ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಭಾರತ ಸ್ವಾತಂತ್ರ್ಯ ಶತಮಾನೋತ್ಸವ ವೇಳೆಗೆ ದೇಶದ ಆರ್ಥಿಕತೆಯು ೩೦ ಟ್ರಿಲಿಯನ್ ಗುರಿ ಇರಿಸಿಕೊಳ್ಳಲಾಗಿದ್ದು, ಈ ವರ್ಷದೊಳಗೆ ದೇಶದ ಆರ್ಥಿಕತೆ ೫ ಟ್ರಿಲಿಯನ್ ತಲುಪುವ ನಿರೀಕ್ಷೆ ಇದೆ. ಭಾರತ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಮುನ್ನಡೆಯುತ್ತ ಸಾಗಿದೆ ಎಂದು ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಎಂ.ಸಿ.ಮುಲ್ಲಾ ಹೇಳಿದರು.ಸ್ಥಳೀಯ ಎಪಿಎಂಸಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ, ಬೆಂಗಳೂರ, ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿ, ತಾಳಿಕೋಟಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಮತ್ತು ತಾಳಿಕೋಟಿ ತಾಲೂಕಿನ ಎಲ್ಲ ಸಹಕಾರ ಸಂಘಗಳು, ಬ್ಯಾಂಕ್‌ಗಳು ಹಾಗೂ ಇತರೆ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷ-೨೦೨೫ ಹಾಗೂ ೭೨ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಎಂಬುವುದು ಅತ್ಯಮೂಲ್ಯವಾಗಿದೆ. ಸಹಕಾರ ಸಂಸ್ಥೆಗಳು ಎಲ್ಲ ವಲಯಗಳನ್ನು ವ್ಯಾಪಿಸಿದ್ದು, ಶೇ.೧೦೦ ರಷ್ಟು ಗ್ರಾಮೀಣ ಪ್ರದೇಶಗಳಲ್ಲಿಯೂ ಸೇವೆ ಒದಗಿಸುತ್ತ ಸಾಗಿವೆ ಎಂದರು. ಗ್ರಾಮೀಣ ಅಭಿವೃದ್ದಿಗೆ ಪೂರಕವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಹು ಸೇವಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ವಲಯದಿಂದ ಉದ್ಯೋಗ ಸೃಷ್ಟಿ ಗೋದಾಮುಗಳ ನಿರ್ಮಾಣ ಮೂಲಭೂತ ಸೌಕರ್ಯಗಳನ್ನು ಸಂಘಗಳು ಒದಗಿಸುವ ಮೂಲಕ ಪ್ರಾಥಮಿಕ ಸಹಕಾರಿ ಸಂಘಗಳು ವಿಶೇಷ ಕೊಡುಗೆ ನೀಡುತ್ತ ಸಾಗಿವೆ. ಸಹಕಾರಿ ಸಂಘಗಳು ಒಳ್ಳೆಯದತ್ತ ದಾಪುಗಾಲು ಹಾಕುತ್ತಾ ಸಾಗಲಿ ಎಂಬ ಉದ್ದೇಶದಿಂದಲೇ ರಾಜ್ಯದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಹಕಾರಿ ಸಪ್ತಾಹವನ್ನು ಆಚರಿಸುತ್ತ ಸಾಗಲಾಗಿದೆ ಎಂದು ಕೆಲವು ವಿಷಯಗಳ ಕುರಿತು ಬೆಂಗಳೂರಿನಲ್ಲಿ ತರಬೇತಿ ಪಡೆಯಲಾಗಿದ್ದು ಕೂಡಲೇ ಸಹಕಾರಿ ಮಾಹಿತಿ ಕೇಂದ್ರವನ್ನು ಅನುಕೂಲವಾಗುವಂತೆ ಸ್ಥಾಪಿಸಲಾಗುವುದು ಎಂದರು.ಸಹಕಾರ ಸಂಘಗಳ ನಿವೃತ್ತ ಉಪನಿಬಂದಕ ಪಿ.ಬಿ.ಕಾಳಗಿ ಮಾತನಾಡಿ, ಸಹಕಾರಿ ಉದ್ಯಮಗಳ ಮೂಲಕ ಸಾಂಪ್ರದಾಯಕ ಕೌಶಲ್ಯಗಳನ್ನು ಪುನರುಜೀವನಗೊಳಿಸುವುದು ಭಾರತದ ಕರ ಕುಶಲ ಮತ್ತು ಕೈಮಗ್ಗ ವಲಯಗಳು ಶತಮಾನಗಳಷ್ಟು ಹಳೆಯ ಸಾಂಪ್ರದಾಯಗಳು ಆಗಿದ್ದು ಕೌಶಲ್ಯಗಳು ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸುತ್ತ ಲಕ್ಷಾಂತರ ಗ್ರಾಮೀಣ ಕುಶಲಕರ್ಮಿಗಳು ಮತ್ತು ನೇಕಾರರನ್ನು ನೇಮಿಸಿಕೊಳ್ಳುವಂತಹ ಕಾರ್ಯ ನಡೆಸಲು ಮುಂದಾಗುತ್ತಲಿದೆ. ಅದರಲ್ಲಿ ಮಹಿಳೆಯರು ಮತ್ತು ಯುವಕರು ಅನೌಪಚಾರಿಕ ಕೆಲಸಗಾರರಾದರೂ ಕೈಮಗ್ಗ ಮತ್ತು ಜವಳಿ ನೇಕಾರ ಸಹಕಾರಿ ಸಂಘಗಳು ಭಾರತದ ಸಂಸ್ಕೃತಿಕ ಪರಂಪರೆ ಕಾಪಾಡುತ್ತ ಗೌರವಾನ್ವಿತ ಸ್ವ ಉದ್ಯೋಗ ಸುಸ್ತಿರ ಗ್ರಾಮೀಣ ಜೀವನೋಪಾಯವನ್ನು ಉತ್ತೇಜಿಸುತ್ತ ಸಾಗಿವೆ ಎಂದರು. ನಾಲತವಾಡ ಶರಣ ವಿರೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎಸ್.ಪಾಟೀಲ ಹಾಗೂ ಜಿಲ್ಲಾ ಸಹಕಾರಿ ಯುನಿಯನ್ ಮಾಜಿ ನಿರ್ದೇಶಕರು ಹಾಗೂ ಕವಡಿಮಟ್ಟಿ ವಿವಿಧೋದೇಶ ಗ್ರಾಮೀಣ ಸಹಕಾರ ನಿರ್ದೇಶಕ ಸೋಮನಗೌಡ ನಾ ಪಾಟೀಲ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ಅನ್ನುವಂತಹ ಕಳಂಕ ಬಾರದಂತೆ ನೋಡಿಕೊಳ್ಳಬೇಕು. ಸಹಕಾರ ರಂಗದಲ್ಲಿ ಒಂದಾಗಿ ನಡೆದರೇ ತಾಲೂಕು ಹಾಗೂ ರಾಜ್ಯಮಟ್ಟದಲ್ಲಿ ಸಹಕಾರ ರಂಗವೆಂಬುವುದು ಮುನ್ನಡೆಯುವಂತಹ ಕಾರ್ಯವಾಗಬೇಕು. ಮುಖ್ಯವಾಗಿ ಈ ರಂಗದಲ್ಲಿ ಪಕ್ಷಾತೀತವಾಗಿ ನಡೆಯುವ ಕಾರ್ಯವಾಗಿ ಈ ರಂಗ ನಮ್ಮ ಮನೆ ಎಂಬ ಭಾವನೆಯಿಂದ ನಿಷ್ಟುರ ಪ್ರಾಮಾಣಿಕತನದಿಂದ ಮುಂದುವರೆಯುವ ಕಾರ್ಯವಾಗಬೇಕೆಂಬ ಉದ್ದೇಶವೇ ಇಂದು ಆಚರಿಸಲಾಗುತ್ತಿರುವ ಸಹಕಾರಿ ಸಪ್ತಾಹದ ಉದ್ದೇಶವಾಗಿದೆ ಎಂದರು.ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂದಕ ಎಸ್.ಜಿ.ಕುಂಬಾರ ಮಾತನಾಡಿ, ಮನುಷ್ಯ ಜನ್ಮ ತಾಳಿದ ಮೇಲೆ ಸಹಕಾರದಿಂದ ಬಾಳಿ ಬೆಳಗಬೇಕಾಗಿದೆ. ಅಭಿವೃದ್ಧಿ ಎಂಬುವುದು ಸಹಕಾರ ರಂಗದಿಂದಲೇ ಮಾತ್ರ ಸಾದ್ಯವೆಂದು ಸಹಕಾರ ಚಳುವಳಿ ಕುರಿತು ಸಹಕಾರಿ ರಂಗ ೧೯೦೪ರಲ್ಲಿ ಸಿದ್ದನಗೌಡರು ಪ್ರಾರಂಭಿಸಿದ್ದರ ಕುರಿತು ಆ ಸಂಘಟನೆ ನೋಂದಣಿಯಾಗಿ ೧೯೫೯ರಲ್ಲಿ ಪ್ರಾರಂಭವಾಗಿದ್ದರ ಕುರಿತು ವಿವರಿಸಿದರು.ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಡಾ.ಸಿ.ಲಿಂಗಪ್ಪ ಉಪನ್ಯಾಸ ನೀಡಿದರು. ಹಿರೂರ ಅನ್ನದಾನೇಶ್ವರ ಮಠದ ಪೀಠಾಧಿಪತಿ ಗುರುಜಯಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಇದೇ ಸಮಯದಲ್ಲಿ ಜಿಲ್ಲಾ ಸಹಕಾರಿ ಯುನಿಯನ್ ನಿ,ದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಬಸವರಾಜ ಮಹಾದೇವಪ್ಪ ಕುಂಬಾರ ಅವರಿಗೆ ಹಾಗೂ ಇನ್ನೋರ್ವ ಮಿಣಜಗಿ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಶಶಿಧರ ಬೆಣ್ಣೂರ ಅವರಿಗೆ ಹಾಗೂ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಸಜ್ಜನ, ತಾಳಿಕೋಟೆ ಪಿಕೆಪಿಎಸ್ ಅಧ್ಯಕ್ಷ ಗುರಸಂಗಪ್ಪ ಕಶೆಟ್ಟಿ, ವ್ಯವಸ್ಥಾಪಕ ಶಂಕರಗೌಡ ಪಾಟೀಲ ಅವರಿಗೆ ಸಹಕಾರ ಅಭಿವೃದ್ದಿ ಅಧಿಕಾರಿ ವಿಜಯಕುಮಾರ ಉತ್ನಾಳ, ಜಿಲ್ಲಾ ಸಹಕಾರಿ ಯುನಿಯನ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಕಾಶಿಬಾಯಿ ಪಾರಗೊಂಡ, ಪ್ರಭುಗೌಡ ಮದರಕಲ್ಲ, ಅಶೋಕ ಶೆಟ್ಟಿ, ಬಿ.ಕೆ.ಯಡ್ರಾಮಿ, ಗುರಲಿಂಗಪ್ಪಗೌಡ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆರ್.ಜಿ.ಹಿರೂರ, ಅಲ್ಲದೇ ತಾಳಿಕೋಟೆ ಭಾಗದಲ್ಲಿರುವ ಸಹಕಾರಿ ಕ್ಷೇತ್ರದ ಎಲ್ಲ ಸಂಘಗಳ ಅಧ್ಯಕ್ಷರಿಗೆ ಹಾಗೂ ನಾಲತವಾಡ, ಮುದ್ದೇಬಿಹಾಳ ಭಾಗದ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದು ಅಲ್ಲದೇ ಶ್ರೀಗಳಿಗೆ ಅತಿಥಿ ಮಹೋದಯರಿಗೆ, ಸನ್ಮಾನಿಸಿ ಗೌರವಿಸಲಾಯಿತು. ಪ್ರವೀಣ ಪಾಟೀಲ ಸ್ವಾಗತಿಸಿದರು. ಪಿ.ಎಸ್.ಕಲ್ಮೇಶ್ವರ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))