ಸಾರಾಂಶ
ಹಾನಗಲ್ಲ: ಭಾರತೀಯ ಸೈನಿಕರ ಪರಾಕ್ರಮ, ತ್ಯಾಗ, ಬಲಿದಾನ ಹಾಗೂ ಅಂದಿನ ಪ್ರಧಾನಮಂತ್ರಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ದಿಟ್ಟ ತೀರ್ಮಾನದಿಂದಾಗಿ ೧೯೯೯ರಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಸದೆಬಡಿದು ಕಾರ್ಗಿಲ್ ಪ್ರದೇಶವನ್ನು ಭಾರತ ಮರುವಶಪಡಿಸಿಕೊಂಡಿತು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಅಭಿಪ್ರಾಯಪಟ್ಟರು. ಹಾನಗಲ್ಲ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಅವರು ಮಾತನಾಡಿದರು. ಯುದ್ಧದಲ್ಲಿ ಹೋರಾಡಿದ ಹಾಗೂ ವೀರ ಮರಣವನ್ನು ಹೊಂದಿದ ಎಲ್ಲ ಯೋಧರಿಗೆ ದೇಶವು ಸದಾ ಚಿರಋಣಿಯಾಗಿರುತ್ತದೆ. ಅವರೆಲ್ಲರ ಸ್ಮರಣೆಗಾಗಿ ಪ್ರತಿ ವರ್ಷ ಜು. ೨೬ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತಿದೆ. ದೇಶದ ರಕ್ಷಣೆಯ ವಿಷಯದಲ್ಲಿ ನಿಷ್ಠುರ ತೀರ್ಮಾನ ಕೈಗೊಳ್ಳುವ ಪ್ರಧಾನಿಯ ಅಗತ್ಯವಿದೆ ಎಂಬುದಕ್ಕೆ ದಿ. ಪ್ರಧಾನಿ ವಾಜಪೇಯಿ ಮಾದರಿಯಾಗಿದ್ದಾರೆ ಎಂದು ಶಿವರಾಜ ಸಜ್ಜನರ ಹೇಳಿದರು. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಕಾರ್ಗಿಲ್ ವಿಜಯ ದಿವಸವನ್ನು ಪ್ರತಿ ವರ್ಷ ಆಚರಿಸುವುದರಿಂದ ಭಾರತೀಯ ಯೋಧರ ಬಗ್ಗೆ ಹೆಮ್ಮೆ ಹಾಗೂ ಗೌರವ ಇಮ್ಮಡಿ ಆಗುವುದರ ಜೊತೆಗೆ ಪಾಕಿಸ್ತಾನದ ನೀಚ ಹಾಗೂ ಕುತಂತ್ರ ಬುದ್ಧಿಯ ಬಗ್ಗೆ ಸದಾ ನಮ್ಮನ್ನು ಎಚ್ಚರಿಸುತ್ತದೆ. ಮಳೆ ಗಾಳಿ ಬಿಸಿಲು ಚಳಿ ಹಿಮಪಾತ ಪ್ರಕೃತಿ ವಿಕೋಪಗಳಿಗೆ ಅಳುಕದೇ ದೇಶದ ಗಡಿಯನ್ನು ನಮ್ಮ ವೀರ ಯೋಧರು ರಕ್ಷಣೆ ಮಾಡುತ್ತಿರುವುದರಿಂದ ನಾವೆಲ್ಲರೂ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದೇವೆ. ದೇಶದ ಒಳಗಿರುವ ನಾವುಗಳೂ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ದೇಶದ ಹಿತಾಸಕ್ತಿಗೆ ಧಕ್ಕೆ ಬಾರದಂತೆ, ದೇಶದ ಸಮಗ್ರತೆ, ಸುರಕ್ಷತೆ, ಸಾಮಾಜಿಕ ಸ್ವಾಸ್ಥ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ಯುವ ಮೋರ್ಚಾ ಅಧ್ಯಕ್ಷ ಅಮಿತ್ ಶಡಗರವಳ್ಳಿ, ಮಂಡಲ ಅಧ್ಯಕ್ಷ ಮಹೇಶ್ ಕಮಡೊಳ್ಳಿ, ಮುಖಂಡರಾದ ಭೋಜರಾಜ ಕರೂದಿ, ಸಂತೋಷ್ ಭಜಂತ್ರಿ, ಸಚೀನ್ ರಾಮಣ್ಣನವರ, ಡಾ. ಸುನೀಲ ಹಿರೇಮಠ, ಸಂತೋಷ್ ಟಿಕೋಜಿ, ರವಿಚಂದ್ರ ಪುರೋಹಿತ, ರವಿ ಪುರದ, ಪಂಚಾಕ್ಷರಿಗೌಡ ಪಾಟೀಲ, ಸೋಮಶೇಖರ ಕೋತಂಬರಿ, ಮಲ್ಲಿಕಾರ್ಜುನ ಅಗಡಿ, ಸೋಮನಗೌಡ ಪಾಟೀಲ, ಪ್ರಕಾಶ ನಂದಿಕೊಪ್ಪ, ಸಂಜಯ ಬೇದ್ರೆ, ಮಹೇಶ ಹರಿಜನ, ರವಿರಾಜ ಕಲಾಲ, ವಿನಾಯಕ ಕುರುಬರ, ಬಸವರಾಜ ಹಾದಿಮನಿ, ಚಂದ್ರಶೇಖರ ದೊಡ್ಡಮನಿ, ಕುಮಾರ ಚಿಕ್ಕಣ್ಣನವರ, ಓಂಕಾರ ಕಲಾಲ, ಅಮೋಘ ಕುಲಾಲ್, ಆನಂದ ಹವಳಣ್ಣನವರ, ನಾಗನಗೌಡ ಪಾಟೀಲ್, ಬಸವರಾಜ ಮಟ್ಟಿಮನಿ, ಬಸವರಾಜ ಸಾತಪತಿ, ಶಿವಯೋಗಿ ಪಾಟೀಲ್, ಪ್ರಶಾಂತ ಸಬರದ, ಯಲ್ಲಪ್ಪ ಮನಾಗೌಡರ, ಪ್ರವೀಣ್ ಸುಲಾಖೆ, ಅಜೇಯ ರೂಗಿಶೆಟ್ಟರ ಮುಂತಾದವರು ಪಾಲ್ಗೊಂಡಿದ್ದರು.ಪಟ್ಟಣದ ಕುಮಾರೇಶ್ವರ ಮಠದಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ನಂತರ ಪಕ್ಷದ ಕಚೇರಿಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ವೀರ ಯೋಧರಾದ ಸಂತೋಷ್ ಆರೇರ, ರಾಮನಗೌಡ ಪಾಟೀಲ್, ಕುಮಾರ ಯಳವಟ್ಟಿ, ಶಂಕರಗೌಡ ಪಾಟೀಲ್, ಜಗದೀಶ್ ಮಡಿವಾಳರ, ಅರುಣ್ ಮೆಳ್ಳಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.