ಮುದಾಯದ ಹಿರಿಯರ ಸಹಕಾರದಿಂದ ವಿಶ್ವಕರ್ಮ ಸಮುದಾಯ ಭವನಕ್ಕೆ ನಿವೇಶನ ಪಡೆಯಲಾಗಿದೆ. ವಿಶ್ವಕರ್ಮ ಸಮುದಾಯ ಶಾಸಕರ ಬೆಂಬಲಕ್ಕೆ ನಿಂತಿದೆ. ಶಾಸಕರು ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಭವನ ನಿರ್ಮಾಣಕ್ಕೆ ನೆರವಾಗಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಣ್ಣ ಕೈಗಾರಿಕೆಗಳಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಹೇಮಾವತಿ ಬಡಾವಣೆಯ ಬಳಿ ವಿಶ್ವಕರ್ಮ ಸಮುದಾಯದ ನಿವೇಶನಕ್ಕೆ ಹಾಕಲಾಗಿರುವ ಕಾಂಪೌಂಡ್ ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಐಟಿಬಿಟಿ ಕ್ಷೇತ್ರದಿಂದ ಶೇ.15ರಷ್ಟು ಮಾತ್ರ ಕೊಡುಗೆ ಇದೆ. ಆದರೆ, ಸಣ್ಣ ಕೈಗಾರಿಕೆಗಳಿಂದ ದೇಶದ ಅಭಿವೃದ್ಧಿಗೆ ಶೇ.65ರಷ್ಟು ಕೊಡುಗೆ ಇದ್ದು, ಹಾಗಾಗಿ ಪ್ರತಿಯೊಬ್ಬರೂ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ/ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದ್ದು, ಹೊಸ ಹೊಸ ಉದ್ಯೋಗ ಸೃಷ್ಟಿಗೆ ಎಲ್ಲರೂ ಮುಂದಾಗಬೇಕು, ವಿಶ್ವಕರ್ಮ ಸಮುದಾಯ ಭವನ ಕಟ್ಟುವ ಬದಲು ವಿಶ್ವಕರ್ಮ ಸಮುದಾಯದ ವೃತ್ತಿಗೆ ಪೂರಕ ಉದ್ಯೋಗ ಸೃಷ್ಟಿಸಿಕೊಳ್ಳಲು ಯುವಕರಿಗೆ ತರಬೇತಿ ನೀಡಬೇಕು. ಆ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಬೇಕು. ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಸಮುದಾಯದ ಅಧ್ಯಕ್ಷ ಮಂಡಿಬೆಟ್ಟಹಳ್ಳಿ ಬಸವರಾಜು ಮಾತನಾಡಿ, ಸಮುದಾಯದ ಹಿರಿಯರ ಸಹಕಾರದಿಂದ ವಿಶ್ವಕರ್ಮ ಸಮುದಾಯ ಭವನಕ್ಕೆ ನಿವೇಶನ ಪಡೆಯಲಾಗಿದೆ. ವಿಶ್ವಕರ್ಮ ಸಮುದಾಯ ಶಾಸಕರ ಬೆಂಬಲಕ್ಕೆ ನಿಂತಿದೆ. ಶಾಸಕರು ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಭವನ ನಿರ್ಮಾಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಎನ್.ಬಸವರಾಜು, ಕಾರ್ಯದರ್ಶಿ ಶ್ರೀನಿವಾಸಾಚಾರ್, ಖಜಾಂಚಿ ಭಾಸ್ಕರಾಚಾರ್, ಸಮುದಾಯದ ಮುಖಂಡರಾದ ಬೆಟ್ಟಾಚಾರ್, ಆನಂದಾಚಾರ್, ಸಂಪತ್ತಾಚಾರ್, ಕೃಷ್ಣಾಚಾರ್, ರಾಜು, ಯೋಗರಾಜ್, ಡಿ.ಎ.ನಾಗರಾಜು, ಚಂದ್ರಶೇಖರ್, ಮಂಜಾಚಾರ್, ಮೋಹನ್ ಆಚಾರ್, ಶಿವು,ರಾಜು, ಸೀನಾಚಾರ್ ಸೇರಿದಂತೆ ಅನೇಕರು ಇದ್ದರು.