ಸಾರಾಂಶ
- ಗವಾಯಿಗಳ ಪುಣ್ಯಸ್ಮರಣೆ- ಧರ್ಮಸಭೆಯಲ್ಲಿ ಆವರಗೊಳ್ಳದ ಓಂಕಾರ ಶ್ರೀ ಅಭಿಮತ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂಗೀತ ಲೋಕಕ್ಕೆ ಪಂಡಿತ್ ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾದುದು. ಅಂಧ, ಅನಾಥ, ದೀನ-ದಲಿತರಿಗೆ ಸಂಗೀತದ ಮೂಲಕ ಅವರ ಬದುಕನ್ನು ಅರಳಿಸಿದ ಕೀರ್ತಿ ಉಭಯ ಗವಾಯಿಗಳಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.ನಗರದ ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಲಿಂ. ಪಂ. ಪಂಚಾಕ್ಷರಿ ಗವಾಯಿಗಳ 81ನೇ ಹಾಗೂ ಲಿಂ.ಪಂ. ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯ ಸ್ಮರಣೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕೇವಲ ಅರಮನೆಗೆ ಸೀಮಿತವಾಗಿದ್ದ ಸಂಗೀತವನ್ನು ಸಾಮಾನ್ಯ ಜನರಿಗೂ ತಲುಪಿಸುವ ಮಹಾತ್ಕಾರ್ಯವನ್ನು ಈ ಗಭ್ಯರು ಮಾಡಿದ್ದಾರೆ ಎಂದರು.
ರಂಗಕರ್ಮಿ, ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿಗೆ ಸಂಗೀತದ ಕಣ್ಣು ಕೊಟ್ಟವರು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು. ಸಂಗೀತ ಶಿಕ್ಷಣ ನೀಡುವ ಮೂಲಕ ಅಂಧರ ಪಾಲಿಗೇ ದೇವರೇ ಆಗಿದ್ದರು ಎಂದು ಗವಾಯಿಗಳ ಸಂಗೀತ ಸೇವೆ ಕೊಂಡಾಡಿದರು. ಉಭಯ ಗವಾಯಿಗಳು ಸಂಗೀತ, ಸಾಹಿತ್ಯ ಸೇವೆಗಳನ್ನು ಒಟ್ಟುಗೂಡಿಸಿಕೊಂಡು ಬಂದಿದ್ದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು. ಅಂಧ, ಅನಾಥ, ದೀನ-ದಲಿತರ ಸೇವೆಯಲ್ಲಿರುವ ಸುಖ ಮತ್ತೆ ಯಾವುದರಲ್ಲೂ ಇಲ್ಲ ಎಂದು ಪಂಚಾಕ್ಷರ ಗವಾಯಿಗಳು ಹೇಳುತ್ತಿದ್ದರೆಂದು ಸ್ಮರಿಸಿದರು.ದಾಸೋಹ- ಕಾಯಕ ತತ್ವವನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿರುವ ನಮ್ಮ ಚಿಂದೋಡಿ ಮನೆತನದ ಕೆ.ಬಿ. ಆರ್. ನಾಟಕ ಕಂಪನಿಗೆ ನೂರು ವರ್ಷ ತುಂಬಲಿದ್ದು, ಶತಮಾನೋತ್ಸವ ಸಮಾರಂಭವನ್ನು ದಾವಣಗೆರೆಯಲ್ಲಿಯೇ ಮಾಡಬೇಕೆಂಬ ಆಶಯ ನನ್ನದು. ಇದಕ್ಕೆ ಶಾಮನೂರು ಶಿವಶಂಕರಪ್ಪ, ಅಥಣಿ ವೀರಣ್ಣ ಸಹಕರಿಸುವಂತೆ ಮನವಿ ಮಾಡಿದರು.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರೂ, ಖ್ಯಾತ ಲೆಕ್ಕಪರಿಶೋಧಕರಾದ ಡಾ. ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮ ಅನೇಕ ದಾನಿಗಳ ನೆರವಿನಿಂದ ಸಾಕಷ್ಟು ಅಭಿವೃದ್ಧಿ ಪಥದತ್ತ ಸಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬೇಕಾಗಿದೆ. ವೀರೇಶ್ವರ ಪುಣ್ಯಾಶ್ರಮವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಹ ಸೇವಾ ಕಾರ್ಯಗಳನ್ನು ಮಾಡಬೇಕಾಗಿದೆ. ಈಗಿರುವ ಐವತ್ತು ಅಂಧ ವಿದ್ಯಾರ್ಥಿಗಳ ಜೊತೆಗೆ ನೂರು ಅಂಧ ವಿದ್ಯಾರ್ಥಿಗಳಿಗೆ ಸಂಗೀತ ಕಲಿಕೆ ಜೊತೆಗೆ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲು ಆಶ್ರಮದ ಆಡಳಿತ ಮಂಡಳಿ ಸಿದ್ದವಿದೆ ಎಂದರು.ವೀರೇಶ್ವರ ಪುಣ್ಯಾಶ್ರಮದ ಉಪಾಧ್ಯಕ್ಷ ದೇವರಮನಿ ಶಿವಕುಮಾರ್, ಖಜಾಂಚಿ ಎಸ್.ಕೆ.ವೀರಣ್ಣ, ಎಸ್.ಜಿ.ಉಳವಯ್ಯ, ವೀರಭದ್ರಯ್ಯ ಯರಗಲ್, ಐಗೂರು ಚಂದ್ರಶೇಖರ, ಅಣಬೇರು ಸಂದೀಪ್, ಐಗೂರು ಶಿವಕುಮಾರ, ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ, ರಮೇಶ್ ಕೆಲ್ಲೂರು, ಆಶ್ರಮದ ಕಾರ್ಯದರ್ಶಿ ಎ.ಹೆಚ್. ಸಿದ್ಧಲಿಂಗಸ್ವಾಮಿ, ಮಹಾಂತೇಶ್, ಅಮರಯ್ಯ ಮತ್ತಿತರರು ಉಪಸ್ಥಿತರಿದ್ದರು.
- - -(ಕೋಟ್) ಸಂಗೀತ, ಸಾಹಿತ್ಯ, ಕಲೆಗಳಿಗೆ ಪ್ರೋತ್ಸಾಹಿಸುವ ಮೂಲಕ ಅಂಧರ ಬದುಕು ಕಟ್ಟಿಕೊಡುವಲ್ಲಿ ಪಂಚಾಕ್ಷರ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಪಾತ್ರ ಹಿರಿದು. ಭಾರತೀಯ ಶಾಸ್ತ್ರೀಯ, ಹಿಂದೂ ಸ್ಥಾನಿ ಸಂಗೀವನ್ನು ಜನಪ್ರಿಯಗೊಳಿಸಿದ ಕೈಂಕರ್ಯ ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಸಲ್ಲುತ್ತದೆ.
ನ19ಕೆಡಿವಿಜಿ31 ದಾವಣಗೆರೆಯ ಬಾಡಾಕ್ರಾಸಿನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಪಂ.ಪಂಚಾಕ್ಷರಿ ಗವಾಯಿಗಳ, ಪಂ.ಪುಟ್ಟರಾಜ ಗವಾಯಿಗಳ ಸ್ಮರಣೋತ್ಸವ ಕಾರ್ಯಕ್ರಮವನ್ನು ಚಿಂದೋಡಿ ಬಂಗಾರೇಶ ಉದ್ಘಾಟಿಸಿದರು.- ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ್
;Resize=(128,128))
;Resize=(128,128))
;Resize=(128,128))
;Resize=(128,128))