ವಿಜಯಪುರ: ನಗರದ ರಿಂಗ್‌ರೋಡ್ ಬಳಿ ಅಲಕುಂಟೆ ನಗರದಲ್ಲಿ 2024ರ ಅಗಸ್ಟ್ 31ರಂದು ಅಪಘಾತಪಡಿಸಿ ಕಾರು ಚಾಲಕ ಅದ್ವೀಕ ರಾಠೋಡ ಸಾವಿಗೆ ಕಾರಣನಾದ ಅಪರಾಧಿ ವಿನೂತ ಶಂಕರ ಪಾತ್ರೋಟಗೆ 2 ವರ್ಷ ಸಾದಾ ಕಾರಾವಾಸ ಶಿಕ್ಷೆ ಹಾಗೂ ₹21 ಸಾವಿರ ದಂಡ ಹಾಗೂ ಮೃತನ ಕುಟುಂಬಕ್ಕೆ ₹20,000 ಪರಿಹಾರ ವಿಧಿಸಿ 4ನೇ ಅಧಿಕ ಸಿ.ಜೆ (ಹಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶಿಸಿದೆ.
ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪಿಐ ಪಾಟೀಲ.ಎಸ್.ಪಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 4ನೇ ಅಧಿಕ ಸಿ.ಜೆ (ಹಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಸಮೀರ್ ಕೊಳ್ಳಿ ಶಿಕ್ಷೆ ನೀಡಿ ಆದೇಶಿಸಿದ್ಧಾರೆ. ಅಭಿಯೋಗದ ಸಹಾಯಕ ಸರ್ಕಾರಿ ಅಭಿಯೋಜಕಿ ವಿಜಯಲಕ್ಷ್ಮಿ ಅಥರ್ಗಾ ವಾದ ಮಂಡಿಸಿದ್ದರು. ಸಿಬ್ಬಂದಿ ಶ್ರೀಶೈಲ ಅನಂತಗೋಳ ನ್ಯಾಯಾಲಯಕ್ಕೆ ಸಾಕ್ಷಿದಾರರಿಗೆ ಹಾಜರಪಡಿಸಿದ್ದರು.ಅಪಘಾತಪಡಿಸಿದ್ದ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ
ವಿಜಯಪುರ: ನಗರದ ರಿಂಗ್‌ರೋಡ್ ಬಳಿ ಅಲಕುಂಟೆ ನಗರದಲ್ಲಿ 2024ರ ಅಗಸ್ಟ್ 31ರಂದು ಅಪಘಾತಪಡಿಸಿ ಕಾರು ಚಾಲಕ ಸಾವಿಗೆ ಕಾರಣನಾದ ಅಪರಾಧಿಗೆ 2 ವರ್ಷ ಸಾದಾ ಕಾರಾವಾಸ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿ 4ನೇ ಅಧಿಕ ಸಿ.ಜೆ (ಹಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶಿಸಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
