಸ್ತೆ, ಸುರಂಗ, ಬಹುಮಹಡಿ ಕಟ್ಟಡಗಳು ಸೇರಿ ನಿರ್ಮಾಣ ಕಾಮಗಾರಿಗಳಲ್ಲಿ ಇಂಜಿನಿಯರುಗಳ ಕೌಶಲ್ಯ ಮತ್ತು ಪ್ರತಿಭೆ ಅನಾವರಣಗೊಂಡಿದೆ.
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಇಂಜಿನಿಯರುಗಳ ದಿನಾಚರಣೆಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಇಂಜಿನಿಯರುಗಳ ದಿನಾಚರಣೆ ಮತ್ತು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.ಪ್ರಾಂಶುಪಾಲ ಡಾ.ಜಿ.ಮುರಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಪ್ರಗತಿಗೆ ಇಂಜಿನಿಯರುಗಳ ಕೊಡುಗೆ ಅಪಾರವಾದದ್ದು. ಅಣೆಕಟ್ಟೆ, ರಸ್ತೆ, ಸುರಂಗ, ಬಹುಮಹಡಿ ಕಟ್ಟಡಗಳು ಸೇರಿ ನಿರ್ಮಾಣ ಕಾಮಗಾರಿಗಳಲ್ಲಿ ಇಂಜಿನಿಯರುಗಳ ಕೌಶಲ್ಯ ಮತ್ತು ಪ್ರತಿಭೆ ಅನಾವರಣಗೊಂಡಿದೆ. ಸಮಕಾಲೀನ ಸಂದರ್ಭದಲ್ಲಿ ನವೋದ್ಯಮಗಳಿಂದ ಹಿಡಿದು, ತಂತ್ರಜ್ಞಾನ ಕೇಂದ್ರಿತ ಚಿಂತನೆಗಳವರೆಗೆ ಎಲ್ಲ ಹಂತಗಳಲ್ಲಿ ದೇಶದ ಇಂಜಿನಿಯರುಗಳು ತಮ್ಮದೇ ಆದ ಕೌಶಲ್ಯ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ ಎಂದು ತಿಳಿಸಿದರು.ವಿದ್ಯಾರ್ಥಿಗಳು ಮತ್ತು ಯುವ ಇಂಜಿನಿಯರ್‌ಗಳು ಜ್ಞಾನ ಹಾಗೂ ಜವಾಬ್ದಾರಿಯೊಂದಿಗೆ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಇಂಜಿನಿಯರ್ ಆಗುವುದು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಲ್ಲ. ಪ್ರಾಮಾಣಿಕತೆ, ಜವಾಬ್ದಾರಿ ಹಾಗೂ ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಮನೋಭಾವ ಪ್ರತಿಯೊಬ್ಬ ಇಂಜಿನಿಯರ್‌ನಲ್ಲಿರಬೇಕು ಎಂಬ ಸಂದೇಶದೊಂದಿಗೆ ಇಂಜಿನಿಯರುಗಳ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಇದೇ ವೇಳೆ ಸಿವಿಲ್ ಆರ್ಕಿಟೆಕ್ಟ್ ವೀರೇಂದ್ರ ರಾಜ್, ಸಿವಿಲ್ ಇಂಜಿನಿಯರ್ ಐ.ಎಂ.ರಮೇಶ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇಂಜಿನಿಯರಿಂಗ್ ಕ್ಷೇತ್ರದ ಮಹತ್ವ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಸಾಧನೆ ಮತ್ತು ಆದರ್ಶಗಳ ಕುರಿತು ವಿದ್ಯಾರ್ಥಿನಿ ಅಫ್ನಾ ಜೈನಬ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ.ಆರ್.ಎಂ.ಸುನಿಲ್‌ಕುಮಾರ್, ಅಕಾಡೆಮಿಕ್ ನಿರ್ದೇಶಕ ಡಾ.ಎಂ.ಶ್ರೀನಿವಾಸರೆಡ್ಡಿ, ಎನ್‌ಎಸ್‌ಎಸ್ ಅಧಿಕಾರಿ ಗೋವಿಂದರಾಜು, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಬೋಧಕ ವರ್ಗ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.---------------17ಕೆಡಿಬಿಪಿ1
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಇಂಜಿನಿಯರುಗಳ ದಿನಾಚರಣೆ ಅಂಗವಾಗಿ ಅಭಿಯಂತರರನ್ನು ಸನ್ಮಾನಿಸಲಾಯಿತು.