ಸುಜನಾ(ಹೊಸಹೊಳಲು), ಬಿ.ಎಂ.ಶ್ರೀ. ಅ.ರಾ. ಮಿತ್ರ, ಎ.ಎನ್. ಮೂರ್ತಿರಾಯ, ಅ.ನಾ. ಸುಬ್ಬರಾವ್, ಪು.ತಿ.ನ, ಮಂಡ್ಯ ಜಿಲ್ಲೆಯವರಾಗಿದ್ದು, ಮೊದಲು ಸ್ಥಳೀಯ ನಮ್ಮ ಜಿಲ್ಲೆಯ ರತ್ನಗಳನ್ನು ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕಿದೆ.

ಕಿಕ್ಕೇರಿ:

ಸಂಸ್ಕೃತಿ, ಪರಂಪರೆಯ ಗಟ್ಟಿಗೆ ಸಾಹಿತಿಗಳು, ಕವಿಗಳ ಕೊಡುಗೆ ಅನನ್ಯವಾಗಿದೆ ಎಂದು ಆದರ್ಶ ಸುಗಮ ಸಂಗೀತಾ ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಕನ್ನಡ ಕಲಾ ಸಂಘ, ಬೆಂಗಳೂರಿನ ಆದರ್ಶ ಸುಗಮ ಸಂಗೀತಾ ಅಕಾಡೆಮಿ ಏರ್ಪಡಿಸಿದ್ದ ‘ಮರೆಯಲಾಗದ ಮಹನೀಯರು’ ಕಾರ್ಯಕ್ರಮದಲ್ಲಿ ಮಾತನಾಡಿ, ಕಿಕ್ಕೇರಿ ಸಾಹಿತ್ಯ ಸಂಸ್ಕೃತಿ ಬೇರಾಗಿದೆ. ತವರಿನವರಾದ ಮೈಸೂರು ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿ, ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಭಾಷಾತಜ್ಞ ಕಿಕ್ಕೇರಿ ನಾರಾಯಣ ಕನ್ನಡ ಸಾರಸ್ವತ ಲೋಕದ ದಿಗ್ಗಜರು ಎಂದರು.

ಸುಜನಾ(ಹೊಸಹೊಳಲು), ಬಿ.ಎಂ.ಶ್ರೀ. ಅ.ರಾ. ಮಿತ್ರ, ಎ.ಎನ್. ಮೂರ್ತಿರಾಯ, ಅ.ನಾ. ಸುಬ್ಬರಾವ್, ಪು.ತಿ.ನ, ಮಂಡ್ಯ ಜಿಲ್ಲೆಯವರಾಗಿದ್ದು, ಮೊದಲು ಸ್ಥಳೀಯ ನಮ್ಮ ಜಿಲ್ಲೆಯ ರತ್ನಗಳನ್ನು ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕಿದೆ ಎಂದು ಹೇಳಿದರು.

ವಕೀಲ ರಾಜೇಶ್ ಮಾತನಾಡಿ, ಶ್ರೇಷ್ಟ ವ್ಯಕ್ತಿಗಳು ಬಡತನ, ಹಳ್ಳಿಗಾಡಿನಲ್ಲಿ ಜನಿಸಿದವರಾಗಿದ್ದು, ಕನ್ನಡ ಭಾಷೆ, ನುಡಿ ಗಟ್ಟಿಯಾಗಲು ಇವರ ಸಾಧನೆಯನ್ನು ತಿಳಿಸಿಕೊಡಬೇಕಿದೆ ಎಂದು ನುಡಿದರು.

ಸಮಾಜ ಸೇವಕ ಮಾದಾಪುರ ಸುಬ್ಬಣ್ಣ ಕವಿಶ್ರೇಷ್ಟರ ಪರಿಚಯ ಮಾಡಿಕೊಟ್ಟರು. ಗಾಯಕ ಕಿಕ್ಕೇರಿ ಕವಿಗಳ ವಿವಿಧ ಗೀತೆಗಳನ್ನು ಹಾಡಿ ಮಕ್ಕಳಿಂದ ಹಾಡಿಸಿ, ಅರ್ಥಸಹಿತ ವಿವರಿಸಿ ಸಾಹಿತ್ಯ, ಕಾವ್ಯ, ಕವಿಗಳ ಪರಿಚಯದ ಅರಿವು ಮೂಡಿಸಿದರು.

ಸ್ಪಂದನಾ ಟ್ರಸ್ಟ್ ಟ್ರಸ್ಟಿ ತ್ರಿವೇಣಿ, ಕವಿತಾ, ಕೆ.ವಿ. ನಾಗರತ್ನ, ಕೀ ಬೋರ್ಡು ಕಲಾವಿದ ಅಭಿಷೇಕ್ ಇದ್ದರು.

ಮಂಡ್ಯ ತಾಪಂ ಕಚೇರಿ ಕಟ್ಟಡಕ್ಕೆ ಹಣ ಬಿಡುಗಡೆಗೊಳಿಸಿ: ಪಿ.ರವಿಕುಮಾರ್

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕು ಪಂಚಾಯ್ತಿ ಕಚೇರಿ ಕಟ್ಟಡಕ್ಕೆ ಶೀಘ್ರ ಹಣ ಬಿಡುಗಡೆಗೊಳಿಸಿ ತ್ವರಿತವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲು ಸಹಕರಿಸುವಂತೆ ಶಾಸಕ ಪಿ.ರವಿಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡು ತಾಪಂ ಕಚೇರಿ ಕಟ್ಟಡಕ್ಕೆ ಹಣ ಬಿಡುಗಡೆ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ ದೊರಕಿರಲಿಲ್ಲ. ಸದನದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಪ್ರಶ್ನಿಸಿದಾಗ ಅವರು ಉತ್ತರ ನೀಡುವಂತೆ ಸೂಚಿಸಿದರು.

ಅದರಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಾಲೂಕು ಪಂಚಾಯ್ತಿ ಕಚೇರಿ ಕಟ್ಟಡಕ್ಕೆ ೩ ಕೋಟಿ ರು.ಗೆ ಅನುಮೋದನೆ ದೊರಕಿಸಿರುವುದಾಗಿ ಹೇಳಿದಾಗ, ಶಾಸಕ ಪಿ.ರವಿಕುಮಾರ್ ಪ್ರತಿಕ್ರಿಯಿಸಿ, ೮೦ ವರ್ಷದಿಂದ ತಾಲೂಕು ಪಂಚಾಯ್ತಿ ಕಚೇರಿ ಕಟ್ಟಡ ಹಳೆಯದಾಗಿತ್ತು. ಈಗ ಆ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಸರ್ಕಾರ ಅನುಮೋದನೆ ನೀಡಿರುವ ೩ ಕೋಟಿ ರು. ಹಣದಲ್ಲಿ ೭೫ ಲಕ್ಷ ರು. ಹಣವನ್ನು ಮಾತ್ರ ಬಿಡುಗಡೆಗೊಳಿಸಲಾಗಿದೆ ಎಂದರು.

ಬಿಡುಗಡೆಯಾಗಿರುವ ಹಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲಾಗಿದ್ದು, ಇದೀಗ ಕಾಮಗಾರಿ ಸ್ಥಗಿತಗೊಂಡಿದೆ. ಬಾಕಿ ಹಣ ಬಿಡುಗಡೆಯಾಗದಿರುವ ಕಾರಣ ಕಬ್ಬಿಣಗಳು ತುಕ್ಕು ಹಿಡಿಯಲಾರಂಭಿಸಿವೆ. ಶೀಘ್ರದಲ್ಲೇ ೨.೨೫ ಕೋಟಿ ರು. ಹಣ ಬಿಡುಗಡೆ ಮಾಡಿದರೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ. ಇಲ್ಲದಿದ್ದರೆ ಕೊಟ್ಟ ಹಣವೂ ವ್ಯರ್ಥವಾಗಲಿದೆ ಎಂದು ಸಭೆಯ ಗಮನಕ್ಕೆ ತಂದರು.

ಶಾಸಕರ ಮಾತನ್ನು ಆಲಿಸಿದ ಸಚಿವ ಕೃಷ್ಣಭೈರೇಗೌಡ ಅವರು ಆದಷ್ಟು ಬೇಗ ಹಣ ಬಿಡುಗಡೆಗೊಳಿಸಿ ಕಾಮಗಾರಿ ಸುಗಮವಾಗಿ ನಡೆಯುವುದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.