ಧರ್ಮದ ತಿರುಳೇ ಸಹಬಾಳ್ವೆಯ ಸಮರಸದ ಜೀವನ ವಿಧಾನ: ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

| Published : Mar 10 2025, 12:21 AM IST

ಧರ್ಮದ ತಿರುಳೇ ಸಹಬಾಳ್ವೆಯ ಸಮರಸದ ಜೀವನ ವಿಧಾನ: ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಉಜ್ವಲ ಬದುಕಿಗೆ ಧಾರ್ಮಿಕ ಕಾರ್ಯಕ್ರಮಗಳು ಮಾರ್ಗದರ್ಶನ ಮಾಡಬೇಕು. 12ನೇ ಶತಮಾನದ ಶರಣರು ನೀಡಿದ ಸಂದೇಶಗಳು ಎಲ್ಲ ಕಾಲಕ್ಕೂ ಸಲ್ಲುವ ಮನುಷ್ಯನ ಹಿತದ ಚಿಂತನೆಗಳಾಗಿವೆ.

ಹಾನಗಲ್ಲ: ಧರ್ಮ ಸಮ್ಮತವಾದ ಭಾವೈಕ್ಯಕ್ಕೆ ಇಡೀ ಮಾನವ ಕುಲ ಒಟ್ಟಾಗಿ ಮುನ್ನಡೆಯುವ ಕಾಲ ಇದಾಗಿದ್ದು, ಧರ್ಮದ ತಿರುಳೇ ಲೋಕ ಕಲ್ಯಾಣದೊಂದಿಗೆ ಸಹಬಾಳ್ವೆಯ ಸಮರಸದ ಜೀವನ ವಿಧಾನವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ತಿಳಿಸಿದರು.ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆ ಉದ್ಘಾಟಿಸಿ, ಗ್ರಾಮಸ್ಥರಿಂದ 25ನೇ ತುಲಾಭಾರ ಸ್ವೀಕರಿಸಿ ಮಾತನಾಡಿ, ಪಶುತ್ವದಿಂದ ಹೊರಬಂದು ಶಾಂತಿ, ಸಹನೆಯಿಂದ ಮಾನವನಾಗುವ ಗುಣ ಬೇಕಾಗಿದೆ ಎಂದರು.

ಉಜ್ವಲ ಬದುಕಿಗೆ ಧಾರ್ಮಿಕ ಕಾರ್ಯಕ್ರಮಗಳು ಮಾರ್ಗದರ್ಶನ ಮಾಡಬೇಕು. 12ನೇ ಶತಮಾನದ ಶರಣರು ನೀಡಿದ ಸಂದೇಶಗಳು ಎಲ್ಲ ಕಾಲಕ್ಕೂ ಸಲ್ಲುವ ಮನುಷ್ಯನ ಹಿತದ ಚಿಂತನೆಗಳಾಗಿವೆ. ಶಿವಭಕ್ತಿ, ಶಿವಧ್ಯಾನದೊಂದಿಗೆ ಸಾರ್ಥಕ ಜೀವನಕ್ಕೆ ಹಾತೊರೆಯುವಂತೆ ಆಗಬೇಕು. ಪಂಚಾಕ್ಷರಿ ಮಂತ್ರದ ಶಕ್ತಿ ಸಾಮರ್ಥ್ಯ ಅರಿತು ಅನುಸರಿಸಬೇಕು. ಭಕ್ತಿ ಇಲ್ಲದಿದ್ದರೆ ಭಾವನೆಗಳು ಸಾಯುತ್ತವೆ. ಧರ್ಮ ಎಲ್ಲರನ್ನೂ ಕಾಪಾಡುತ್ತದೆ. ನಾಳಿನ ಪೀಳಿಗೆಗಾಗಿ ಒಳಿತನ್ನು ಉಳಿಸಿಕೊಡುವ ಅಗತ್ಯವಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ಎಲ್ಲರೂ ಅನುಸರಿಸಬೇಕು ಎಂದರು.ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಸುಮಂಗಲಾ ದೊಡ್ಡಮನಿ ಅವರು ಸಲ್ಲಿಸಿದ ತುಲಾಭಾರ ಸೇವೆ ಸ್ವೀಕರಿಸಿ ಮಾತನಾಡಿ, ಶಿಷ್ಟರ ಪರಿಪಾಲನೆ, ದುಷ್ಟರ ದಮನವೇ ಧರ್ಮ. ಧರ್ಮ ಕಾರ್ಯಗಳಿಂದ ಮನುಷ್ಯನಿಗೆ ಪರಿಪೂರ್ಣತೆ ಬರುತ್ತದೆ. ಭಕ್ತಿಯಿಂದಲೇ ಮನುಷ್ಯನಿಗೆ ಮುಕ್ತಿ. ಸೊಕ್ಕಿನಿಂದ ನಡೆದರೆ ಅಂತ್ಯವೂ ಕಟ್ಟಿಟ್ಟ ಬುತ್ತಿ. ಉಪಕಾರದಲ್ಲಿ ಸ್ವರ್ಗವಿದೆ. ದ್ವೇಷ ಬಿಡು ಪ್ರೀತಿ ಮಾಡು ಎಂಬುದೇ ಇಂದಿನ ಮನುಷ್ಯನ ಮಂತ್ರವಾಗಬೇಕಾಗಿದೆ ಎಂದರು. ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಸಂಗಯ್ಯಶಾಸ್ತ್ರಿ ಹಿರೇಮಠ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ, ನಿವೃತ್ತ ಶಿಕ್ಷಕ ಮತ್ತಿಗಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಅಗಸನಹಳ್ಳಿ ಅತಿಥಿಗಳಾಗಿದ್ದರು. ದೇವಸ್ಥಾನ ಸಮಿತಿ ಪಂಚ ಕಮಿಟಿಯ ಮಲ್ಲಪ್ಪ ಬೆಣ್ಣಿ, ನಾರಾಯಣ ಬಡಿಗೇರ, ಟಾಕನಗೌಡ ಪಾಟೀಲ, ಈಶ್ವರ ಕುಲಕರ್ಣಿ, ಶಿವಾನಂದಪ್ಪ ಹಳ್ಳಿಗುಡಿ, ಇರಸಂಗಪ್ಪ ಗುರಣ್ಣನವರ, ಶಾಂತಪ್ಪ ದೊಡ್ಡಮನಿ, ಶಿವಪ್ಪ ಗೋನಾಳ, ಪ್ರಕಾಶ ಈಳಿಗೇರ, ಬಸಪ್ಪ ವಾಲಗದ, ಲಕ್ಷಪ್ಪ ಓಲೇಕಾರ, ಯಲ್ಲಪ್ಪ ಚಂದ್ರಗೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಸಾಪ ಭವನ ಕಾಮಗಾರಿ ಪರಿಶೀಲಿಸಿದ ಮಹೇಶ ಜೋಶಿ

ಹಾವೇರಿ: ವಿನಾಯಕ ನಗರದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಪರಿಶೀಲಿಸಿದರು.

ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ತಾಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಈರಣ್ಣ ಬೆಳವಡಿ, ಪೃಥ್ವಿರಾಜ್ ಬೆಟಗೇರಿ, ಉದ್ಯಮಿ ಪವನ್ ದೇಸಾಯಿ, ಲವ ದೇಸಾಯಿ, ಡಾ. ಕಾಶೀನಾಥ್ ದೀಕ್ಷಿತ, ಡಾ. ಗೋಪಾಲಕೃಷ್ಣ ಇದ್ದರು.