ಸಾಮಾಜಿಕ ಕ್ಷೇತ್ರಕ್ಕೆ ಪತ್ರಕರ್ತರ ಕೊಡುಗೆ ಅಪಾರ: ಯೋಗಿನಿ ಅಕ್ಕ

| Published : Jul 10 2024, 12:39 AM IST

ಸಾಮಾಜಿಕ ಕ್ಷೇತ್ರಕ್ಕೆ ಪತ್ರಕರ್ತರ ಕೊಡುಗೆ ಅಪಾರ: ಯೋಗಿನಿ ಅಕ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಮೇಲೆ ಮಾಧ್ಯಮ ಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಸಕಾರಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವಂತಿರಬೇಕು. ಓದುಗರ ಮನಸ್ಸನ್ನು ಅರಳಿಸುವಂತಿರಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಮಾಜದ ಮೇಲೆ ಮಾಧ್ಯಮ ಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಸಕಾರಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವಂತಿರಬೇಕು. ಓದುಗರ ಮನಸ್ಸನ್ನು ಅರಳಿಸುವಂತಿರಬೇಕು. ಪತ್ರಕರ್ತರು ತಮ್ಮ ವೈಯಕ್ತಿಕ ಸಮಯವನ್ನು ಸಮಾಜ ಸೇವೆಯಲ್ಲಿ ತೊಡಗಿಸುತ್ತಿರುವುದು ಗಮನಾರ್ಹ. ಜಗತ್ತಿನ ಸಮಾಚಾರವನ್ನು ಮನೆಯ ಬಾಗಿಲಿಗೆ ತಲುಪಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕುಮಾರಿ ಯೋಗಿನಿ ಅಕ್ಕನವರು ಹೇಳಿದರು.

ಇಲ್ಲಿನ ಈಶ್ವರಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಜೀವದ ಹಂಗು ತೊರೆದು ಹಗಲಿರುಳು ಪತ್ರಕರ್ತರು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಕ್ಷೇತ್ರಕ್ಕೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಈ ಕ್ಷೇತ್ರದಲ್ಲಿ ನಡೆದಷ್ಟು ದಾರಿ ಪಡೆದಷ್ಟು ಭಾಗ್ಯವಿದೆ. ಪತ್ರಕರ್ತರು ತಮ್ಮ ವೈಯಕ್ತಿಕ ಜೀವನದಲ್ಲಿ ಶಾಂತಿ, ನೆಮ್ಮದಿಗಾಗಿ ಆಧ್ಯಾತ್ಮ ಜ್ಞಾನಕ್ಕೂ ಸಮಯ ಮೀಸಲು ಇಡಬೇಕು. ಸಂವಿಧಾನದ ನಾಲ್ಕನೇ ಅಂಗ ಎನಿಸಿಕೊಂಡಿರುವ ಪತ್ರಿಕಾ ರಂಗಕ್ಕೆ ಅಪಾರವಾದ ಗೌರವವಿದೆ. ಹಿರಿಯ ಪತ್ರಕರ್ತರ ಮಾರ್ಗದಲ್ಲಿ ಹೋಗಬೇಕು ಎಂದು ಯುವ ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಪತ್ರಕರ್ತರಾದ ಎಂ. ಸಾದಿಕ ಅಲಿ, ಜಿ.ಎಸ್. ಗೋನಾಳ್, ಸಿರಾಜ್ ಬಿಸರಳ್ಳಿ, ಸಿದ್ದಪ್ಪ ಹಂಚಿನಾಳ, ಕೊಟ್ರಪ್ಪ ತೋಟದ್, ಮೊಹಮ್ಮದ್ ಖಲೀಲ, ಶಿವರಾಜ ನುಗಡೋಣಿ, ಫಕೀರಪ್ಪ ಗೋಟೂರ್, ಸಿದ್ದು ಹಿರೇಮಠ್, ಬ್ರಹ್ಮಾನಂದ ಬಡಿಗೇರ್, ವಿಠಲ್ ದುತ್ತರಗಿ, ಮಂಜುನಾಥ್ ಕೊಳೂರು, ಸಿದ್ದು ಹಿರೇಮಠ, ಪ್ರಭು ಗಾಳಿ, ರವೀಂದ್ರ ತೋಟದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನೀಟ್ ಅಕ್ರಮ; ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ:

ನೀಟ್ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಸಮಿತಿ ಕಾರ್ಯಕರ್ತರು ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ಅಕ್ರಮ ಈಗಾಗಲೇ ಬಯಲಿಗೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕೇಂದ್ರ ನಿರ್ದಾಕ್ಷಿಣ್ಯ ಕ್ರಮವಹಿಸಬೇಕು. ಆದರೆ, ಸರ್ಕಾರ ಪರೀಕ್ಷೆಯನ್ನು ರದ್ದು ಮಾಡಿ, ಪುನಃ ಪರೀಕ್ಷೆ ನಡೆಸುವುದಕ್ಕೆ ಮೀನಮೇಷ ಮಾಡುತ್ತಿದೆ. ಹಾಗೆಯೇ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಮುಖಂಡತಾದ ಸುಂಕಪ್ಪ ಗದಗ, ಹುಸೆನಪ್ಪ ಕೆ., ಹನುಮೇಶ ಕಲಮಂಗಿ, ಮಂಜುನಾಥ ಡಗ್ಗಿ, ಕೃಷ್ಣಪ್ಪ, ಫಕೀರಮ್ಮ ಮಿರಗನತಂಡಿ, ಅಮರಮ್ಮ ಗದಗ, ಹುಸೇನ್ ಸಾಬ್ ನದಾಫ್, ರಾಮಣ್ಣ ದೊಡ್ಡಮನಿ, ರೇಣುಕಮ್ಮ ಭೀಮನೂರು, ಶಾಂತಮ್ಮ ಬೆಂಗಳೂರಮನಿ, ಸುಂಕಮ್ಮ ಮೊದಲಾದವರು ಇದ್ದರು.