ಹಿಂದೂ ಧರ್ಮದ ಪುನರುತ್ಥಾನಕ್ಕೆಆಚಾರ್ಯತ್ರಯರ ಕೊಡುಗೆ ಅಪಾರ: ಶಾಸಕ ಕೆ. ಹರೀಶ್ ಗೌಡ

| Published : May 02 2025, 11:47 PM IST

ಹಿಂದೂ ಧರ್ಮದ ಪುನರುತ್ಥಾನಕ್ಕೆಆಚಾರ್ಯತ್ರಯರ ಕೊಡುಗೆ ಅಪಾರ: ಶಾಸಕ ಕೆ. ಹರೀಶ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಧರ್ಮದ ಪುನರುತ್ಥಾನಕ್ಕೆ ಅಭೂತಪೂರ್ವ ಕೊಡುಗೆ ನೀಡಿದ ಇಬ್ಬರು ಶ್ರೇಷ್ಠ ಆಚಾರ್ಯರ ಜಯಂತಿಯ ದಿನ. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ಶಂಕರಾಚಾರ್ಯ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ರಾಮಾನುಜಾಚಾರ್ಯರ ಜಯಂತಿಗಳು ಒಂದೇ ದಿನ ಆಚರಿಸುತ್ತಿರುವುದು ಸಂತಸ ತಂದಿದೆ.

ಕನ್ನಡಪ್ರಭ ವಾರ್ತೆ ಮೈಸೂರುನಗರದ ರಮಾವಿಲಾಸ ರಸ್ತೆಯಲ್ಲಿರುವ ಕಂಚಿ ಮಠದ ರಾಮಮಂದಿರದಲ್ಲಿ ಮೈಸೂರು ಯುವ ಬಳಗದ ವತಿಯಿಂದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಆಚರಿಸಲಾಯಿತು. ಆಚಾರ್ಯತ್ರಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಪುಷ್ಪ ನಮನ ಸಲ್ಲಿಸಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಹಿಂದೂ ಧರ್ಮದ ಪುನರುತ್ಥಾನಕ್ಕೆ ಅಭೂತಪೂರ್ವ ಕೊಡುಗೆ ನೀಡಿದ ಇಬ್ಬರು ಶ್ರೇಷ್ಠ ಆಚಾರ್ಯರ ಜಯಂತಿಯ ದಿನ. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ಶಂಕರಾಚಾರ್ಯ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ರಾಮಾನುಜಾಚಾರ್ಯರ ಜಯಂತಿಗಳು ಒಂದೇ ದಿನ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. ಅರ್ಚಕರಾದ ರಾಮಾನುಜಂ, ವೆಂಕಟೇಶ್, ನಾರಾಯಣಾಚಾರ್ಯ, ಗುರು, ನರಸಿಂಹ, ಧ್ಯಾನ್, ಸಂದೀಪ್, ರವಿಚಂದ್ರ, ನವೀನ್, ರೇಖಾ ಶ್ರೀನಿವಾಸ್, ಹೊಯ್ಸಳ ಕರ್ನಾಟಕ ಸಂಘದ ರಂಗನಾಥ್, ಪ್ರಶಾಂತ್, ಚಕ್ರಪಾಣಿ ಇದ್ದರು.