ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ದೇಶದೊಳಗಿನ ಅವ್ಯವಸ್ಥೆ, ವಿದ್ವಂಸಕ ಕೃತ್ಯಗಳು, ಭ್ರಷ್ಟಾಚಾರವನ್ನು ಯುವ ಮತದಾರರು ಮತಪೆಟ್ಟಿಗೆಯಲ್ಲಿಯೇ ಹೊಸಕಿ ಹಾಕಬೇಕು ಎಂದು ಕರ್ನಾಟಕ ಉಚ್ಚ ನ್ಯಾಯ್ಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.ಐಹೊಳೆಯ ವಿ.ಮ. ಪ್ರೌಢಶಾಲೆಯಲ್ಲಿ ೧೯೯೧-೯೨ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಬಳಗದ ವತಿಯಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ನಿವೃತ್ತ ಸೇನಾಧಿಕಾರಿ ಕ್ಯಾ.ಅರ್ಜುನ್ ಕೋರಿ ಮಾತನಾಡಿ, ಅಪ್ಪನ ಹೆಗಲು ತಾಯಿಯ ಮಡಿಲ ಶ್ರೀರಕ್ಷೆಯಿಂದ ಅತ್ಯುನ್ನತ ಪದವಿಗೇರಲು ಸಾಧ್ಯವಾಯಿತು. ದೇಶದ ಬಗ್ಗೆ ಸೈನಿಕರಿಗಿರುವ ಕಿಚ್ಚು ದೇಶವಾಸಿಗಳಿಗೂ ಇರಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿ.ಮ.ವಿ.ವ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ, ರಾಜ್ಯ-ರಾಚ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸಂಗಣ್ಣ ಎಮ್ಮಿ, ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಡಾ.ಸಿದ್ದಪ್ಪ ಅಂಗಡಿ, ಡಾ.ವನಜಾಕ್ಷಿ ಬಿದರಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ನಾಗರಾಜ ಕುರಿ ಮಾತನಾಡಿದರು.
ಮುಖ್ಯಶಿಕ್ಷಕ ವೈ.ಕೆ.ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಿಸಿದ ಗುರುಗಳಾದ ಎ.ಎನ್. ಕುಡಕುಂಟಿ, ಸಂಗಣ್ಣ ಎಮ್ಮಿ, ಎಂ.ಬಿ. ದೇವರಡ್ಡಿ, ಆರ್.ಎಸ್. ಬ್ಯಾಳಿ, ಹಮೀದ್ ಫೀರಜಾದೆ ಮಕಾಂದಾರ, ಎಸ್.ಎಸ್. ಅಂಗಡಿ, ಎಸ್.ಬಿ. ತೆಗ್ಗಿ, ವಿ.ಆರ್. ಹಿರೇಮಠ, ಪರಸಪ್ಪ ಮಾದರ ಗೌರವವಂದನೆ ಸ್ವೀಕರಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಹಿರಿಯ ಕಲಾವಿದ ಬಸವಂತಪ್ಪ ದೇವೂರ, ಡಾ.ವಿರೂಪಾಕ್ಷಯ್ಯ ಯಾವಗಲ್ಮಠ ಹಾಗೂ ಆಡಳಿತಮಂಡಳಿ ನಿರ್ದೇಶಕರನ್ನು ಗೌರವಿಸಿ ಸತ್ಕರಿಸಲಾಯಿತು.
ಶಾಲೆಯ ಮಕ್ಕಳಿಂದ ಇಳಕಲ್ ತಾಲೂಕು ಕಜಾಪ ಅಧ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ ರಚಿಸಿದ ಮೌಡ್ಯಕ್ಕೆ ಕೊಡಲಿ ಪೆಟ್ಟು ಕಿರು ರೀಲ್ಸ್ ಮಾದರಿ ನಾಟಕ ಪ್ರದರ್ಶಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ವಿಜಯಮಹಾಂತ ತೀರ್ಥ ಶೀರೂರಿನ ಡಾ.ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರಾಮದ ಅಮರೇಗೌಡ ಗೌಡರ, ಮಾನನಗೌಡ ಗೌಡರ, ರಮೇಶ ಬಳೂಟಗಿ ಇತರರು ಭಾಗವಹಿಸಿದ್ದರು.ಇದಕ್ಕೂ ಮುನ್ನ ದುರ್ಗಾದೇವಲಯ ಪ್ರಾಂಗಣದಿಂದ ಆಹ್ವಾನಿತ ಗಣ್ಯರನ್ನು ಸಕಲ ವಾದ್ಯಮೇಳಗಳ ಮಧ್ಯೆ ಮರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಚೈತ್ರಾ ಸಂಗಡಿಗರು ಪ್ರಾರ್ಥಿಸಿದರು. ಚನಬಸಪ್ಪ ಲೆಕ್ಕಿಹಾಳ ಸ್ವಾಗತಿಸಿದರು. ಎಸ್.ಬಿ. ಹೊರಗಿನಮಠ ನಿರೂಪಿಸಿದರು. ಎಸ್.ಬಿ. ಗಡ್ಡಿ ವಂದಿಸಿದರು.
ಗುರು ತೋರಿದ ಅರಿವಿನಿಂದ ಸುಮ್ಮನೆ ಕೂಡದೇ ಪ್ರಾಮಾಣಿಕರು, ನಿವೃತ್ತ ಸೈನಿಕರು, ನ್ಯಾಯಾಧೀಶರು ಹಾಗೂ ಅಧಿಕಾರಿಗಳು ಚುನಾವಣೆಗೆ ಸ್ಪರ್ಧಿಸಿದರೆ ಮೌಲ್ಯಗಳನ್ನು ಅಪಮೌಲ್ಯಗೊಸುವ ವ್ಯವಸ್ಥೆಯನ್ನು ಸಂವಿಧಾನಾತ್ಮಕವಾಗಿ ಪ್ರಶ್ನಿಸಿ ದೇಶದ ಹಿತಾಸಕ್ತಿ ಕಾಯಲು ಸಾಧ್ಯ.
-ಅರಳಿ ನಾಗರಾಜ್ ವಿಶ್ರಾಂತ ನ್ಯಾಯಮೂರ್ತಿ;Resize=(128,128))
;Resize=(128,128))
;Resize=(128,128))