ಸೂಲಿಬೆಲೆ: ಹೊಸಕೋಟೆ ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಬೆಂಡಿಗಾನಹಳ್ಳಿ ಕುಟುಂಬದ ಸಹಕಾರ ಸಿಂಹಪಾಲು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಹೇಳಿದರು

ಸೂಲಿಬೆಲೆ: ಹೊಸಕೋಟೆ ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಬೆಂಡಿಗಾನಹಳ್ಳಿ ಕುಟುಂಬದ ಸಹಕಾರ ಸಿಂಹಪಾಲು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಹೇಳಿದರು.

ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಹಮ್ಮಿಕೊಂಡಿದ್ದ ದಿ.ವೆಂಕಟರಮಣಗೌಡ ಸ್ಮರಣಾರ್ಥ ಮಕ್ಕಳಿಗೆ ಟ್ರಾಕ್ ಸೂಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಡಿಗಾನಹಳ್ಳಿ ಮಂಡಲ್ ಪ್ರಧಾನರಾಗಿ ಜನಾನುರಾಗಿಯಾಗಿ ಕೆಲಸ ಮಾಡಿದ ಧೀಮಂತ ನಾಯಕ ದಿವಂಗತ ವೆಂಕಟರಮಣಗೌಡರ ೩೩ನೇ ವರ್ಷದ ಸ್ಮರಣಾರ್ಥ ಜೇನುಗೂಡು ಟ್ರಸ್ಟ್ ಹಾಗೂ ದಾನಿಗಳ ಸಹಯೋಗದಲ್ಲಿ ಟ್ರಾಕ್ ಸೂಟ್ ವಿತರಿಸಿದೆ ಎಂದು ಹೇಳಿದರು.

ಜೇನುಗೂಡು ಟ್ರಸ್ಟ್ ಶಾಸಕ ಶರತ್ ಬಚ್ಚೇಗೌಡರ ಮಾರ್ಗದರ್ಶನದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಿದೆ. ಶಾಲಾ ಕಟ್ಟಡ, ಶೌಚಾಲಯ, ಅಡುಗೆ ಕೋಣೆ ನಿರ್ಮಾಣಕ್ಕೆ ಖಾಸಗಿ ಕಂಪನಿಗಳ ಮೂಲಕ ನೆರವು ನೀಡುತ್ತಿದೆ ಹಾಗೂ ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಅಭಿವೃದ್ಧಿ ಮಾಡಿ ಮಕ್ಕಳಿಗೆ ಅಗತ್ಯ ಲೇಖನ ಸಾಮಗ್ರಿಗಳು ಪರಿಕರಗಳ ವಿತರಣೆ ಮಾಡುತ್ತಿದೆ ಎಂದು ಹೇಳಿದರು.

ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳ ಸಬಲೀಕರಣದ ಉದ್ದೇಶದಿಂದ ಬಡ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ೮ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮ ಟ್ರಸ್ಟಿನ ಮಹಾಪೋಷಕರಾದ ಬಿ.ವಿ.ಸತೀಶಗೌಡರ ಸಹಕಾರದಿಂದ ನಾವು ಮತ್ತಷ್ಟು ಸೇವೆ ಸಲ್ಲಿಸಲು ಅನುಕೂಲವಾಗಿದೆ ಎಂದರು.

ಟ್ರಸ್ಟ್‌ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ಟ್ರಸ್ಟ್ ಶಿಕ್ಷಣ ಕ್ಷೇತ್ರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣೆ, ರಕ್ತಧಾನ ಶಿಬಿರ ಹಮ್ಮಿಕೊಳ್ಳುತ್ತಿದ್ದೇವೆ ಎಂದರು

ಇಧೆ ಸಂದರ್ಭದಲ್ಲಿ ಟ್ರಾಕ್ ಸೂಟ್ ವಿತರಣೆಗೆ ಜೇನುಗೂಡು ಟ್ರಸ್ಟ್‌ಹರ ಸಹಕರಿಸಿದ ರಾಜಸ್ವ ನಿರೀಕ್ಷಕರಾದ ನ್ಯಾನಮೂರ್ತಿ, ಗಿಡ್ಡಪ್ಪನಹಳ್ಳಿ ಗ್ರಾಪಂ ಅಭಿವೃದ್ದಿ ಅಧಿಕಾರಿ ವಿಜಯಕುಮಾರಿ ಅವರನ್ನು ಗೌರವಿಸಲಾಯಿತು.

ಪಿಡಿಒ ವಿಜಯಕುಮಾರಿ, ರೆವಿನ್ಯೂ ಇನ್ಸ್ಪೆಕ್ಟರ್ ನ್ಯಾನಮೂರ್ತಿ, ಮೊರಾಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ಮುಖ್ಯ ಶಿಕ್ಷಕ ನಾಗೇಶ್, ಜೇನುಗೂಡು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಸಂಘಟನಾ ಕಾರ್ಯಧರ್ಶಿ ವಸಂತಕುಮಾರ್, ನಿರ್ದೇಶಕರಾದ ಸೈಯದ್ ಮಹಬೂಬ್, ಅತ್ತಿಬೆಲೆ ಮಂಜುನಾಥ್, ನಯಾಜ್ ಖಾನ್, ರವಿಕುಮಾರ್, ಶಾಲಾ ಅಧ್ಯಕ್ಷ ರಾಜೀವ್, ಸಹ ಶಿಕ್ಷಕರಾದ ತಸ್ಮಿಯಾ, ರಜನಿ, ಆನಿತಾ, ಸೌಮ್ಯ, ನವೀನ್, ಗ್ರಂಥಪಾಲಕ ಗಂಗಪ್ಪ, ಮುನಿಶಾಮಪ್ಪ ಇತರರಿದ್ದರು.

(ಫೋಟೋ ಕ್ಯಾಪ್ಷನ್‌-1)

ಸೂಲಿಬೆಲೆ ಸಮೀಪದ ಗಿಡ್ಡಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಂಡಲ್ ಮಾಜಿ ಪ್ರಧಾನರಾದ ದಿವಂಗತ ವೆಂಕಟರಮಣಗೌಡರ ಸ್ಮರಣೆ ಕಾರ್ಯಕ್ರಮ ನಡೆಯಿತು.

(ಪೋಟೋ ಕ್ಯಾಪ್ಷನ್‌)

ಸೂಲಿಬೆಲೆ ಸಮೀಪದ ಗಿಡ್ಡಪ್ಪನಹಳ್ಳಿಯಲ್ಲಿ ದಿ. ವೆಂಕಟರಮಣಗೌಡ ಸ್ಮರಣಾರ್ಥ ಜೇನುಗೂಡು ಟ್ರಸ್ಟ್ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರಾಕ್ ಸೂಟ್ ವಿತರಿಸಲಾಯಿತು. ಬಿಇಒ ಪದ್ಮನಾಭ, ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ, ರೆವಿನ್ಯೂ ಇನ್ಸ್‌ಪೆಕ್ಟರ್ ನ್ಯಾನಮೂರ್ತಿ, ಪಿಡಿಒ ವಿಜಯಕುಮಾರಿ, ಬೆಟ್ಟಹಳ್ಳಿ ಗೋಪಿನಾಥ್, ಬಿ.ಶ್ರೀನಿವಾಸ್, ವಸಂತಕುಮಾರ್ ಇತರರಿದ್ದರು.