ಸಾರಾಂಶ
ಪ್ರಜಾಪ್ರಭುತ್ವವನ್ನು ಒಪ್ಪಿ ಒಕ್ಕೂಟ ರಾಷ್ಟ್ರವಾದಾಗ ನಮಗೆ ನಿಜವಾದ ಸ್ವಾತಂತ್ರ ಲಭಿಸಿ ಇಂದು ದೇಶ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಇರುವುದು ನಮ್ಮೆಲ್ಲರ ಹೆಮ್ಮೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ದೇಶವು ರಾಜತ್ವದಿಂದ ಪ್ರಜಾಪ್ರಭುತ್ವದ ಎಡೆಗೆ ಬದಲಾವಣೆ ಕಂಡಂತಹ ದಿವಸವನ್ನು ನಾವು ಗಣರಾಜ್ಯೋತ್ಸವ ಎಂಬುದಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕನ್ನಿಕಾ ವಿದ್ಯಾಪೀಠ ಶಾಲೆಯ ಅಧ್ಯಕ್ಷ ಎಂ.ಜಿ ಸುಧೀರ್ ತಿಳಿಸಿದರು.ಪಟ್ಟಣದ ಕನ್ನಿಕಾ ವಿದ್ಯಾಪೀಠ ಶಾಲೆಯಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಬ್ರಿಟಿಷರು ನಮಗೆ ಆಗಸ್ಟ್ 15ರಂದು ಸ್ವತಂತ್ರ ನೀಡಿದರೂ ಸಹ ನಮಗೆ ಸಂವಿಧಾನ ಅಸ್ತಿತ್ವಕ್ಕೆ ಬಂದು ನಾವೆಲ್ಲರೂ ಭಾರತೀಯರು ಎನ್ನುವ ಪ್ರಜಾಪ್ರಭುತ್ವವನ್ನು ಒಪ್ಪಿ ಒಕ್ಕೂಟ ರಾಷ್ಟ್ರವಾದಾಗ ನಮಗೆ ನಿಜವಾದ ಸ್ವಾತಂತ್ರ ಲಭಿಸಿ ಇಂದು ದೇಶ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಇರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ವಾಸವಿ ಯೋಜನೆ ಸಂಘದ ಅಧ್ಯಕ್ಷ ಕೆ.ಎಸ್. ದಿನೇಶ್, ಸಂಸ್ಥೆಯ ಕಾರ್ಯದರ್ಶಿ ಕೆಎಸ್‌ವಿ ರಘು, ಸಹ ಕಾರ್ಯದರ್ಶಿ ಲಕ್ಷ್ಮಿ ಪ್ರಸಾದ್ ಜಿ., ಖಜಾಂಚಿ ರಾಧಾಕೃಷ್ಟ್ರ, ಮುಖ್ಯ ಶಿಕ್ಷಕ ರಾಘವೇಂದ್ರ ಡಿಎಂ, ಶಿಕ್ಷಕಿರಾದ ಉಮಾದೇವಿ, ಭಾರತಿ, ಅಶ್ವಿನಿ, ನೇತ್ರಾವತಿ, ಸುಜಾತ ಹಿಮಾ, ಅನ್ನಪೂರ್ಣ, ಮಮತಾ, ಬೀಬಿ ಅಯಿಷಾ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.(ಚಿತ್ರ ಇದೆ)೨೬ ಕೊರಟಗೆರೆ ಚಿತ್ರ ೦೧;- ಕೊರಟಗೆರೆ ಪಟ್ಟಣದ ಕನ್ನಿಕಾ ವಿದ್ಯಾಪೀಠ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.