ಶ್ರೀರಾಮ ಕಟೌಟ್ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

| Published : Jan 23 2024, 01:48 AM IST

ಶ್ರೀರಾಮ ಕಟೌಟ್ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಬಿ ಬಡಾವಣೆಯ ನಿವಾಸಿ ರೋಹಿತ್ ಹಾಗೂ ಅರ್ಪಿತಾ ತಮ್ಮ ಮದುವೆ ಮಂಟಪದಲ್ಲೇ ಶ್ರೀ ವಿಘ್ನೇಶ್ವರನ ಜೊತೆಗೆ ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ಪ್ರಭು ಶ್ರೀರಾಮಚಂದ್ರನ ಕಟೌಟ್ ಎದುರು ದಾಂಪತ್ಯ ಜೀವನಕ್ಕೆ ಅಡಿ ಇಡುವ ಮೂಲಕ ಮಂದಿರ ಉದ್ಘಾಟನೆಯಾಗುತ್ತಿದ್ದಂತೆ ಜೈ ಶ್ರೀರಾಮ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ, ಪುಷ್ಪಾರ್ಚನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠೆ ಹಾಗೂ ಶ್ರೀರಾಮ ಮಂದಿರ ಉದ್ಘಾಟನೆ ದಿನದಂದೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಮನೆಯಲ್ಲಿ ತಮ್ಮ ಕುಟುಂಬಗಳ ಮದುವೆ ಸಂಭ್ರಮದ ಜೊತೆಗೆ ಮಂದಿರ ಉದ್ಘಾಟನೆ ಸಂಭ್ರಮದಲ್ಲಿ ಇಡೀ ಕಲ್ಯಾಣ ಮಂಟಪದಲ್ಲಿ ಸೇರಿದ್ದ ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು ಭಾವುಕರಾದ ಘಟನೆ ನಗರದಲ್ಲಿ ಸೋಮವಾರ ನಡೆಯಿತು.

ನಗರದ ಬಾಪೂಜಿ ಸಮುದಾಯ ಭ‍ವನದಲ್ಲಿ ಸೋಮವಾರ ಇಲ್ಲಿನ ಕೆಬಿ ಬಡಾವಣೆಯ ನಿವಾಸಿ ರೋಹಿತ್ ಹಾಗೂ ಅರ್ಪಿತಾ ತಮ್ಮ ಮದುವೆ ಮಂಟಪದಲ್ಲೇ ಶ್ರೀ ವಿಘ್ನೇಶ್ವರನ ಜೊತೆಗೆ ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ಪ್ರಭು ಶ್ರೀರಾಮಚಂದ್ರನ ಕಟೌಟ್ ಎದುರು ದಾಂಪತ್ಯ ಜೀವನಕ್ಕೆ ಅಡಿ ಇಡುವ ಮೂಲಕ ಮಂದಿರ ಉದ್ಘಾಟನೆಯಾಗುತ್ತಿದ್ದಂತೆ ಜೈ ಶ್ರೀರಾಮ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ, ಪುಷ್ಪಾರ್ಚನೆ ಸಲ್ಲಿಸಿದರು.

ಮಂದಿರ ಉದ್ಘಾಟನೆ, ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನವೇ ತಮ್ಮ ಮದುವೆಯಾಗಿದ್ದಕ್ಕೆ ಸಂಭ್ರಮದಲ್ಲಿದ್ದ ತೇಲುತ್ತಿದ್ದ ರೋಹಿತ್‌, ಅರ್ಪಿತಾ ಜೋಡಿಗೆ ಶುಭ ಮುಹೂರ್ತದಲ್ಲಿ ತಾಳಿ ಕಟ್ಟಿ, ಶ್ರೀ ವಿಘ್ನೇಶ್ವರ, ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಪಡೆದರು.

ಪೂರ್ವಜನ್ಮದ ಪುಣ್ಯ:

ಈ ವೇಳೆ ಮಾತನಾಡಿದ ರೋಹಿತ್‌, ಅರ್ಪಿತಾ ಜೋಡಿ, ಪ್ರಭು ಶ್ರೀರಾಮ ಮಂದಿರದ ದಿನವೇ ನಮ್ಮ ಮದುವೆಯಾಗಿದ್ದು ಪೂರ್ವಜನ್ಮದ ಪುಣ್ಯ. ಸೌಭಾಗ್ಯ ಇದಾಗಿದೆ. ಇಡೀ ಮದುವೆ ಮನೆಯಲ್ಲಿ ಸುಮಾರು ಹೊತ್ತು ಜೈ ಶ್ರೀರಾಮ ಜೈ ಶ್ರೀರಾಮ್‌ ಘೋಷಣೆಗಳು ಕಲ್ಯಾಣ ಮಂಟಪದಲ್ಲಿ ಮೊಳಗಿದವು.