ಶಾಸಕ ಯಶವಂತರಾಯಗೌಡ ಪಾಟೀಲಗೆ ಕೆಲವೇ ದಿನದಲ್ಲಿ ಒಳ್ಳೆಯ ಕಾಲ ಬರುತ್ತದೆ. ಇಂಡಿ ಕ್ಷೇತ್ರದ ಜನ ಒಳ್ಳೆಯ ಸುದ್ದಿ ಕೇಳುತ್ತಿರಿ, ಒಳ್ಳೆಯವರಿಗೆ ಕಷ್ಟ ಜಾಸ್ತಿ, ಹೀಗಾಗಿ ಒಳ್ಳೆಯ ಕಾಲ ತಡವಾದರೂ ಬಂದೇ ಬರುತ್ತದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ರಾಜ್ಯದ ಗಡಿ ಭಾಗಗಳು ಅಭಿವೃದ್ಧಿ ಹೊಂದುವುದು ಕಡಿಮೆ. ಆದರೆ ಶಾಸಕ ಯಶವಂತರಾಯಗೌಡ ಪಾಟೀಲ ಮುಖ್ಯಮಂತ್ರಿಗಳ ಜೊತೆಗೆ ಒಳ್ಳೆಯ ಸಂಬಂಧ ಹೊಂದಿರುವುದರಿಂದ ಗಡಿ ಭಾಗವಾದ ಇಂಡಿ ತಾಲೂಕು ಅಭಿವೃದ್ಧಿಯಾಗಿದೆ. ಸಿಎಂ ಸಿದ್ದರಾಮಯ್ಯನವರು ಕೇಳಿದಷ್ಟು ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ ಎಂದು ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ ಹೇಳಿದರು.ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ, ತಾಲೂಕು ಆಡಳಿತ, ನಗರಸಭೆ ಮತ್ತು ನಗರ ಯೋಜನಾ ಪ್ರಾಧಿಕಾರ ಇಂಡಿ ಆಶ್ರಯದಲ್ಲಿ ನಡೆದ ನೂತನ ನಗರಸಭೆ ಕಾರ್ಯಾಲಯ ಹಾಗೂ ನಗರ ಯೋಜನಾ ಪ್ರಾಧಿಕಾರ ಇಂಡಿ ಕಚೇರಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯನವರು ಸಚಿವರಗಿಂತ ಹೆಚ್ಚು ಪ್ರೀತಿ ಶಾಸಕರಿಗೆ ಮಾಡುತ್ತಾರೆ. ಯಶವಂತರಾಯಗೌಡರು ತಂದಿರುವ ಕೆಲಸಗಳು ನಿಲ್ಲಿಸಲಾರದೇ ತ್ವರಿತವಾಗಿ ಮಾಡಿಕೊಡುವಷ್ಟು ವಿಶ್ವಾಸ ಗಳಿಸಿದ್ದಾರೆ. ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ರಾಜ್ಯದ ವಿವಿಧ ತಾಲೂಕಿನ ಹಲವಾರು ಜನರು ಕಷ್ಟಪಡುತ್ತಿದ್ದಾರೆ. ಆದರೆ ಶಾಸಕ ಪಾಟೀಲರು ಹೊಂದಿರುವ ಕ್ಷೇತ್ರದ ಮೇಲಿನ ಅಭಿವೃದ್ಧಿ ಕಳಕಳಿಯಿಂದ ಸಿಎಂ ಮೇಲೆ ಒತ್ತಡ ಮಾಡಿದ್ದರಿಂದ ಇಂದು ಇಂಡಿ ಪುರಸಭೆ ನಗರಸಭೆನ್ನಾಗಿ ಮೇಲ್ದರ್ಜೆಗೆ ಏರಿದೆ ಎಂದರು.ತಾಲೂಕು ಕ್ರೀಡಾಂಗಣಕ್ಕೆ ಡಾ.ಅಂಬೇಡ್ಕರ್ ಹೆಸರು ನಾಮಕರಣ ಮಾಡಿದ್ದು ಸಂತಸವಾಗಿದೆ. ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕಾಗಿ ಕೊಡುಗೆ ನೀಡಿದ್ದಾರೆ ಎಂದು ಕೆಲವರು ಹೇಳುತ್ತಿರುವುದು ಸರಿಯಲ್ಲ. ಅಂಬೇಡ್ಕರ್ ಇಡೀ ದೇಶದ ಸಮಸ್ತ ಜನರ ಅಭ್ಯುದಯಕ್ಕಾಗಿ ಸಂವಿಧಾನ ಬರೆದಿದ್ದಾರೆ. ರಾಜನ ಮಗ ರಾಜ, ಡಿಸಿ ಮಗ ಡಿಸಿ ಆಗುವ ಕಾಲವೊಂದಿತ್ತು. ಆದರೆ ಡಾ.ಅಂಬೇಡ್ಕರ್ ಬರೆದ ಸಂವಿಧಾನದಿಂದ ಬಡವನ ಮಗನೂ ಸಹ ಡಿಸಿ ಆಗಬಹುದು ಎಂದು ತೋರಿಸಿಕೊಟ್ಟಿದೆ ಎಂದು ಹೇಳಿದರು.
ಪಟ್ಟಣ, ನಗರವಾಸಿಗಳಿಗೆ ತಾವು ವಾಸಿಸುವ ಸ್ಥಳದ ಆಸ್ತಿಗೆ ಮಾಲೀಕರಾಗಲು ಬಿ ಖಾತಾ ಪದ್ಧತಿ ಜಾರಿಗೆ ತಂದು ನಗರವಾಸಿಗಳಿಗೆ ಬಿ ಖಾತಾ ಉತಾರಿ ನೀಡಿದ ಸಿಎಂ ಸಿದ್ದರಾಮಯ್ಯನವರು ರಾಜ್ಯವನ್ನು ಪ್ರಗತಿಪಥದತ್ತ ಕೊಂಡ್ಯೊಯುತ್ತಿದ್ದಾರೆ. ಪುರಸಭೆ, ನಗರಸಭೆಗಳ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ತಡೆಗಟ್ಟಲು ಬಿ ಹಾಗೂ ಎ ಖಾತೆ ಉತಾರೆ ಪಡೆಯಲು ಆನ್ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರು ಮೊದಲು ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿನ ಬಡವರು ಹಸಿವಿನಿಂದ ಬಳಲಬಾರದು ಎಂದು 180 ಇಂದಿರಾ ಕ್ಯಾಂಟೀನ್‌ಗಳನ್ನು ಘೋಷಿಸಿದರು. ಈಗ ಮತ್ತೆ 180 ಕ್ಯಾಂಟೀನ್‌ಗಳನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದರು.ಶಾಸಕ ವಿಠಲ ಕಟಕದೊಂಡ ಮಾತನಾಡಿ, ಇಂಡಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡುವ ದಿನವಾಗಿದೆ. ಶಾಸಕ ಯಶವಂತರಾಯಗೌಡರು ಇಂಡಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲವನ್ನೂ ಮಾಡಿದ್ದಾರೆ. ಜಿಲ್ಲೆಯಲ್ಲಿ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ನಗರ ಇಂಡಿ, ಇಂಡಿ ಜಿಲ್ಲೆಯನ್ನಾಗಿ ಮಾಡುವುದು ಒಂದೇ ಬಾಕಿ ಇದೆ. ಮುಂದಿನ ದಿನದಲ್ಲಿ ಅದನ್ನು ಮಾಡುತ್ತಾರೆ ಎಂಬ ಭರವಸೆ ಇದೆ. ಅವರ ಹಿಂದೆ ನಾನೂ ಇರುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಮೊದಲ ಅವಧಿ ಹಾಗೂ ಇಂದಿನ ಅವಧಿ ಸೇರಿ ಇಂಡಿ ಮತಕ್ಷೇತ್ರದ ಅಭಿವೃದ್ಧಿಗೆ ₹8 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಹೀಗಾಗಿ ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಅಭಿನಂದಿಸುವುದಾಗಿ ಹೇಳಿದರು.ನಗರದ ಭವಿಷ್ಯ ರೂಪಿಸುವ ಸರ್ಕಾರದ ಯೋಜನೆಗಳು ಅನುಷ್ಠಾನಗೊಳಿಸುವ ಸಂಸ್ಥೆ ಮೇಲ್ದರ್ಜೆಗೆ ಏರಿದ ಸುದಿನ ಇಂದು. ಸಿಎಂ ಸಿದ್ದರಾಮಯ್ಯನವರ 13 ವರ್ಷಗ ಆಡಳಿತದಲ್ಲಿ ಇಂಡಿ ಕ್ಷೇತ್ರದ ಅಭಿವೃದ್ಧಿಗೆ ಬೇಡಿದಷ್ಟು ಅನುದಾನ ನೀಡಿದ್ದಾರೆ. ರಾಜ್ಯದ ಕೊನೆಯ ತಾಲೂಕು ಆಗಿದ್ದರಿಂದ ರಾಜ್ಯದ ಜನ ಇಂಡಿಯ ಕಡೆಗೆ ತಿರುಗಿ ನೋಡುವಂತೆ ಅಭಿವೃದ್ಧಿ ಪಡಿಸಲಾಗುತ್ತದೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಿಂದ ಶೇ.79 ಪ್ರದೇಶ ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.
ಶಾಸಕ ವಿಠಲ ಕಟಕದೊಂಡ, ಡಿಸಿ ಡಾ.ಆನಂದ.ಕೆ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೊರಾಮಣಿ, ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಯೋಜನಾ ನಿರ್ದೇಶಕ ಬಿ.ಎಸ್.ಸೌದಾಗರ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀತಾ ಲಾಡ್, ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಪೌರಾಯುಕ್ತ ಶಿವಾನಂದ ಪೂಜಾರಿ, ತಾಪಂ ಇಒ ಡಾ.ಕನ್ನೂರ, ಭೀಮನಗೌಡ ಪಾಟೀಲ, ಜಾವೀದ ಮೋಮಿನ, ಕಸಾಪ ಜಿಲ್ಲಾಧ್ಯಕ್ಷ ಹಾಸೀಮಪೀರ ವಾಲಿಕಾರ, ಶ್ರೀಕಾಂತ ಕೂಡಿಗನೂರ, ಶಿವಯೋಗೆಪ್ಪ ಚನಗೊಂಡ, ಬಿ.ಸಿ.ಸಾಹುಕಾರ, ನೀಲಕಂಠಗೌಡ ಪಾಟೀಲ ಮೊದಲಾದವರಿದ್ದರು.ಕೃಷಿ ಎಡಿ ಮಹಾದೇವಪ್ಪ ಏವೂರ, ಎಚ್.ಎಸ್.ಪಾಟೀಲ, ಎಇಇ ಶಿವಾಜಿ ಬನಸೋಡೆ, ಎಸ್.ಆರ್.ಮೇಂಡೆಗಾರ, ಬಸವರಾಜ ರಾವೂರ, ಗೀತಾ ಗುತ್ತರಗಿಮಠ, ಭೀಮಾಶಂಕ ಮೂರಮನ, ಶೇಖರ ಶಿವಶರಣ, ಗಣಪತಿ ಬಾಣಿಕೋಲ, ರವಿ ಹೊಸಮನಿ, ಸೋಮಶೇಖರ ಮ್ಯಾಕೇರಿ, ತುಕಾರಾಮ ಗುನ್ನಾಪೂರ, ಮಲ್ಲು ಮಡ್ಡಿಮನಿ, ಧರ್ಮು ಸಾಲೋಟಗಿ, ಸದಾಶಿವ ಆಲಮೇಲ, ಶೆಟ್ಟು ಶಿವಪೂರ, ಅವಿನಾಶ ಬಗಲಿ, ಸತೀಶ ಕುಂಬಾರ, ಅತೀಕ ಮೋಮಿನ, ಮುಸ್ತಾಕ ಇಂಡಿಕರ, ರಾಯಿಸ್ ಅಷ್ಟೇಕರ, ಧರ್ಮರಾಜ ವಾಲಿಕಾರ, ಸಂತೋಷ ಪರಸೇನವರ, ಕಲ್ಲಪ್ಪ ಅಂಜುಟಗಿ, ರಾಜು ಹಳ್ಳದಮನಿ, ದತ್ತು ಕೋಳಿ, ಸುಭಾಷ ಬಾಬರ, ನಿರ್ಮಲಾ ತಳಕೇರಿ, ನಾಗೇಂದ್ರ ಮೇತ್ರಿ, ಯಲ್ಲಪ್ಪ ಬಂಡೇನವರ, ನಾಗೇಶ ತಳಕೇರಿ ಮೊದಲಾದವರು ಪಾಲ್ಗೊಂಡಿದ್ದರು.
₹20.15 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆಇಂಡಿ ಕ್ರೀಡಾಂಗಣಕ್ಕೆ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಕ್ರೀಡಾಂಗಣ ನಾಮಕರಣ, ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಇಂಡಿ ನಗರದ ವಿವಿಧ ವಾರ್ಡ್‌ಗಳ ರಸ್ತೆ ಸುಧಾರಣೆ, ಇಂಡಿ ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ಕಟ್ಟಡ, ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಕೆರೆ ದುರಸ್ತಿ ಹಾಗೂ ಸುಧಾರಣೆ, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಇಂಡಿ ನಗರದಲ್ಲಿ ಸಾಹಿತ್ಯ ಭವನ, ಡಿಜಿಟಲ್ ಗ್ರಂಥಾಲಯ ಸೇರಿ ಸುಮಾರು ₹20.15 ಕೋಟಿ ಅನುದಾನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಯಿತು.
ಬದ್ಧತೆ ರಾಜಕಾರಣ ಮಾಡುವವನು ನಾನು. ಬಡ ಜನರಿಗಾಗಿ ಸೈದ್ಧಾಂತಿಕ ರಾಜಕಾರಣ ಮಾಡುತ್ತಿದ್ದು, ಇಂಡಿ ಜಿಲ್ಲೆಯಾಗುವ ಎಲ್ಲ ಮಾನದಂಡಗಳನ್ನು ನಿರ್ಮಿಸಲಾಗುತ್ತಿದೆ. ಇಂಡಿ ಜಿಲ್ಲೆ ಮಾಡುವ ಸಸಿ ನೆಟ್ಟಿದ್ದೇನೆ. ಅದು ಮುಂದೊಂದು ದಿನ ಹೆಮ್ಮರವಾಗಲಿದೆ. ಅಧಿಕಾರಕ್ಕಿಂತ ಸ್ವಾಭಿಮಾನ ಮುಖ್ಯ. ಸಮಾಜವಾದಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಾನು ಒಬ್ಬನೇ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರುವವರೆಗೆ ಅವರ ಗರಡಿಯಲ್ಲಿ ಇರುತ್ತೇನೆ. ಯಶವಂತರಾಯಗೌಡ ಪಾಟೀಲ, ಶಾಸಕರು