ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಆಗೆಲ್ಲ ಭೀಕರ ಬರಗಾಲ, ಜನರಿಗೆ ಸಂಕಷ್ಟದ ದಿನಗಳೇ ಬಂದಿವೆ. ಹೀಗಾಗಿ ದೇಶಕ್ಕೆ ದುಷ್ಟ ಕಾಂಗ್ರೆಸ್ ಬೇಡ ಹೀಗಾಗಿ ಮತದಾರರು ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ಮತ್ತೊಮ್ಮೆ ಮೋದಿ ಸರ್ಕಾರ ರಚನೆಗೆ ಕಾರಣೀಕರ್ತರಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಅಫಜಲ್ಪುರ ಪಟ್ಟಣದ ಮಹಾಂತೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಬಿಜೆಪಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಲಬುರಗಿ ಸಂಸದರಾಗಿ ಡಾ. ಉಮೇಶ ಜಾಧವ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಇನ್ನೊಂದು ಬಾರಿ ಅವಕಾಶ ನೀಡಿ. ನಾನು ರಾಜ್ಯಾಧ್ಯಕ್ಷನಾದ ಬಳಿಕ ಅಫಜಲ್ಪುರಕ್ಕೆ ಮೊದಲ ಬಾರಿಗೆ ಬಂದಿದ್ದೇನೆ. ನನ್ನ ಧರ್ಮಪತ್ನಿಯ ತವರುರಾದ ಅಫಜಲ್ಪುರದಿಂದ 40 ಸಾವಿರ ಮತಗಳ ಲೀಡ್ ಬಿಜೆಪಿಗೆ ನೀಡುವ ಮೂಲಕ ನನಗೆ ಉಡುಗೊರೆ ನೀಡಿ ಎಂದು ಮನವಿ ಮಾಡಿದರು.ಇನ್ನೂ ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಾಡುವ ಕೆಟ್ಟ ಸರ್ಕಾರವಿದೆ. ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ನೀಡಲು ಹಣವಿಲ್ಲ ಎನ್ನುವ ಸಿದ್ದರಾಮಯ್ಯನವರು ಮುಸಲ್ಮಾನರಿಗೆ 10 ಸಾವಿರ ಕೋಟಿ ಅನುದಾನ ನೀಡುತ್ತೇನೆಂದು ಹೇಳುತ್ತಾರೆ. ಇಂತವರಿಂದ ರಾಜ್ಯದ ಉದ್ದಾರ ಹೇಗೆ ಸಾಧ್ಯ. ಇದನ್ನೆಲ್ಲ ಮತದಾರರು ಬಹಳ ಗಂಭೀರವಾಗಿ ಪರಿಗಣಿಸಿ ಮೇ7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಚಿಹ್ನೆಗೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಮಾತನಾಡಿ ಬಿಜೆಪಿ ಪಕ್ಷ ಮನೆ ಒಡೆದಿದೆ ಎಂದು ಹೇಳುವ ನನ್ನ ಸಹೋದರ ಮಾಲೀಕಯ್ಯ ಗುತ್ತೇದಾರ ಯಾರು ಮನೆ ಒಡೆದರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಲಿ ಮಾಜಿ ಶಾಸಕರು ಒಂದಾಗಿ ತಾಲೂಕಿನಲ್ಲಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತಿಗೆ ಯಾರು ಮರುಳಾಗಬೇಡಿ, ದೇಶಕ್ಕಾಗಿ ಇ ನ್ನೊಂದು ಬಾರಿ ಮೋದಿ ಅವರು ಪ್ರಧಾನಿಯಾಗಬೇಕು ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ, ಅಲ್ಲದೆ ಅಫಜಲ್ಪುರ ತಾಲೂಕಿನಿಂದ 40 ಸಾವಿರದಷ್ಟು ಲೀಡ್ ಬಿಜೆಪಿಗೆ ನೀಡುವ ಮೂಲಕ ಹಾಲಿ ಮಾಜಿಗಳ ಕಳ್ಳ ಹೊಂದಾಣಿಕೆಗೆ ತಕ್ಕ ಪಾಠ ಕಲಿಸಿ ಎಂದರು.ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ, ಸೊಲ್ಲಾಪುರ ಸಂಸದ ಜಯಸಿದ್ದೇಶ್ವರ ಸ್ವಾಮಿಜೀ, ಪ್ರಮುಖರಾದ ಬಾಬುರಾವ ಚವ್ಹಾಣ, ಅವ್ವಣ್ಣ ಮ್ಯಾಕೇರಿ, ಶಂಕು ಮ್ಯಾಕೇರಿ, ಚಂದಮ್ಮ ಪಾಟೀಲ, ತುಕಾರಾಮ ಪಾಟೀಲ,ಚಂದು ಪಾಟೀಲ, ವಿದ್ಯಾಧರ ಮಂಗಳೂರೆ, ರಮೇಶ ನಿಲಗಾರ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಗೋವಿಂಧ ಭಟ್, ಸಿದ್ದಾಜೀ ಪಾಟೀಲ, ಶರಣು ತಳಕೇರಿ, ಜೈಭೀಮ ಕಟ್ಟಿ, ಶೈಲೇಶ ಗುಣಾರಿ, ಸಚೀನ ರಾಠೋಡ, ಧಾನು ಪತಾಟೆ, ಸುನೀಲ ಶೆಟ್ಟಿ, ಅಶೋಕ ಬಗಲಿ, ದಿಲೀಪ ಪಾಟೀಲ, ಸಾಬಯಣ್ಣ ಪೂಜಾರಿ, ವಿಶ್ವನಾಥ ರೇವೂರ, ಗುರು ಸಾಲಿಮಠ, ಮಳೇಂದ್ರ ಡಾಂಗೆ, ಬೀರಣ್ಣ ಪೂಜಾರಿ ಸೇರಿದಂತೆ ಅನೇಕರು ಇದ್ದರು.