ಸಾರಾಂಶ
ಹೊಸದುರ್ಗ: ಕನ್ನಡ ನಾಡು ಶಿಕ್ಷಣ, ರಾಜಕೀಯ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದ್ದು, ಮಠಮಾನ್ಯಗಳಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ ಸಮಾರಂಭದಲ್ಲಿ ಮಾತಾನಾಡಿದ ಅವರು, ನಮ್ಮ ನಾಡಿನಲ್ಲಿ ಮಠಗಳ ಕೊಡುಗೆ ಅಪಾರ. ಅನ್ನ, ಶಿಕ್ಷಣ, ಜ್ಞಾನ ದಾಸೋಹದ ಮೂಲಕ ಸರ್ಕಾರಗಳು ಮಾಡದ ಸಾಧನೆಗಳನ್ನು ಮಠಗಳು ಮಾಡಿವೆ. ಮಠದಲ್ಲಿ ಕಲಿತವರು ಮಹಾನ್ ಸಾಧಕರಾಗಿದ್ದಾರೆ ಎಂದು ಶ್ಲಾಘಿಸಿದರು.
ಪ್ರಸ್ತುತ ಹೆಚ್ಚು ಕಲಿತಷ್ಟೂ ಜಾತಿವಾದಿಗಳಾಗುತ್ತಿದ್ದೇವೆ. ಯಾರೇ ಪರಿಚಯವಾದರೂ ಮೊದಲು ಅವರ ಜಾತಿ ಹುಡುಕುತ್ತೇವೆ. ಜಾತಿಗಳ ನಡುವೆ, ಸಮಾಜಗಳ ನಡುವೆ ವಿಷಬೀಜ ಬಿತ್ತುತ್ತಿದ್ದೇವೆ. ಇಂಥಹ ಕಲುಷಿತ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇವೆ ವಿನಾ ಸಂಸ್ಕೃತಿ, ಸಂಸ್ಕಾರ ಕಲಿಸುತ್ತಿಲ್ಲ ಎಂದು ಹೇಳಿದರು. ಸಮಾಜವನ್ನು ಉಳಿಸುವ, ಸರಿ ದಾರಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಮಠಗಳಿಗೆ, ಸ್ವಾಮಿಗಳಿಗೆ ಸೀಮಿತ ಎಂದು ನಾವು ತಿಳಿದಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಮನುಷ್ಯತ್ವ ಉಳಿಸಿಕೊಂಡು, ಮನುಷ್ಯರಾಗಿ ಬಾಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.ನಾನು ಶಿಕಾರಿಪುರದ ಶಾಸಕನಾಗಿದ್ದರೂ ರಾಜಕಾರಣದಲ್ಲಿ ಅಂಬೆಗಾಲಿಡುತ್ತಿರುವೆ. ಸಂಡೂರಿಗೆ ಚುನಾವಣೆಗೆ ಹೋಗಿದ್ದೆ. ಅಲ್ಲಿದ್ದವರೊಬ್ಬರು ಯಡಿಯೂರಪ್ಪ ತಾತ ಹೇಗಿದ್ದಾರೆ ಎಂದು ಕೇಳಿದರು. ಸದ್ಯ ಅವರು ಯಾವುದೇ ಹುದ್ದೆಯಲ್ಲಿರದಿದ್ದರೂ ಈ ನಾಡಿನ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಇದರಿಂದ ರಾಜಕಾರಣದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದರು.ನಮ್ಮ ತಂದೆ ಯಡಿಯೂರಪ್ಪ ಅವರ ರಾಜಕೀಯ ಏಳುಬೀಳುಗಳನ್ನು ಕಂಡಿದ್ದೇನೆ. ಅವರು ನನಗೆ ತಂದೆಯೂ ಹೌದು, ಗುರುಗಳೂ ಹೌದು. ಜೀವನದಲ್ಲಿ ಯಾವುದೇ ಗಂಡಾಂತರ ಬಂದರೂ ನಮ್ಮ ತಂದೆ ಹೆದರಿ ಹೋಗಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಕಾಲು ಎಳೆಯುವವರು ಹೆಚ್ಚಿದ್ದಾರೆ. ಆದರೂ ಎಲ್ಲಿಯೇ ಹೋದರೂ ಯಡಿಯೂರಪ್ಪ ಅವರ ಮಗನೆಂದು ಪ್ರೀತಿಯಿಂದ ಮಾತನಾಡಿಸುತ್ತಾರೆ. ಇದರಿಂದ ಯಾವುದೇ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಜಯೇಂದ್ರ ಅವರು ಜ್ವರದಿಂದ ಬಳಲುತ್ತಿದ್ದರೂ ಅತ್ಯಂತ ಪ್ರೀತಿಯಿಂದ ಸಾಣೇಹಳ್ಳಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಮಾತೃ ಭಾಷೆಯಲ್ಲಿ ಕಲಿಯಲು ಹಾತೊರೆಯುವ ಮಕ್ಕಳು ತಮಗೆ ಗೊತ್ತಿಲ್ಲದ ಇಂಗ್ಲಿಷ್ ಭಾಷೆ ಕಲಿಯಲು ಕಾನ್ವೆಂಟ್ ಶಾಲೆಗೆ ಸೇರುತ್ತವೆ ಎಂದು ಶಿಕ್ಷಣ ತಜ್ಞ ಅಬ್ದುಲ್ ರೆಹಮಾನ್ ಪಾಷಾ ಹೇಳಿದರು.ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ನಾಗರೀಕರು ಅವುಗಳ ಬಗ್ಗೆ ಜಾಗೃತರಾಗಿರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಭಂಡಾರ್ ತಿಳಿಸಿದರು.ಮಾದಾರ ಚೆನ್ನಯ್ಯ ಗುರುಪೀಠದ ಬಸವ ಮಾದಾರ ಶ್ರೀಗಳು ಆಶೀರ್ವಚನ ನೀಡಿದರು. ವಿಮಾನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹನುಮಲಿ ಷಣ್ಮುಖಪ್ಪ ಉಪಸ್ಥಿತರಿದ್ದರು.)
;Resize=(128,128))
;Resize=(128,128))