ಸಾರಾಂಶ
ಕುಷ್ಟಗಿ: 2047ರೊಳಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ತಾಲೂಕಿನ ಕಂದಕೂರು ಗ್ರಾಮದಲ್ಲಿ ವಿಕಸಿತ ಭಾರತ ನಮ್ಮ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಸಾಧನೆಗಳು ಜನಪರವಾಗಿದ್ದು, ಈಗ ಎಲ್ಲರ ಬಾಯಿಯಲ್ಲೂ ಮೋದಿ ಹೆಸರು ಕೇಳಿ ಬರುತ್ತಿದೆ. ಜನಪರ ಯೋಜನೆಯಾದ ಜನಧನ ಯೋಜನೆಯ ಮೂಲಕ ದೇಶದ ಜನರ ಉಳಿತಾಯ ಖಾತೆಯನ್ನು ಮಾಡಿಸುವ ಮೂಲಕ ಸರ್ಕಾರದಿಂದ ಬರುವ ಹಣವನ್ನು ನೇರವಾಗಿ ಜಮಾ ಮಾಡುವಂತೆ ಮಾಡಿದ ಕೀರ್ತಿ ಇವರದ್ದಾಗಿದೆ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಕೆಲಸ ಮಾಡಬೇಕಾಗಿದೆ ಎಂದರು.ಸಂಸದ ಕರಡಿ ಸಂಗಣ್ಣ ಕುಷ್ಟಗಿಗೆ ರೈಲು ಯೋಜನೆ ವಿಸ್ತರಿಸಲು ಶ್ರಮ ಪಟ್ಟಿದ್ದಾರೆ. ಕುಷ್ಟಗಿ ಮೇಲ್ಸೇತುವೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅವರು ಅನೇಕ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದ್ದಾರೆ ಎಂದರು.ಸಂಸದ ಸಂಗಣ್ಣ ಕರಡಿ ಮಾತನಾಡಿ, ಎಲ್ಲರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಸುಮಾರು 65 ವರ್ಷ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದರೂ ನಮ್ಮ ದೇಶವು ಅಭಿವೃದ್ಧಿಯ ಸಾಲಿನಲ್ಲಿ ನಿಲ್ಲಲಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗುಜರಾತ ಅಭಿವೃದ್ಧಿಯನ್ನು ನೋಡಿಕೊಂಡು ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ತೀರ್ಮಾನಿಸಲಾಯಿತು. ಅದಕ್ಕೆ ತಕ್ಕಂತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದ ಕೀರ್ತಿ ದೇಶದ ಜನತೆಗೆ ಸಲ್ಲುತ್ತದೆ ಎಂದರು.ಒಂದು ಕಪ್ಪುಚಿಕ್ಕೆ ಬಾರದಂತೆ ಅಧಿಕಾರ ನಡೆಸಿದ್ದಾರೆ. ಕೋರೊನ ಸಂದರ್ಭದಲ್ಲಿ ಆರು ತಿಂಗಳ ಅವಧಿಯಲ್ಲೆ ಲಸಿಕೆ ಕಂಡು ಹಿಡಿದು ಕೋಟ್ಯಂತರ ಜನರನ್ನು ಉಳಿಸುವ ಕೆಲಸ ಮಾಡಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಬಸವರಾಜ ಹಳ್ಳೂರು, ಜಿ.ಕೆ. ಹಿರೇಮಠ, ಶಂಕ್ರಪ್ಪ ಸಂಕೀನ್, ಶರಣಪ್ಪ ಹೊಸಳ್ಳಿ, ಸಲೀಮಸಾಬ ಟೆಂಗುಂಟಿ, ಮಂಜುನಾಥ ಸಂಕಿನ್, ಕಂದಕೂರಪ್ಪ ವಾಲ್ಮೀಕಿ, ಶರಣಪ್ಪ ಕುರ್ನಾಳ, ಆಂಜನೇಯ ಹಾದಿಮನಿ, ಶರಣಪ್ಪ, ಭೀಮಣ್ಣ ಬಿಜಕಲ್, ಮೌನೇಶ ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))