ಕನ್ನಡ ಶಾಲೆಗಳಿಗೆ ದಾನಿಗಳ ಸಹಕಾರ ಶ್ಲಾಘನೀಯ

| Published : Jan 23 2025, 12:47 AM IST

ಸಾರಾಂಶ

ಗೋಶಾಲೆಯಲ್ಲಿ ಸೇವೆ ಮತ್ತು ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ಕೊಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಹೆಸರನ್ನು ಹೇಳಲು ಇಚ್ಛಿಸದ ದಾನಿಗಳಿಗೆ ಅಭಿನಂದನೆಗಳು ಎಂದು ಸಿಆರ್‌ಪಿ ವಿಷ್ಣುವರ್ಧನ್ ಹೇಳಿದರು. ಕಲಿಕಾ ಉಪಕರಣಗಳನ್ನು ಕೊಟ್ಟಿರುವ ಹೆಸರು ಹೇಳಲಿಚ್ಛಿಸದ ದಾನಿಗಳು ಒಂದು ಗೋವಿನ ನಿರ್ವಹಣೆಯ ದತ್ತು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ಮನೆಗಳ ಶುಭ ಕಾರ್ಯಗಳಲ್ಲಿ ಮತ್ತು ಹುಟ್ಟುಹಬ್ಬದ ನೆನಪಿನಲ್ಲಿ ಗೋ ಶಾಲೆಗೆ ಬಂದು ಗೋವುಗಳಿಗೆ ಸೇವೆ ಸಲ್ಲಿಸಬಹುದು ಎಂದರು.

ಅರಸೀಕೆರೆ: ಗೋಶಾಲೆಯಲ್ಲಿ ಸೇವೆ ಮತ್ತು ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ಕೊಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಹೆಸರನ್ನು ಹೇಳಲು ಇಚ್ಛಿಸದ ದಾನಿಗಳಿಗೆ ಅಭಿನಂದನೆಗಳು ಎಂದು ಸಿಆರ್‌ಪಿ ವಿಷ್ಣುವರ್ಧನ್ ಹೇಳಿದರು.

ಅವರು ನಗರದ ಬಿ ಎಚ್ ರಸ್ತೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ಶ್ರೀ ಸಂಕಟ ವಿಮೋಚನಾ ಪಾರ್ಶ್ವ ಭೈರವ ಗೋಶಾಲೆಯ ಆಡಳಿತ ಅಧಿಕಾರಿ ಮೋಹನ್ ಕುಮಾರ್ ಅವರು, ದಾನಿಯೊಬ್ಬರು ನೀಡಿದ್ದ ಕಲಿಕಾ ಉಪಕರಣಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಸರಕಾರ ಏನು ಸೌಲಭ್ಯ ಕೊಟ್ಟರೂ ಸಹ ಸಮುದಾಯದ ಸ್ಪಂದನೆ ಬಹಳ ಮುಖ್ಯವಾಗಿರುತ್ತದೆ ಎಂದರು.

ಗೋಶಾಲೆ ಆಡಳಿತ ಅಧಿಕಾರಿ ಮೋಹನ್ ಕುಮಾರ್ ಗೋವುಗಳನ್ನು ಮಾಲೀಕರು ತಮಗೆ ಸಾಕಲಾಗದ ಗೋವುಗಳನ್ನು ಗೋಶಾಲೆಗೆ ತಂದುಬಿಡುತ್ತಾರೆ. ಅವುಗಳನ್ನು ನಿರ್ವಹಿಸಲು ನಾವು ದಾನಿಗಳಿಂದ ಸಹಕಾರವನ್ನು ಪಡೆಯಬೇಕಾಗುತ್ತದೆ. ಕಲಿಕಾ ಉಪಕರಣಗಳನ್ನು ಕೊಟ್ಟಿರುವ ಹೆಸರು ಹೇಳಲಿಚ್ಛಿಸದ ದಾನಿಗಳು ಒಂದು ಗೋವಿನ ನಿರ್ವಹಣೆಯ ದತ್ತು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ಮನೆಗಳ ಶುಭ ಕಾರ್ಯಗಳಲ್ಲಿ ಮತ್ತು ಹುಟ್ಟುಹಬ್ಬದ ನೆನಪಿನಲ್ಲಿ ಗೋ ಶಾಲೆಗೆ ಬಂದು ಗೋವುಗಳಿಗೆ ಸೇವೆ ಸಲ್ಲಿಸಬಹುದು ಎಂದರು.

ಶ್ರೀ ಸಂಕಟಮೋಚನಾ ಪಾರ್ಶ್ವಭೈರವ ದೇವಾಲಯ ಸಮಿತಿ ಸದಸ್ಯ ಚೇತನ್ ಜೈನ್ ಶ್ರೀ ಕ್ಷೇತ್ರಕ್ಕೆ ಮಕ್ಕಳನ್ನು ಕರೆದುಕೊಂಡು ಬನ್ನಿ ಗೋ ಶಾಲೆಗಳನ್ನು ನೋಡಿದಂತೆ ಆಗುತ್ತದೆ ಎಂದ ಅವರು ನಾನು ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಈ ಶಾಲೆಗೆ ನಮ್ಮ ಸಹಕಾರ ಇರುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಕರಿಯಮ್ಮ ಸರಕಾರಿ ಶಾಲೆಗಳಿಗೆ ದಾನಿಗಳು ಸ್ಪಂದಿಸಿದಾಗ ಕರ್ತವ್ಯದಲ್ಲಿ ನಮಗೆ ಇನ್ನೂ ಹೆಚ್ಚಿನ ಸ್ಫೂರ್ತಿ ಬರುತ್ತದೆ. ನಿಮ್ಮಸಹಕಾರ ಸದಾ ಇರಲಿ ಎಂದು ಆಶಿಸಿದರು.